• November 22, 2024

ಬಡಕುಟುಂಬಕ್ಕೆ ಬೇಕಾಗಿದೆ ನೆರವಿನ ಹಸ್ತ

 ಬಡಕುಟುಂಬಕ್ಕೆ ಬೇಕಾಗಿದೆ ನೆರವಿನ ಹಸ್ತ

 

 

ಭಾಸ್ಕರ ಪೂಜಾರಿ ಹಾಗೂ ಹೇಮಲತಾ ದಂಪತಿಗಳಿಗೆ ಎರಡು ಪುಟ್ಟ ಹೆಣ್ಣು ಮಕ್ಕಳಿರುವ ಬಡ ಕುಟುಂಬ , ಕರಿಯಂಗಳದ ಭಂಡಾರಿ ಬೆಟ್ಟು ಎಂಬಲ್ಲಿ ವಾಸವಿರುವ ಭಾಸ್ಕರ ಇವರು ತನ್ನ ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದವರು. ಅಡಿಕೆ,ತೆಂಗಿನ ಕಾಯಿ ಕೀಳುವ ದಿನಗೂಲಿ ಕೆಲಸ ಮಾಡುತ್ತಾ ಆ ಮೂಲಕ ತನ್ನ ಸಂಸಾರಕ್ಕೆ, ತನ್ನ ಹಿರಿಯ ತಂದೆ-ತಾಯಿಗೆ‌ ಆಧಾರಿತವಾಗಿದ್ದರು.ಜೊತೆಗೆ ಶ್ರಮಜೀವಿ ಯಾದ ಇವರು ಸರಳ ಸಜ್ಜನ ವ್ಯಕ್ತಿಯಾಗಿದ್ದು ಎಲ್ಲರ ಪ್ರೀತಿ ಪಾತ್ರರಾಗಿದ್ದರು.

ಎಂದಿನಂತೆ ಕೆಲಸಕ್ಕೆ ಹೊರಟ ಭಾಸ್ಕರ್ ಅಡಿಕೆ ಮರದಿಂದ ಬಿದ್ದು ತಲೆಗೆ ತೀವ್ರತರವಾದ ಪೆಟ್ಟು ಬಿದ್ದು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗೆ ತುಂಬಾ ಖರ್ಚಾಗಿದ್ದು ಕುಟುಂಬ ದಿಕ್ಕೇ ತೋಚದೆ ಅಸಹಾಯಕ ಸ್ಥಿತಿಯಲ್ಲಿದೆ.

ಕೂಲಿ ಕೆಲಸ ಮಾಡುತ್ತಾ ತನ್ನ ಪುಟ್ಟ ಎರಡು ಮಕ್ಕಳ ಉತ್ತಮ ಭವಿಷ್ಯದ ಕನಸು ಕಾಣುತ್ತಾ, ಇತ್ತೀಚೆಗೆ ಮನೆ ನಿರ್ಮಾಣ ಮಾಡಿ ಅದರ ಸಾಲದ ಜವಾಬ್ದಾರಿ ಹೊತ್ತ ಆಧಾರ ಸ್ತಂಭ ಇಂದು ಅಸಾಯಕ ಸ್ಥಿತಿಯಲ್ಲಿ ಮಲಗಿದೆ.

ಇಂತಹ ದಯನೀಯ ಸ್ಥಿತಿಯಲ್ಲಿರುವ ಈ ಕುಟುಂಬಕ್ಕೆ ನಮ್ಮೆಲ್ಲರ ಸಾಂತ್ವನ ಬೇಕಾಗಿದೆ, ಚಿಕಿತ್ಸೆಗೆ ತುಂಬಾ ಖರ್ಚು ಇರುವುದರಿಂದ ಕುಟುಂಬಕ್ಕೆ ತಾವೆಲ್ಲರೂ ಪ್ರೀತಿಪೂರ್ವಕವಾದ ಸಹಕಾರ ನೀಡಲು ಕೈ ಜೋಡಿಸಬೇಕಾಗಿದೆ.

“ಹನಿ ಹನಿ ಕೂಡಿದರೆ ಹಳ್ಳ” ಎಂಬ ಮಾತಿನಂತೆ ತಾವು ಕಿಂಚಿತ್ತೂ ನೀಡಿದ ಮೊತ್ತವೂ ಭಾಸ್ಕರ್ ರವರ ಚಿಕಿತ್ಸೆಗೆ ಅನುಕೂಲವಾಗುತ್ತದೆ.

Bank of baroda .
Branch : Polali
Name : Hemalatha ( w/o:Bhaskar )
A/c no: 70930100010947
IFSC :BARBOVJPOLA

google pay no-
9902885308

Name:Vinodh polali

Related post

Leave a Reply

Your email address will not be published. Required fields are marked *

error: Content is protected !!