ಹುಣ್ಸೆಕಟ್ಟೆ: 22 ನೇ ವರ್ಷದ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಕುಣಿತ ಭಜನೆ, ಹುಲಿ ಕುಣಿತ ಪ್ರದರ್ಶನ ಶೋಭಾಯಾತ್ರೆಯಲ್ಲಿ ಮೆರುಗು
ಹುಣ್ಸೆಕಟ್ಟೆ: ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಇದರ ವತಿಯಿಂದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸಮುದಾಯ ಭವನ ಹುಣ್ಸೆಕಟ್ಟೆಯಲ್ಲಿ ಆ.31 ರಿಂದ ಸೆ.2ರವರೆಗೆ ಶ್ರೀ ಕೃಷ್ಣ ಕುಮಾರ್ ಐತಾಳ್ ಪಂಜಿರ್ಪು ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ಜರುಗಿತು.
ಆ.31ರಂದು ಬೆಳಗ್ಗೆ ಗಣಹೋಮ, ಮೂರ್ತಿ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬೆಳ್ತಂಗಡಿ ಇವರಿಂದ ಭಜನಾ ಕಾರ್ಯಕ್ರಮ, ಊರವರಿಂದ ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತೆಲಿಕೆ-ನಲಿಕೆ ಬಾಯಿ ನಿಲಿಕೆ ಕಾಮಿಡಿ ಕಾರ್ಯಕ್ರಮ ಜರುಗಿತು.
ಸೆ.1 ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಭಕ್ತಿಗೀತೆ ಸ್ಪರ್ಧೆ, ಶ್ರೀ ರಾಮ ಭಜನಾ ಮಂಡಳಿ ಇವರ ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ನಂತರ ಶ್ರೀ ರಾಮ ಭಜನಾ ಮಂಡಳಿ ಅರ್ಪಿಸುವ ಆಮಂತ್ರಣ, ಸಂಸ್ಕೃತ ಸಿರಿ, ಟೀಮ್ ಗಾನಯಾನ ಪರಿವಾರದಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕನ್ನಡ ಚಲನಚಿತ್ರ ನಟ ರಾಜ್ ಚರಣ್ ಉಡುಪಿ ಹಾಗೂ ಪರಿಶುದ್ಧಂ ಚಿತ್ರ ತಂಡದವರು ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಇವರು ಭಾಗಿಯಾಗಿದ್ದರು.
ಸೆ.2ರಂದು ಬೆಳಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಊರವರಿಂದ ಭಜನಾ ಕಾರ್ಯಕ್ರಮ ಸಂಜೆ 5.30ಕ್ಕೆ ಮಹಾಪೂಜೆ ನಡೆಯಿತು. ನಂತರ ಶ್ರೀ ವಿಘ್ನೇಶ್ವರನ ವೈಭವಪೂರ್ಣ ಶೋಭಾಯಾತ್ರೆಯು ಹೊರಟು ಮುಗುಳಿ ಸೇತುವೆ ಬಳಿ ಶ್ರೀ ವಿಘ್ನೇಶ್ವರನ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಯಿತು.
ವಿಶೇಷ ಶೋಭಾಯಾತ್ರೆಯ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಕುಣಿತ ಭಜನಾ ಮಕ್ಕಳಿಂದ ಆಕರ್ಷಕ ಕುಣಿತ ಭಜನೆ, ಹುಲಿ ಕುಣಿತ ಪ್ರದರ್ಶನ ದ ಮೆರವಣಿಗೆಯು ನಡೆಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.