4 ವರ್ಷಗಳ ಕಾಲ ಮಕ್ಕಳ ಭಾಗ್ಯವನ್ನೇ ಕಳೆದುಕೊಂಡ ದಂಪತಿಗಳ ಬಾಳಿಗೆ ಬೆಳಕಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ
ಅಲದಂಗಡಿ: ಬೆಳ್ತಂಗಡಿ ತಾಲೂಕಿನ ಅಲದಂಗಡಿ ಪರಿಸರದ ಉದಯ ದೇವಾಡಿಗ ಮತ್ತು ಹರ್ಷಿತ ಎಂಬುವವರು 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು, ದೇವಿ ಚಾಮುಂಡೇಶ್ವರಿಯ ಆಭಯ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಅಭಯ ಕೊಟ್ಟಳು.
ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಗಂಡು ಮಗುವಿನ ಜನನವಾಯಿತು. ಅವರ ದಾಂಪತ್ಯದ ಕತ್ತಲೆಯನ್ನು ದೂರ ಮಾಡಿದ ಶ್ರೀದೇವಿ ಚಾಮುಂಡೇಶ್ವರಿಗೆ ನಿನ್ನೆಯ ದಿವಸ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದರು.