ಅಂತರ್ ರಾಜ್ಯಮಟ್ಟದ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ” ಸಾಧನ ಶ್ರೀ ಪ್ರಶಸ್ತಿ” ಮುಡಿಗೇರಿಸಿಕೊಂಡ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ
ರಾಯಚೂರು: ಫೆ.18 ರಂದು ರಾಯಚೂರಿನ ರಂಗಮಂದಿರದಲ್ಲಿ ಬೆಳಕು ಸಾಹಿತ್ಯ ಶೈಕ್ಷಣಿಕ , ಸಾಂಸ್ಕೃತಿಕ ಟ್ರಸ್ಟ್(ರಿ) ವತಿಯಿಂದ ನಡೆದ ಅಂತರ್ ರಾಜ್ಯಮಟ್ಟದ ಬೆಳಕು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಕಡಬದ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ ಅವರು “ಸಾಧನ ಶ್ರೀ ಪ್ರಶಸ್ತಿ” ಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗಾಗಿ ಹಾಗೂ ಬೆಳಕು ಸಾಹಿತ್ಯ ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್(ರಿ) ಆಯೋಜಿಸಲಾಗಿದ್ದ ಪುಸ್ತಕ ಕೊಂಡು ಓದಿ ಅಭಿಯಾನದ ” ಬೆಳಕು ತೋರಣ” ಕವನ ಸಂಕಲನದಲ್ಲಿ ಇವರ ಕವನ ಆಯ್ಕೆಯಾಗಿ ಪ್ರಕಟಗೊಂಡಿರುವುದರಿಂದ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇವರು ಕಡಬದ ಚಾರ್ವಾಕ ಗ್ರಾಮದ ಪಾಲ್ತಿಲದ ಕುಮಾರ ಹಾಗೂ ಸರೋಜಿನಿ ದಂಪತಿಯ ಪುತ್ರ.