• September 12, 2024

ಬಂದಾರು ಗ್ರಾ.ಪಂ ಮತ್ತು ಮೊಗ್ರು ಗ್ರಾಮದ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

 ಬಂದಾರು ಗ್ರಾ.ಪಂ ಮತ್ತು  ಮೊಗ್ರು ಗ್ರಾಮದ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬಂದಾರು: ಅ 01 ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಂದಾರು ಗ್ರಾಮ ಪಂಚಾಯತ್ ಹಾಗೂ ಬಂದಾರು – ಮೊಗ್ರು ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪಾಲ್ಗೊಳ್ಳುವಿಕೆಯಲ್ಲಿ
ಬೃಹತ್ ಸ್ವಚ್ಛತಾ ಅಭಿಯಾನ
ಕಾರ್ಯಕ್ರಮವು ಬಂದಾರು – ಮೈರೋಳ್ತಡ್ಕ- ಊoತನಾಜೆ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಉಪಾಧ್ಯಕ್ಷರಾದ ಪುಷ್ಪಾವತಿ ಬರಮೆಲು, ಅಭಿವೃದ್ದಿ ಅಧಿಕಾರಿ ಮೋಹನ್ ಬಂಗೇರ,ಮಾಜಿ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ ಮುಗೆರಡ್ಕ, ಸದಸ್ಯರಾದ ಬಾಲಕೃಷ್ಣ ಗೌಡ,ಚೇತನ್ ಗೌಡ,ಶಿವ ಗೌಡ, ಶಿವಪ್ರಸಾದ್ , ಶ್ರೀಮತಿ ಮoಜುಶ್ರೀ, ಶ್ರೀಮತಿ ಅನಿತಾ, ಶ್ರೀಮತಿ ಸುಚಿತ್ರಾ, ಶ್ರೀಮತಿ ಭಾರತಿ, ಪದ್ಮುಂಜ ಸಿ.ಎ,ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ್ ಗೌಡ, ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಸೀತರಾಮ ಬೆಳಾಲು, ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ ಕೆ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ಧರ್ಮಾವತಿ, ನಿರ್ದೇಶಕರಾದ ಶ್ರೀಮತಿ ಮಮತಾ ಸುಂದರ ಗೌಡ ನಿನ್ನಿಕಲ್ಲು , ಬಂದಾರು ಮತ್ತು ಮೊಗ್ರು ಗ್ರಾಮದ
ವಿವಿಧ ಸಂಘ- ಸಂಸ್ಥೆಗಳಾದ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೊಟ ಬಂದಾರು ಹಾಗೂ ಮೈರೊಳ್ತಡ್ಕ ,ಪಾಂಚಜನ್ಯ ಗೆಳೆಯರ ಬಳಗ ಪಾಂಜಾಳ,ಕೇಸರಿ ನಂದನ ಗೆಳೆಯರ ಬಳಗ ಬಂದಾರು,
ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಊoತನಾಜೆ , ಸದಾಶಿವ ಯುವಕ ಮಂಡಲ ಮೈರೊಳ್ತಡ್ಕ, ಶಿವ ಗೆಳೆಯರ ಬಳಗ ಮೈರೊಳ್ತಡ್ಕ, ಪದಾಧಿಕಾರಿಗಳು,ಸದಸ್ಯರು ಆಶಾ ಕಾರ್ಯರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related post

Leave a Reply

Your email address will not be published. Required fields are marked *

error: Content is protected !!