ಬೆಳ್ತಂಗಡಿ ಮುಳಿಯದಲ್ಲಿ ‘ಮುಳಿಯ ಚಿನ್ನೋತ್ಸವ’ ಚಿನ್ನಾಭರಣಗಳ ಹಬ್ಬಕ್ಕೆ ಚಾಲನೆ
ಬೆಳ್ತಂಗಡಿ: ಹತ್ತೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಪುತ್ತೂರು ಮತ್ತು ಬೆಳ್ತಂಗಡಿ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಮತ್ತೆ ಮುಳಿಯ ಚಿನ್ನೋತ್ಸವಕ್ಕೆ ಸಜ್ಜಾಗಿದೆ.
ಈ ಬಾರಿಯ ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ- ಮುಳಿಯ ಚಿನ್ನೋತ್ಸವಕ್ಕೆ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ವಿದ್ಯಾ ಶ್ರೀನಿವಾಸ್ ಗೌಡರವರು ಚಾಲನೆ ನೀಡಿದರು. ಅಲ್ಲದೆ ತಾವು 30 ವರ್ಷಗಳ ಹಿಂದೆ ಮುಳಿಯದಲ್ಲಿ ಖರೀದಿಸಿರುವ ಚಿನ್ನಭಾರಣಗಳ ಬಳಕೆಯ ಸವಿನೆನಪನ್ನು ಮೆಲುಕು ಹಾಕಿದರು.
ಮುಖ್ಯ ಅತಿಥಿ ನೆಲೆಯಲ್ಲಿ ಪ್ರಗತಿಪರ ಕೃಷಿಕರಾಗಿರುವ ಸಂತೋಷ್ ಕುಮಾರ್ ಕಾಪಿನಡ್ಕ ಅವರು ಮುಳಿಯ ಜ್ಯುವೆಲ್ಸ್ ವ್ಯವಹಾರಿಕ ಮಾತ್ರವಾಲ್ಲದೆ ಸಾಮಾಜಿಕ, ಕೃಷಿ , ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವ ಹಿಸುತ್ತಿದ್ದಾರೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮುಳಿಯ ಮಾರ್ಕೆಟಿಂಗ್ ಕನ್ಸಲ್ವೆಂಟ್ ವೇಣು ಶರ್ಮರವರು ಮುಳಿಯ ಸಂಸ್ಥೆಯ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು . ಬೆಳ್ತಂಗಡಿ ಮುಳಿಯ ಶಾಖಾ ಪ್ರಬಂಧಕರಾದ ಅಶೋಕ್ ಬಂಗೇರ ಉಪಸ್ಥಿತರಿದ್ದರು.
ಮುಳಿಯ ಸಂಸ್ಥೆಯ ಸಿಬ್ಬಂದಿ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು, ವ್ಯವಸ್ಥಾಪಕರು ಅಶೋಕ್ ಡಿ ಬಂಗೇರ ಸ್ವಾಗತಿಸಿದರು. ಉಪ ವ್ಯವಸ್ಥಾಪಕರು ಲೋಹಿತ್ ಕುಮಾರ್ ವಂದಿಸಿದರು. ಮುಳಿಯ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.