ಈ ದೇವಸ್ಥಾನದಲ್ಲಿ ಇನ್ನುಮುಂದೆ ಮೀನುಗಳಿಗೆ ಅರಳು ಹಾಕುವ ಹಾಗಿಲ್ಲ! ಯಾವ ದೇವಸ್ಥಾನ? ಕಾರಣ ಏನು?
ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಶ್ರೀಶಿಶಿಲೇಶ್ವರ ದೇವಾಲಯವು ಅಲ್ಲಿನ ದೇವರು ಮೀನುಗಳಿಂದಾಗಿ ಮತ್ಸ್ಯತೀರ್ಥ ಕ್ಷೇತ್ರ ಎಂದೇ ಪ್ರಸಿದ್ಧಿ ಹೊಂದಿದೆ. ಇದೀಗ ಅಲ್ಲಿ ಹರಿಯುವ ಕಪಿಲಾ ನದಿ ಬತ್ತಿ ಹೋಗುತ್ತಾ ಬಂದಿರುವುದು ಬೇಸರದ ಸಂಗತಿ. ಇದರಿಂದಾಗಿ ಮೀನುಗಳಿಗೆ ಅರಳು ಎಸೆಯುವುದನ್ನ ದೇವಸ್ಥಾನದ ಆಡಳಿತ ಮಂಡಳಿ ನಿಷೇಧಿಸಿದೆ.
ಇಲ್ಲಿಗೆ ಆಗಮಿಸುವ ಭಕ್ತರು ದೇವರ ಮೀನುಗಳಿಗೆ ಅರಳು ಹಾಕುವ ಹರಕೆಯನ್ನು ನೆರವೇರಿಸುವುದು ಇಲ್ಲಿಯ ವಿಶೇಷ. ನದಿಯಲ್ಲಿ ನೀರಿನ ಪ್ರಮಾಣ ಕಮ್ಮಿ ಆಗಿದ್ದು, ಮೀನುಗಳಿಗೆ ಅತಿಯಾದ ಆಹಾರ ಹಾಕುವುದರಿಂದ ನೀರು ಕಲುಷಿತವಾಗಿ ಮೀನುಗಳಿಗೆ ತೊಂದರೆಯಾಗಿದೆ. ದೇವಾಲಯ ಆಡಳಿತ ಮಂಡಳಿ, ಭಕ್ತರು ಮೀನುಗಳಿಗೆ ಅರಳು ಹಾಕುವುದನ್ನು ನಿಷೇಧಿಸಿದೆ.
ಹಿಂದಿನ ಪರಂಪರೆಯಂತೆ ಬಿಳಿ ಅಕ್ಕಿಯನ್ನು ಅಗತ್ಯ ಕಂಡುಬಂದಲ್ಲಿಅಲ್ಪ ಪ್ರಮಾಣದಲ್ಲಿ ಹಾಕಬಹುದು ಹಾಗೂ ಇತರೆ ಯಾವುದೇ ತಿಂಡಿಯನ್ನು ಹಾಕಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಮುಂದಿನ ಆದೇಶದ ತನಕ ಈ ನಿಯಮ ಪಾಲಿಸಲೇಬೇಕು.