ಹುಣ್ಸೆಕಟ್ಟೆ: ದ.ಕ ಜಿ.ಪಂ ಹಿ. ಪ್ರಾ. ಶಾಲೆ ಹುಣ್ಸೆಕಟ್ಟೆ ಮತ್ತು ಬಾಲವಿಕಾಸ ಸಮಿತಿ, ಅಂಗನವಾಡಿ ಕೇಂದ್ರ ಹುಣ್ಸೆಕಟ್ಟೆ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮ
ಹುಣ್ಸೆಕಟ್ಟೆ: ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಹುಣ್ಸೆಕಟ್ಟೆ ಮತ್ತು ಬಾಲವಿಕಾಸ ಸಮಿತಿ, ಅಂಗನವಾಡಿ ಕೇಂದ್ರ ಹುಣ್ಸೆಕಟ್ಟೆ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ನ.21 ರಂದು ದ.ಕ ಜಿ.ಪಂ.ಹಿ.ಪ್ರಾ ಶಾಲೆ ಹುಣ್ಸೆಕಟ್ಟೆ ಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಬಾಲವಿಕಾಸ ಸಮಿತಿಯ ಮಾಸ್ಟರ್ ಮೌರ್ಯ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಕ್ಕಳ ದಿನಾಚರಣೆಯ ಬಗ್ಗೆ ಮಾತನ್ನಾಡಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆ ಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಪೋಷಕರಿಗೆ ಬಹುಮಾನ ವಿತರಣೆಯು ನಡೆಯಿತು.
ವೇದಿಕೆಯಲ್ಲಿ ಶಾಲಾ ನಾಯಕಿ ಫಾತಿಮತ್ ಶಿಫಾನ, ಎಸ್ ಡಿಎಂ ಸಿ ಅಧ್ಯಕ್ಷೆ ಭವ್ಯ, ಪುಷ್ಪ ಉಪಸ್ಥಿತರಿದ್ದರು.
ಶಾಲಾ ಸಹಶಿಕ್ಷಕಿ ನಮಿತ ನಿರೂಪಿಸಿದರು, ಅಂಗನವಾಡಿ ಶಿಕ್ಷಕಿ ರಜನಿ ಸ್ವಾಗತಿಸಿದರು,
ಶಾಲಾ ಮುಖ್ಯ ಶಿಕ್ಷಕ ಕರಿಯಪ್ಪ ಪ್ರಾಸ್ತಾವಿಕ ಮಾತನ್ನಾಡಿ ಧನ್ಯವಾದಗೈದರು.
ನಂತರ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.