ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ : ಶಾಂಭವಿ ಸಿ ತಂಡದ ಚೆನ್ನಮ್ಮ ಖಂಡಿಗ ಅವರಿಗೆ ಗೌರವ

ಬಂದಾರು. ಫೆ 18 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೈರೋಳ್ತಡ್ಕ ಕಾರ್ಯಕ್ಷೇತ್ರದ ಶಾಂಭವಿ ಜ್ಞಾನವಿಕಾಸ ಆರಂಭವಾಗಿ 25ವರ್ಷ ಗಳಾಗಿದ್ದು, ಶಾಂಭವಿ ಸಿ ತಂಡದ ಚೆನ್ನಮ್ಮ ಖಂಡಿಗ ರವರು ಈ ಕೇಂದ್ರದ 74ವರ್ಷ ಪೂರೈಸಿದ ಕ್ರಿಯಾಶೀಲ, ಸಕ್ರಿಯ ಸದಸ್ಯೆ ಯಾಗಿರುತ್ತಾರೆ.
ಇವರನ್ನು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಸಭಾಭವನದಲ್ಲಿ ನಡೆದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ದಲ್ಲಿ ಇವರನ್ನು ಗುರುತಿಸಿ ಗೌರವಿಸಲಾಯಿತು.