• November 21, 2024

ಫೆ.27ರಿಂದ ಗುರುವಾಯನಕೆರೆ ರತ್ನಗಿರಿ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್‌ ಪ್ರತಿಷ್ಠಾ ಮಹೋತ್ಸವ, ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಪರ್ವ 2024

 ಫೆ.27ರಿಂದ ಗುರುವಾಯನಕೆರೆ ರತ್ನಗಿರಿ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್‌ ಪ್ರತಿಷ್ಠಾ ಮಹೋತ್ಸವ, ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಪರ್ವ 2024

 


ಬೆಳ್ತಂಗಡಿ: ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ, ತುಳುನಾಡ ದೈವಾರಾಧಕರ ಮಹಾಸಮ್ಮೇಳನ ಫೆ.27 ರಿಂದ ಮಾರ್ಚ್ 2 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದ್ದಾರೆ

ಫೆ.27ರಂದು ಹಸಿರುವಾಣಿ ಸಮರ್ಪಣಾ ಮೆರವಣಿಗೆ, ತಾಲೂಕಿನ ವಿವಿಧ ಭಜನಾ ತಂಡಗಳ ಭಜನಾ ಮಂಗಳೋತ್ಸವ, ದೈವಾರಾಧಕರ ಮಹಾ ಸಮ್ಮೇಳನ ಪರ್ವ 2024ರ ಉದ್ಘಾಟನೆ ನಡೆಯಲಿದೆ.

ಫೆ.28ರಂದು ದೈವಾರಾಧಕರ ವಿಚಾರ ಸಂಕೀರಣ, ಸಂಜೆ ದೈವನರ್ತಕರ ಸಮ್ಮೇಳನ, ಫೆ.29 ರಂದು ದೈವ ಪರಿಚಾರಕರ ಸಮ್ಮೇಳನ, ಮಾ.1ರಂದು ದೈವಸ್ಥಾನಗಳ ಮುಖ್ಯಸ್ಥರ ಸಮ್ಮೇಳನ, ಫೆ.2ರಂದು ಸನ್ಯಾಸಿ ಗುಳಿಗದೈವದ ವರ್ಷಾವಧಿ ನೆಮೋತ್ಸವ, ದೈವಾರಾಧನೆ ವಿಚಾರ ಕುರಿತು ಸ್ಪರ್ಧೆಗಳು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದೈವಾರಾಧಕಾರ, ನರ್ತಕರ, ಪರಿಚಾರಕರನ್ನು ಗುರುತಿಸಿ ಗೌರವಿಸಲಾಗುವುದು.ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ವೇಳೆ ಸಮಿತಿಯ ಕಾರ್ಯಧ್ಯಕ್ಷ ವಿಶ್ವೇಶ ಕಿಣಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾಮತ್ ಮಂದಾರಗಿರಿ, ಸಲಹೆಗಾರರಾದ ಆನಂದ ಕೋಟ್ಯಾನ್, ರವಿ ಪೂಜಾರಿ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!