ತುಳು ರಂಗಭೂಮಿಯಲ್ಲಿ ಹೊಸತನದ ಇತಿಹಾಸ ಸೃಷ್ಟಿಸಿ ಅಮೋಘ 50 ಪ್ರದರ್ಶನಕ್ಕೆ ಕಾಲಿಡುತ್ತಿರುವ ಶ್ರೀ ದುರ್ಗಾ ಕಲಾತಂಡದ ಪುಗರ್ತೆ ಕಲಾವಿದೆರ್ ವಿಟ್ಲಾ ಮೈರಾ ಕೇಪು ಅಭಿನಯದ ಕಲ್ಜಿಗದ ಕಾಳಿ ಮಂತ್ರ ದೇವತೆ ತುಳು ಪೌರಾಣಿಕ ನಾಟಕ
ಶ್ರೀ ದುರ್ಗಾ ಕಲಾತಂಡದ ಪುಗರ್ತೆ ಕಲಾವಿದೆರ್ ವಿಟ್ಲಾ ಮೈರಾ ಕೇಪು ಅಭಿನಯದ ಕಲ್ಜಿಗದ ಕಾಳಿ ಮಂತ್ರ ದೇವತೆ ತುಳು ಪೌರಾಣಿಕ ನಾಟಕವು ಇದೇ ಬರುವ ದಿನಾಂಕ 25/11 ರಂದು ಯಶಸ್ವಿ 50ನೇ ಪ್ರಯೋಗವನ್ನು ಪೂರೈಸುತ್ತಿದೆ.
ವಿಭಿನ್ನ ರಂಗ ವಿನ್ಯಾಸದೊಂದಿಗೆ, ವಿಶೇಷ ರೀತಿಯ ತಂತ್ರಜ್ಞಾನದ ಮೂಲಕ, ಅಮೋಘ ಧ್ವನಿ ಮತ್ತು ಬೆಳಕಿನ ಕೈ ಚಲಕದಲ್ಲಿ ದಕ್ಷ ನಿರ್ದೇಶನ ಜೊತೆ,ಅದ್ಬುತ ನಟನೆಯೊಂದಿಗೆ ಮೂಡಿ ಬಂದಿರುವ ಈ ಪೌರಾಣಿಕ ನಾಟಕ ಪ್ರಧರ್ಶನ ಆದ ಕಡೆಗಳೆಲ್ಲ ನಿರೀಕ್ಷೆಗೂ ಮೀರಿ ಯಶಸ್ವೀ ಪಡೆದು ಸಂಘ ಸಂಸ್ಥೆಗಳಿಂದ ಮುಕ್ತ ಕಂಠದಿಂದ ಪ್ರಶಂಸೆ ಪಡೆದು ದಾಖಲೆ ನಿರ್ಮಿಸಿದೆ.
ಕಲಾಸಂಗಮ ತಂಡದ ವಿಜಯ್ ಕುಮಾರ್ ಕೋಡಿಯಲ್ ಬೈಲ್ ಮತ್ತು ಸುಂದರ ರೈ ಮಂದಾರ ರವರ ಸಂಪೂರ್ಣ ಸಲಹೆ ಸಹಕಾರದಿಂದ, ನಿತಿನ್ ಹೊಸಂಗಡಿ ಇವರ ನಿರ್ದೇಶನ ಮತ್ತು ಮುಖ್ಯ ಭೂಮಿಕೆಯಲ್ಲಿ ನಟನೆದೊಂದಿಗೆ, ಯಕ್ಷದ್ರುವ ಸತೀಶ್ ಶೆಟ್ಟಿ ಪಟ್ಲಾ,ಮೈಮ್ ರಾಮ್ ದಾಸ್, ವಿನೋದ್ ರಾಜ್ ಕೋಕಿಲ ರವರ ಹಿನ್ನಲೆ ಗಾಯನದಲ್ಲಿ, ಕೆ ಕೆ ಪೇಜಾವರ ಸಾಹಿತ್ಯದಲ್ಲಿ ಮೂಡಿ ಬಂದ ಈ ನಾಟಕ ಮಂಗಳೂರು ಉಡುಪಿ ಜಿಲ್ಲೆ, ಕೇರಳ ರಾಜ್ಯಗಳಲ್ಲಿ ಅದ್ಬುತ ಪ್ರಧರ್ಶನ ನೀಡಿ ತುಳು ರಂಗಭೂಮಿಯಲ್ಲಿ ಹೊಸತನದ ಇತಿಹಾಸ ಸೃಷ್ಟಿಸಿ ಅಮೋಘ 50 ಪ್ರದರ್ಶನಕ್ಕೆ ಕಾಲಿಡುತ್ತಿದೆ.