• June 13, 2024

ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ ನಿಂದ ಸನಾತನ ಸಂಸ್ಥೆಗೆ ‘ಪಿಲ್ಲರ್ಸ್ ಆಫ್ ಹಿಂದುತ್ವ’ ಪ್ರಶಸ್ತಿ ಪ್ರಧಾನ !

ಡೆಹ್ರಾಡೂನ್ – ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್ ನಿಂದ ದೇಶಾದ್ಯಂತದಲ್ಲಿ ಇರುವ ಸಾಂಸ್ಕೃತಿಕ, ಸಾಮಾಜಿಕ ಮತ್ತು ಹಿಂದುತ್ವದ ಕ್ಷೇತ್ರದಲ್ಲಿ ಸಮರ್ಪಣಾ ಭಾವದಿಂದ ಉಲ್ಲೇಖನೀಯ ಕಾರ್ಯ ಮಾಡುವ ಗಣ್ಯರಿಗೆ ಮತ್ತು ಸಂಸ್ಥೆಗಳಿಗೆ ಗೌರವಿಸಿದರು.

ಈ ಸಮಾರಂಭದಲ್ಲಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಾದ ಶ್ರೀ. ಭಗತ ಸಿಂಹ ಕೋಶ್ಯಾರಿ ಇವರಿಂದ ಸನಾತನ ಸಂಸ್ಥೆಗೆ ‘ಪಿಲ್ಲರ್ಸ್ ಆಫ್ ಹಿಂದುತ್ವ’ ಪ್ರಶಸ್ತಿ ನೀಡಿ ಗೌರವಿಸಿದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು ಈ ಪ್ರಶಸ್ತಿ ಸ್ವೀಕರಿಸಿದರು. ಈ ಸಮಾರಂಭ ಡೆಹರಾಡೂನ (ಉತ್ತರಖಂಡ) ನ ಸಾಂಸ್ಕೃತಿಕ ವಿಭಾಗದ ಆಡಿಟೋರಿಯಂನಲ್ಲಿ ನಡೆಯಿತು. ಈ ಸಮಯದಲ್ಲಿ ದೇವಭೂಮಿ ರತ್ನ ಪ್ರಶಸ್ತಿ ಮತ್ತು ಪಿಲ್ಲರ್ಸ್ ಆಫ್ ಹಿಂದುತ್ವ ಪ್ರಶಸ್ತಿ ವಿತರಣೆ ಮಾಡಿದರು. ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್ ನ ಅಧ್ಯಕ್ಷ ಡಾ. ವೈದೇಹಿ ತಾಮ್ಹಣಜಿ ಇವರು ಈ ಕಾರ್ಯಕ್ರಮದ ಆಯೋಜನೆ ಮಾಡಿದ್ದರು.

ಶ್ರೀ. ಅಭಯ ವರ್ತಕ ಫೌಂಡೇಶನ್ ಗೆ ಧನ್ಯವಾದ ಸಲ್ಲಿಸಿ ಸನಾತನ ಸಂಸ್ಥೆಯು ಸಂತರ ಮಾರ್ಗದರ್ಶನದಿಂದ ಅಧ್ಯಾತ್ಮದಲ್ಲಿ ಆಳವಾದ ಸಂಶೋಧನಾ ಕಾರ್ಯ ಮಾಡುತ್ತಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಅಧ್ಯಾತ್ಮದ ವಿವಿಧ ವಿಷಯದ ಕುರಿತು 364 ಕಿಂತಲೂ ಹೆಚ್ಚಿನ ಗ್ರಂಥಗಳನ್ನು 13 ಭಾಷೆಗಳಲ್ಲಿ ಪ್ರಕಾಶನಗೊಳಿಸಿದ್ದಾರೆ. ಈ ಮೂಲಕ ಮುಂದಿನ ಪೀಳಿಗೆಗೆ ಸುಸಂಸ್ಕಾರ ನೀಡಲು ನಮ್ಮಲ್ಲಿ ಸಂಪೂರ್ಣ ಸಿಲೆಬಸ್ ತಯಾರಿದೆ ಎಂದರು. ಕೊನೆಯಲ್ಲಿ ಗಣ್ಯರನ್ನು ಅವರು ಸನಾತನ ಆಶ್ರಮಕ್ಕೆ ಭೇಟಿ ನೀಡಿ ಅಧ್ಯಾತ್ಮದ ಕುರಿತಾದ ನಡೆಯುತ್ತಿರುವ ಶೋಧಕಾರ್ಯದ ಅವಶ್ಯ ಲಾಭ ಪಡೆಯಿರಿ ಎಂದು ಸ್ವಾಗತಿಸಿದರು.

