ಎಸ್ ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ, ಆಟೋ ಎಕ್ಸ್ಪೋ 2023 ಯಂತ್ರ 2.0 ಕಾರ್ಯಾಗಾರ
ಉಜಿರೆ: ಎಸ್ ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಸಂತೋಷ್ ಇವರ ಅಧ್ಯಕ್ಷತೆಯಲ್ಲಿ ಆಟೋ ಎಕ್ಸ್ಪೋ 2023 ಯಂತ್ರ 2.0 ಕಾರ್ಯಾಗಾರವು ನ.21 ರಂದು ನಡೆಯಿತು.
ಕಾರ್ಯಾಗಾರವನ್ನು ಬೆಳ್ತಂಗಡಿ ನ್ಯಾಯಾವಾದಿ ಶ್ರೀ ಕೃಷ್ಣ ಶೆಣೈ ಉದ್ಘಾಟಿಸಿ ಶುಭಹಾರೈಸಿದರು.
ವೇಣೂರು ಎಸ್ ಡಿಎಂ ಐಟಿಐ ಕಾಲೇಜು ಪ್ರಾಂಶುಪಾಲರಾದ ವಿಶ್ವೇಶ್ವರ ಪ್ರಸಾದ್ ಕೆ.ಅರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು
ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿಯವರು ಜೊತೆಗಿದ್ದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳೇ ತಯಾರಿಸಿದ ಮೋಡೆಲ್ಸ್ ಗಳನ್ನು ಪ್ರದರ್ಶನ ಮಾಡಲಾಯಿತು. ಹಾಗೂ 2 ವಿಲ್ಲರ್ , 4 ವಿಲ್ಲರ್ ವಾಹನಗಳ ಪ್ರದರ್ಶನ ಮೈ ಜುಂ ಅನ್ನಿಸುವಂತೆ ಅದ್ಧೂರಿಯಾಗಿ ನಡೆಯಿತು.
ಕಾಂತಾರ ಚಿತ್ರದಲ್ಲಿ ನಟಿಸಿದ ರಂಜನ್ ಕಾಸರಗೋಡು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದರು