• November 2, 2024

ಈದ್ ಮಿಲಾದ್ ಆಚರಣೆ ನೆಪದಲ್ಲಿ ಶಿವಮೊಗ್ಗದ ಶಾಂತಿ ಕೆಡಿಸಿದ ಜಿಹಾದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ ! – ಹಿಂದೂ ಜನಜಾಗೃತಿ ಸಮಿತಿ

 ಈದ್ ಮಿಲಾದ್ ಆಚರಣೆ ನೆಪದಲ್ಲಿ ಶಿವಮೊಗ್ಗದ ಶಾಂತಿ ಕೆಡಿಸಿದ ಜಿಹಾದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ ! – ಹಿಂದೂ ಜನಜಾಗೃತಿ ಸಮಿತಿ

 

ಶಿವಮೊಗ್ಗ: ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಕಳೆದ 3 ದಿನಗಳ ಹಿಂದೆ ನಡೆದ ಗಲಭೆಯು ಒಂದು ಷಡ್ಯಂತ್ರವಾಗಿರುವ ಎಲ್ಲ ಕುರುಹುಗಳು ಗೋಚರಿಸುತ್ತಿವೆ. ಮತಾಂಧರ ಅಟ್ಟಹಾಸಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ! ಅನೇಕ ಬಡ ಜನರ ಆಸ್ತಿ ಪಾಸ್ತಿಗಳ ಮೇಲೆ ಅಪಾರ ಹಾನಿಯುಂಟಾಗಿದ್ದು ಅಲ್ಲಿನ ಜನರು 3 ದಿನಗಳಿಂದ ದುಃಖದ ಮಡಲಿನಲ್ಲಿದ್ದಾರೆ, ಈ ಎಲ್ಲ ಘಟನೆಗಳಿಗೆ ಹೊಣೆ ಯಾರು ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಶಿವಮೊಗ್ಗದಲ್ಲಿ ಪ್ರತಿವರ್ಷವೂ ಈ ವೇಳೆ ಗಲಭೆಯುಂಟಾಗುವುದು ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುವುದು ಜಾರಿಯಲ್ಲಿದ್ದು ಆಡಳಿತದ ಸಂಪೂರ್ಣ ದುರ್ಲಕ್ಷ್ಯ, ಮತಾಂಧರ ಓಲೈಕೆ ಮಾಡುವ ಪ್ರಯತ್ನವು ಕಾಣುತ್ತಿದೆ.

ಶಿವಮೊಗ್ಗವು ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವೆಂದು ತಿಳಿದಿದ್ದೂ ‘ಇದು ಸಣ್ಣ ಘಟನೆ’ ಎಂದು ಉನ್ನತ ಸ್ಥಾನದಲ್ಲಿರುವ ಗೃಹ ಸಚಿವರು ಹೇಳುತ್ತಾರೆ, ಪೊಲೀಸರ ಮೇಲೆ ಕಲ್ಲು ಹೊಡೆಯುವುದು ಸಣ್ಣ ಘಟನೆಯೇ ? ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ. ಒಟ್ಟಾರೆ ಸಮಾಜಕ್ಕೆ ಕಂಟಕ ತರುವ ಅತ್ಯಂತ ಗಂಭೀರ ಘಟನೆಗಳು ನಡೆದ ಮೇಲೂ ನಾಯಕರ ನಿರ್ಲಕ್ಷ್ಯತನದ ಹೇಳಿಕೆಗಳು ರಾಜ್ಯದ ರಕ್ಷಣೆಗೆ ಕುತ್ತು ತರುವಂತಿದೆ. ಹಾಗಾಗಿ ಆರೋಪಿಗಳನ್ನು ಬಂದಿಸುವುದಕ್ಕೆ ಮಾತ್ರ ಸೀಮಿತ ಮಾಡದೆ ಕೂಡಲೇ ಸರಕಾರವು ಈ ಘಟನೆಯನ್ನು ಎಸ್ಐಟಿ ತನಿಖೆಗೆ ಒಳಪಡಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ ಮತಾಂಧರ ಮನೆಗಳನ್ನು ಮುಟ್ಟುಗೋಲು ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

Related post

Leave a Reply

Your email address will not be published. Required fields are marked *

error: Content is protected !!