ರಾಷ್ಟ್ರಮಟ್ಟದ ರಾಮನ್ ಯುಂಗ್ ಸೈಂಟಿಸ್ಟ್ ಇನ್ನೋವೇಟರ್ ಅವಾರ್ಡ್ ಸ್ಪರ್ಧೆ : ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ
ಬೆಂಗಳೂರಿನ ಸರ್ ಸಿ.ವಿ ರಾಮನ್ ರಿಸರ್ಚ್ ಇನಸ್ಟಿಟ್ಯೂಟ್ ನಡೆಸಿದ ರಾಷ್ಟ್ರ ಮಟ್ಟದ ವಿಜ್ಞಾನ ಸ್ಪರ್ಧೆಯ 3ನೇ ಸುತ್ತಿನಲ್ಲಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಅಧಿಶ್ ಬಿ. ಸಿ ಪ್ರಶಂಸಾ ಪ್ರಮಾಣಪತ್ರ ಪಡೆದಿದ್ದಾರೆ.
ಸ್ಪರ್ಧೆಯ ಪ್ರಾಥಮಿಕ ಹಂತದ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ಅಧಿಶ್ ಬಿ.ಸಿ,. ಎರಡನೆಯ ಸುತ್ತಿಗೆ ಅರ್ಹತೆ ಪಡೆದು ತನ್ನ ಪ್ರಯೋಗವನ್ನು ಮಂಡಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ರಾಷ್ಟ್ರಮಟ್ಟದ ಸ್ಪರ್ಧೆಯು ಬೆಂಗಳೂರಿನ ಸರ್ ಸಿ.ವಿ.ರಾಮನ್ ರವರ ಮನೆಯ ಆವರಣವಾದ ಪಂಚವಟಿಯಲ್ಲಿ ಫೆಬ್ರವರಿ 3 ಮತ್ತು 4ರಂದು ನಡೆದಿದ್ದು. ವಿದ್ಯಾರ್ಥಿಯು ವಿಜ್ಞಾನ ಚಟುವಟಿಕೆ ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ಮೊದಲಾದ ಹಂತಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ.
ವಿದ್ಯಾರ್ಥಿಗೆ ಪ್ರಮಾಣಪತ್ರ ಹಾಗೂ ಎಕ್ಸ್ಪರಿಮೆಂಟ್ ಕಿಟ್ ನೀಡುವುದರೊಂದಿಗೆ ವಿಜ್ಞಾನಿಗಳು ಅಭಿನಂದಿ ಸಿರುತ್ತಾರೆ. ಇವರಿಗೆ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಧನ್ಯವತಿ ಇವರು ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮೀ ಎನ್. ನಾಯಕ್ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.