ಡಾ. ಭಗತಸಿಂಹ ಕೋಶ್ಯಾರಿ ಇವರು ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್ ಮತ್ತು ಅದರ ಅಧ್ಯಕ್ಷೆ ಡಾ. ವೈದೇಹಿ ತಾಮ್ಹಣ ಇವರ ಬಗ್ಗೆ ಮಾತನಾಡಿ, ಭಾರತಾದ್ಯಂತ ಇರುವ ವಿವಿಧ ರಾಜ್ಯಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಹಿಂದುತ್ವ ಕ್ಷೇತ್ರದಲ್ಲಿನ ಗಣ್ಯರನ್ನು ಆಯ್ದು ಅವರನ್ನು ಗೌರವಿಸಲು ವ್ಯಾಪಕ ಶೋಧಕಾರ್ಯದ ಅವಶ್ಯಕತೆ ಇರುತ್ತದೆ. ಅಂತಹ ಶೋಧ ಕಾರ್ಯ ನಡೆಸಿ ಅವರಿಗೆ ಸತ್ಕರಿಸುತ್ತಿರುವ ಈ ಕಾರ್ಯ ಸ್ತುತ್ಯಾರ್ಹವಾಗಿದೆ. ಇಂದಿನ ಕಾಲದಲ್ಲಿ ಅವರ ರೀತಿಯಲ್ಲಿ ವೇದಗಳ ಶಿಕ್ಷಣ ನೀಡುವ ಅನೇಕ ಸಂಸ್ಥೆಗಳ ಅವಶ್ಯಕತೆ ಇದೆ ಎಂದರು.

ಈ ಸಮಾರಂಭದಲ್ಲಿ ಶ್ರೀ. ಭಗತ ಸಿಂಹ ಕೊಶ್ಯಾರಿ ಇವರ ಜೊತೆಗೆ ಶ್ರೀ. ಸತಪಾಲ ಮಹಾರಾಜ, ಶ್ರೀ. ತೀರಥ ಸಿಂಹ ರಾವತ, ಶ್ರೀ. ಹರಿ ಚೈತನ್ಯ ಪುರಿ ಮಹಾರಾಜ, ಡಾ. ಉಮಾಕಾನಂದ ಸರಸ್ವತಿ ಮಹಾರಾಜ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಈ ಸಮಯದಲ್ಲಿ ಶ್ರೀ. ಸತಪಾಲ ಮಹಾರಾಜ, ಶ್ರೀ. ಚಂಡಿ ಪ್ರಸಾದ ಭಟ, ಸ್ವಾಮಿ ದಿನೇಶಾನಂದ ಭಾರತಿ, ಮಧು ಭಟ, ಕುಸುಮ ಖಂಡವಾಲ, ಊರ್ಮಿ ನೇಗಿ, ಐ.ಎ.ಎಸ್. ಡಾ. ಆಶೀಷ ಚೌಹಾನ, ಕರ್ನಲ್ ಡಿ.ಎಸ್. ಬರ್ತವಾಲ, ಡಾ. ಯಶವೀರ ಸಿಂಹ ಮತ್ತು ಲೆಫ್ಟಿನೆಂಟ್ ಜನರಲ್ ಜಯವೀರ ಸಿಂಹ ನೇಗಿ ಈ ಗಣ್ಯರಿಗೆ ದೇವಭೂಮಿ ರತ್ನ ಪ್ರಶಸ್ತಿ ನೀಡಿದರು. ಇದರ ಜೊತೆಗೆ ಸನಾತನ ಸಂಸ್ಥೆ ಸಹಿತ ಸ್ವಾಮಿ ಶ್ರೀ. ಹರಿ ಚೈತನ್ಯ ಮಹಾರಾಜ, ಭಾಜಪದ ಸಂಸದ ಶ್ರೀ. ಗೋಪಾಲ ಶೆಟ್ಟಿ, ಶ್ರೀ. ಗೋಲಂದೇ ಮಹಾರಾಜ, ಶ್ರೀ. ಉದ್ಬೋದ ಮಹಾರಾಜ ಪೈಠಣಕರ, ಶ್ರೀ. ಅತೂಲ ಜೇಸವಾನಿ, ಶ್ರೀ. ಪ್ರದೋಷ ಚೌಹಾಣ್ಕೆ, ಗೀತಾ ಪ್ರೆಸ್ ಮತ್ತು ಕೂರ್ಮ ಗ್ರಾಮ ಆಶ್ರಮಕ್ಕೆ
ಪಿಲರ್ಸ್ ಆಫ್ ಹಿಂದುತ್ವ ಪ್ರಶಸ್ತಿ ನೀಡಿ ಗೌರವಿಸಿದರು .

Related post

Leave a Reply

Your email address will not be published. Required fields are marked *

error: Content is protected !!