• September 21, 2024

ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ಪೂರ್ಣಗೊಳಿಸಿದ ಹಿನ್ನೆಲೆ, ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ : ದೇಶದಾದ್ಯಂತ ಎರಡು ಸಾವಿರ ಸ್ಥಳಗಳಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞೆ

 ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ಪೂರ್ಣಗೊಳಿಸಿದ ಹಿನ್ನೆಲೆ, ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ : ದೇಶದಾದ್ಯಂತ ಎರಡು ಸಾವಿರ ಸ್ಥಳಗಳಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞೆ

ಬೆಳ್ತಂಗಡಿ :  ಕಳೆದ 20 ವರ್ಷಗಳಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ  ಹಿಂದೂ ಜನಜಾಗೃತಿ ಸಮಿತಿಯು  ನಿರಂತರವಾಗಿ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಸೆ. 26  ರಂದು  ಘಟಸ್ಥಾಪನೆಯ ದಿನ ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ 20 ವರ್ಷಗಳು ಪೂರ್ಣವಾಗುತ್ತಿರುವ ಪ್ರಯುಕ್ತ  ಸಮಿತಿಯ ವತಿಯಿಂದ ದೇಶಾದ್ಯಂತ ‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ.ಈ ಅಭಿಯಾನವು ನವೆಂಬರ್  8 ರವರೆಗೆ ನಡೆಯಲಿದೆ ಈ ಅಭಿಯಾನದಲ್ಲಿ ದೇಶಾದ್ಯಂತ 2000 ಕ್ಕೂ ಹೆಚ್ಚು ಸ್ಥಳಗಳಲ್ಲಿ ‘ಹಿಂದೂ ರಾಷ್ಟ್ರದ ಪ್ರತಿಜ್ಞೆ’ ತೆಗೆದುಕೊಳ್ಳಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ  ಮೋಹನ ಗೌಡ ಇವರು ಮಾಹಿತಿ ನೀಡಿದ್ದಾರೆ.

 3000 ಸ್ಥಳಗಳಲ್ಲಿ ಪ್ರವಚನಗಳು, 2000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ, 1000 ದೇವಾಲಯಗಳ ಮತ್ತು 250 ಐತಿಹಾಸಿಕ ಸ್ಥಳಗಳ ಸ್ವಚ್ಛತೆ, 350 ಮಹಿಳಾ ಸಂಘಟನೆಗಳ ಉಪಕ್ರಮ ಮತ್ತು 200 ಸ್ಥಳಗಳಲ್ಲಿ ಮಹಿಳೆಯರಿಗೆ ಸ್ವರಕ್ಷಣೆಯ ತರಬೇತಿ ಉಪಕ್ರಮಗಳನ್ನು ನಡೆಸಲಾಗುವುದು. ಅಲ್ಲದೇ 30 ಕ್ಕೂ ಹೆಚ್ಚು ‘ಹಿಂದೂ ರಾಷ್ಟ್ರ ಸಂಘಟನೆ ಸಮ್ಮೇಳನ’, 50 ಕಡೆಗಳಲ್ಲಿ ‘ವರ್ಧ್ಯಂತ್ಯುತ್ಸವ ಸಮಾರಂಭಗಳು’, 50 ಕಡೆಗಳಲ್ಲಿ ಹಿಂದೂ ರಾಷ್ಟ್ರ ವಿಚಾರ ಸಂಕಿರಣ, 70 ಕಡೆ ಬೀದಿ ನಾಟಕಗಳು, 200 ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಸಭೆಗಳು, 60 ಕ್ಕೂ ಹೆಚ್ಚು ವಕೀಲರ ಸಭೆ ಇತ್ಯಾದಿ ಉಪಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು  ಅವರು ತಿಳಿಸಿದರು.

ಈ ಅಭಿಯಾನದ ಅಂತರ್ಗತ ಮಂಗಳೂರು,ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಅನೇಕ ಸಾರ್ವಜನಿಕ ಗಣೇಶೋತ್ಸವದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಉಪನ್ಯಾಸದ ನಂತರ ಹಿಂದೂ ರಾಷ್ಟ್ರ ಪ್ರತಿಜ್ಞಾವಿಧಿಯನ್ನು ಮಾಡಲಾಯಿತು. ಈ ಪ್ರತಿಜ್ಞಾ ವಿಧಿಯಲ್ಲಿ ಸಾವಿರಾರು ಹಿಂದುಗಳು ಪಾಲ್ಗೊಂಡು ಹಿಂದೂ ರಾಷ್ಟ್ರ ಸ್ಥಾಪನೆಗೆ ಸಮರ್ಥನೆ ನೀಡಿದ್ದಾರೆ ಎಂದು ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ  ಚಂದ್ರ ಮೊಗೇರ ಇವರು ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!