• June 13, 2024

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಕಾರ್ಯಕ್ರಮ

 ಶ್ರೀ  ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಕಾರ್ಯಕ್ರಮ

ಬೆಳ್ತಂಗಡಿ: ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆ ಯವರ ಮತ್ತು ಡಾ ಡಿ ಹೇಮಾವತಿ ವಿ ಹೆಗ್ಗೆಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಕಾರ್ಯಕ್ರಮ ಇಂದು ಶ್ರೀ ಮಂಜುನಾಥೇಶ್ವರದ ಪಿನಕಿ ಸಭಾ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳದ ಭುಜಬಲಿಯವರು ಭಜನಾ ಪರಿಷತ್ತಿನಲ್ಲಿ ತಾಲೂಕಿನಿಂದ ಭಜನಾ ಕಮ್ಮಟ ಭಜನೆ ಗೆ ಹೆಚ್ಚಿನ ಆಧ್ಯತೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ನೀಡಲಾಗುವುದು.
ಭಜನಾ ಕಮ್ಮಟ ಪ್ರಾರಂಭ ವಾಗಿ 24ವರ್ಷ ಗಳಾಗಿ ದೆ ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ.
ಭಜನೆಯನ್ನು ಎಲ್ಲರೂ ಎಲ್ಲರಲ್ಲೂ ಅನುಸರಿಸಬೇಕು ಭಜನಾ ತಂಡದ ಆಯ್ಕೆ ಮಾಡುವುದು ಉತ್ತಮ ವಿಷಯ ಉತ್ತಮ ತಂಡಗಳ ಆಯ್ಕೆ ಮಾಡುವುದು ನಮ್ಮ ಪರಿಷತ್ ನ ಜವಾಬ್ದಾರಿ ಎಂದು ಹೇಳಿದರು.

ಯೋಜನಾ ಅಧಿಕಾರಿ ಶ್ರೀನಿವಾಸ ಅವರು ಮಾತನಾಡಿ ಭಜನೆಯಲ್ಲಿ ತುಂಬಾ ಬದಲಾವಣೆಗಳು ಬಂದಿದೆ. ಡಿ ಜೆ ಹೋಗಿ ಭಜನೆ ಯತ್ತ ಎಲ್ಲರೂ ಮುಂದಾಗಿದ್ದಾರೆ ಎಲ್ಲದಕ್ಕೂ ಬೆಳ್ತಂಗಡಿ ತಾಲೂಕು ಮುನ್ನುಡಿಯಾಗಿ 27ನೇ ದಿನಾಂಕದಂದು ಪ್ರಾರಂಭವಾಗುವ ಈ ಭಜನಾ ಕಮ್ಮಟಕ್ಕೆ 20ತಾರಿಕಿನ ಒಳಗಡೆ ಭಜನಾ ತರಬೇತಿಗೆ ಭಾಗಿಯಾಗುವವರು ವಲಯದ ಅಧ್ಯಕ್ಷರಲ್ಲಿ ಅರ್ಜಿ ಸಲ್ಲಿಸುವುದು 27ರಂದು ಭಜಕರು ಧರ್ಮಸ್ಥಳದಲ್ಲಿ ಒಟ್ಟಾಗುವುದು. 4ನೇ ತಾರಿಕಿಗೆ ಕೊನೆಗೊಳ್ಳುವುದು ಎಂದು ತಿಳಿಸಿದರು.

ಧರ್ಮಸ್ಥಳದ
ಭಜನಾ ಪರಿಷತ್ ಉಪಾಧ್ಯಕ್ಷರು ಮಾತನಾಡಿ
25ನೇ ವರ್ಷದ ಭಜನಾ ಕಮ್ಮಟದಲ್ಲಿ ಭಾಗಿಯಾಗುವುದು ನಮ್ಮ ಬಾಗ್ಯ ಸಿಕ್ಕಿದೆ, ಎಲ್ಲರೂ ಈ ಭಜನಾ ಕಮ್ಮಟದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಜನಾ ಪರಿಷತ್ ನ ತಾಲೂಕು ಅಧ್ಯಕ್ಷರಾದ ಕಜೆ ವೆಂಕಟರಮಣ, ಚಂದ್ರಶೇಖರ ಸಾಲ್ಯಾನ್ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸುರೇಂದ್ರ ಕುಮಾರ್ ಯೋಜನಾಧಿಕಾರಿ, ಜಯಪ್ರಸಾದ್ ಕಡಮಾಜೆ ಉಪಾಧ್ಯಕ್ಷರು ತಾಲೂಕು ಭಜನಾ ಪರಿಷತ್, ಜಗನಾಥ್ ದೇವಾಡಿಗ ಜೊತೆಕಾರ್ಯದರ್ಶಿ ತಾಲೂಕು ಭಜನಾ ಪರಿಷತ್ , ದಯಾನಂದ್ ಯೋಜನಾಧಿಕಾರಿಗಳು ಗುರುವಾಯನಕೆರೆ ಯೋಜನಾ ಕಚೇರಿ, ಭುಜಬಲಿ ಮಾರ್ಗದರ್ಶಕರು ಭಜನಾ ಕಮ್ಮಟ, ಭಜನಾ ಕಮ್ಮಟ ಕಾರ್ಯಕಾರಿ ಮಂಡಳಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು
ಬೆಳ್ತಂಗಡಿ ಕೇಂದ್ರ ಒಕ್ಕೂಟದ ಅಧ್ಯಕ್ಷರು ಸೀತಾರಾಮ್,
ಗುರುವಾಯನಕೆರೆ ಕೇಂದ್ರ ಒಕ್ಕೂಟದ ಅಧ್ಯಕ್ಷರು
ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!