ಉಜಿರೆ ದಿ ಓಷ್ಯನ್ ಪರ್ಲ್ ರೆಸ್ಟೋರೆಂಟ್ ನಲ್ಲಿ ಸೆ.29 ರಿಂದ ಅ.8 ರವರೆಗೆ ವಿವಿಧ ಬಗೆಯ ದೋಸೆಗಳ ಮಹಾಹಬ್ಬ
ಉಜಿರೆಯ ಹೃದಯ ಭಾಗದಲ್ಲಿರುವ ಅತ್ಯಂತ ಉತ್ತಮ ಗುಣಮಟ್ಟದ ರೆಸ್ಟೋರೆಂಟ್ ದಿ ಓಷ್ಯನ್ ಪರ್ಲ್ ನಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8 ರವರೆಗೆ ವಿವಿಧ ಬಗೆಯ ಶುಚಿರುಚಿಯಾದ ದೋಸೆಗಳ ಮಹಾಹಬ್ಬ ನಡೆಯಲಿದೆ.
ಸೆಪ್ಟೆಂಬರ್ 29 ರಿಂದ ನಡೆಯುವ ವಿವಿಧ ಬಗೆಯ ದೋಸೆ ಹಬ್ಬದಲ್ಲಿ ಬಗೆಬಗೆಯ ಹಣ್ಣು, ವಿಟಮಿನ್ ಸೊಪ್ಪು, ತರಕಾರಿಯಲ್ಲಿ ತಯಾರಿಸಲಾದ ದೋಸೆಗಳು ಇಲ್ಲಿ ಲಭ್ಯವಿರುತ್ತದೆ.
ಈ ವರೆಗೆ ಸೇವಿಸದ ಪಾಲಕ್ ದೋಸೆ, ಪೈನಾಪಲ್ ದೋಸೆ, ರಾಗಿ ದೋಸೆ, ಚಾಕಲೇಟ್ ದೋಸೆ, ಟೊಮೆಟೊ ದೋಸೆ, ಮಶ್ರೂಮ್ ದೋಸೆ, ದಪ್ಪ ತುಪ್ಪದ ದೋಸೆ ಹೀಗೆ ವಿವಿಧ ಬಗೆಯ ದೋಸೆಗಳನ್ನು ಸವಿಯಬಹುದಾಗಿದೆ.
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದಿನಂಪ್ರತಿ ಬಗೆಬಗೆಯ ದೋಸೆಗಳನ್ನು ಸವಿಯಬಹುದಾಗಿದೆ