• September 8, 2024

ಮೊಗ್ರು: ಜ.13 ರಂದು ಕ್ಷೇತ್ರ ಮುಗೇರಡ್ಕ ವಠಾರದಲ್ಲಿ ಧಾರ್ಮಿಕ ಮತ್ತು ಸಾoಸ್ಕೃತಿಕ ಕಾರ್ಯಕ್ರಮ

 ಮೊಗ್ರು: ಜ.13 ರಂದು ಕ್ಷೇತ್ರ ಮುಗೇರಡ್ಕ ವಠಾರದಲ್ಲಿ ಧಾರ್ಮಿಕ ಮತ್ತು ಸಾoಸ್ಕೃತಿಕ ಕಾರ್ಯಕ್ರಮ

ಮೊಗ್ರು :ಮೂವರು ದೈವಗಳ ದೈವಸ್ಥಾನ ಮುಗೇರಡ್ಕ ಹಾಗೂ ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಮೊಗ್ರು ಗ್ರಾಮ ಬೆಳ್ತಂಗಡಿ ತಾಲೂಕು ಇದರ ಸಹಭಾಗಿತ್ವದಲ್ಲಿ ನಾಳೆ ದಿನಾಂಕ 13 ಜನವರಿ 2024, ಶನಿವಾರ ಶ್ರೀ ಕ್ಷೇತ್ರ ಮುಗೇರಡ್ಕ ವಠಾರದಲ್ಲಿ ಧಾರ್ಮಿಕ ಮತ್ತು ಸಾoಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಲಿದೆ.

ಬೆಳಗ್ಗೆ 6.30 ಕ್ಕೆ ಗಣಹೋಮ, ಬೆಳಗ್ಗಿನಿಂದ ಸಂಜೆಯವರೆಗೆ ಸ್ಥಳೀಯ 10 ಭಜನಾ ಮಂಡಳಿಗಳಿಂದ ಅರ್ಧಏಕಾಹ ಭಜನೆ, ಸಂಜೆ 5.00 ರಿಂದ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಸ್ಥಳೀಯ ಪ್ರತಿಭೆಗಳಿಂದ ಮನೊರಂಜನಾ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.

ಸಭಾಧ್ಯಕ್ಷರಾಗಿ ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನದ ಆಡಳಿತ ಮೋಕ್ತೆಶರರಾದ ರಾಮಣ್ಣ ಗೌಡ ದೇವಸ್ಯ ಗುತ್ತು, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ದ ಶಾಸಕರಾದ ಹರೀಶ್ ಪೂಂಜಾ, ಸಾಮಾಜಿಕ ಹೋರಾಟಗಾರರದ ದಿನೇಶ್ ಕುಮಾರ್ ಜೈನ್ ಪುತ್ತೂರು, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ,ಮಂಗಳೂರು ಆವಿಷ್ಕಾರ ಯೋಗ, ಯೋಗ ಚಿಕಿತ್ಸಕರರಾದ ಕುಶಾಲಪ್ಪ ಗೌಡ ನೆಕ್ಕರಾಜೆ ಇವರ ಉಪಸ್ಥಿಯಲ್ಲಿ ನೆರವೇರಲಿದೆ. ರಾತ್ರಿ 10 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಮುರಳಿ ಬ್ರದರ್ಸ್ ಡ್ಯಾನ್ಸ್ ಕ್ರಿವ್ ಪುತ್ತೂರು ಇವರಿಂದ ನೃತ್ಯ ವೈಭವ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಜನಾ ಮಂಡಳಿ ಆಡಳಿತ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನದ ಆಡಳಿತ ಮೋಕ್ತೆಶರರಾದ ರಾಮಣ್ಣ ಗೌಡ ದೇವಸ್ಯಗುತ್ತು, ಮನೋಹರ ಗೌಡ ಅಂತರ ಗುತ್ತು, ಭಜನಾ ಮಂದಿರ ಆಡಳಿತ ಸಮಿತಿ ಕಾರ್ಯದರ್ಶಿ ಪುರಂದರ ಗೌಡ ನೈಮಾರ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!