ಅ.8 ರಂದು ಸ್ಪರ್ಶಾ ಕಲಾ ಮಂದಿರ ಬಿ.ಸಿ ರೋಡ್ ನಲ್ಲಿ ಜಿಲ್ಲಾ ಮಟ್ಟದ ಕೆಸರು ಗದ್ದೆ ಪಂದ್ಯಾಟ ಒಸರ್ ದ ಕಂಡೊಡು ಕೆಸರ್ದ ಗೊಬ್ಬುಲು
ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವತಿಯಿಂದ ಕುಲಾಲರ ಜಿಲ್ಲಾ ಮಟ್ಟದ ಕೆಸರು ಗದ್ದೆ ಪಂದ್ಯಾಟ ಒಸರ್ ದ ಕಂಡೊಡು ಕೆಸರ್ದ ಗೊಬ್ಬುಲು ಇದೇ ಬರುವ ಅ. 8 ರಂದು ಬೆಳಗ್ಗೆ 8.30ರಿಂದ ಸ್ಪರ್ಶಾ ಕಲಾ ಮಂದಿರ ಬಿಸಿ ರೋಡ್ ನಲ್ಲಿ ಜರುಗಲಿದ್ದು,
ಪ್ರೈಜ್ ಕತ್ತರಿಸುವುದು 5 ವರ್ಷದ ಒಳಗಿನ ಮಕ್ಕಳಿಗೆ ನಡೆಯಲಿದೆ.
ನಿಬಂಧನೆ ಮತ್ತು ನಿಯಮಾವಳಿಗಳು ಇಂತಿವೆ:
ಎಲ್ಲಾ ಕೆಸರುಗದ್ದೆ ಕ್ರೀಡಾಪಟುಗಳಿಗೆ ಜಾತಿ ಇರುವ ಆಧಾರ್ ಅಥವಾ ಜಾತಿ ಪ್ರಮಾಣ ಪತ್ರ ಕಡ್ಡಾಯ.
ಹಗ್ಗಜಗ್ಗಾಟ ಒಂದು ತಂಡದಲ್ಲಿ 8+1 ಮಾತ್ರ ಆಡಲು ಅವಕಾಶ.
ವಾಲಿಬಾಲ್ ಒಂದು ತಂಡದಲ್ಲೊ 6+1 ಮಾತ್ರ ಆಡಲು ಅವಕಾಶ.
ಮಹಿಳೆಯರ ತ್ರೋಬಾಲ್ ಒಂದು ತಂಡದಲ್ಲಿ 6+1 ಮಾತ್ರ ಆಡಲು ಅವಕಾಶ.
ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲ್ಲೆಯವರು ಆಗಿರಬೇಕು. ಬೇರೆ ಜಿಲ್ಲೆಗೆ ಅವಕಾಶವಿಲ್ಲ.
ಗುಂಪು ಆಟಗಳ ತಂಡಗಳನ್ನು 8 ಗಂಟೆಯ ಒಳಗೆ ಹೆಸರು ನೀಡಬೇಕು 8.15 ಲಾರ್ಡ್ಸ್ ಎತ್ತಲಾಗುವುದು. 8.15 ನಂತರ ಬಂದ ತಂಡವನ್ನು ಸ್ವೀಕರಿಸಲಾಗುವುದಿಲ್ಲ.
ಸಂಘಟಕರ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮ. ಯಾವುದೇ ಸಮಸ್ಯರ ಬಂದಲ್ಲಿ ಕಪ್ತಾನನಿಗೆ ಮಾತ್ರ ಮಾತನಾಡಲು ಅವಕಾಶ.
ತಂಡ ಆಟದಲ್ಲಿ ಕ್ಲಪ್ತ ಸಮಯದಲ್ಲಿ ಕರೆದಾಗ ಭಾಗವಹಿಸದಿದ್ದಲ್ಲಿ ಪಂದ್ಯಾಟದಿಂದ ಕೈ ಬಿಡಲಾಗುವುದು.
ಅಶಿಸ್ತು ತೋರಿದ ತಂಡವನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕಲಾಗುವುದು.