ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ “ಅನಿಮಲ್ ಫಾರ್ಮ್”ಎಂಬ ಚಲನ ಚಿತ್ರ ಪ್ರದರ್ಶನ

ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷೆಯ ವಿಭಾಗದಿಂದ ಜಾರ್ಜ್ ಒರ್ವೆಲ್ ಅವರ ಕಾದಂಬರಿ ,ಆಧಾರಿತ “ಅನಿಮಲ್ ಫಾರ್ಮ್”ಎಂಬ ಚಲನ ಚಿತ್ರ ಪ್ರದರ್ಶನ ದಿನಾಂಕ 28 ಫೆಬ್ರವರಿ 2025 ರಂದು ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ| ಸವಿತಾ ಹಾಗೂ ವಾಣಿಜ್ಯ ಶಾಸ್ತ್ರ ಮುಖ್ಯಸ್ಥರಾದ ಬಿ ಎ ಶಮಿಯುಲ್ಲ ವೇದಿಕೆಯಲ್ಲಿ ಇದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆಂಗ್ಲ ಭಾಷಾ ಉಪನ್ಯಾಸಕರಾದ ಸುಜಿತ್ ಸ್ವಾಗತಿಸಿದರು.