ಎಪಿಕೆ ಕ್ರಿಯೇಶನ್ಸ್ ಅರ್ಪಿಸುವ ಪೂಜ್ಯ ಕನ್ಯಾಡಿ ಶ್ರೀಗಳಿಗೆ ಸಮರ್ಪಿಸುವ ಗುರುಭಕ್ತಿಸಾರ ಭಕ್ತಿಗೀತೆ ಬಿಡುಗಡೆ
ಕನ್ಯಾಡಿ: ಎಪಿಕೆ ಕ್ರಿಯೇಶನ್ಸ್ ಅರ್ಪಿಸುವ ಪೂಜ್ಯ ಕನ್ಯಾಡಿ ಶ್ರೀಗಳಿಗೆ ಸಮರ್ಪಿಸುವ ಭಕ್ತಿಗೀತೆ ಅಜಿತ್ ಪೂಜಾರಿ ಕನ್ಯಾಡಿ ಇವರ ಸಾಹಿತ್ಯ ಹಾಗೂ ಸುಮಧುರ ಕಂಠದಲ್ಲಿ ಮೂಡಿಬಂದ ಗುರುಭಕ್ತಿಸಾರ ಭಕ್ತಿಗೀತೆಯು ಇಂದು ಕನ್ಯಾಡಿ ಶ್ರೀ ಗುರುದೇವ ಮಠದಲ್ಲಿ ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಶಾಸಕರುಗಳು ಬಿಡುಗಡೆಗೊಳಿಸಿದರು.
ಎಂ. ರವೀಂದ್ರ ಪೂಜಾರಿ ಆರ್ಲ ಕನ್ಯಾಡಿ ಮಾಲಕರು ಶ್ರೀ ಗಣೇಶ್ ಪೈಂಟಿಂಗ್&ಫ್ಲೋರಿಂಗ್ ನಿತ್ಯಾನಂದ ಸಮುಚ್ಚಯ ಕನ್ಯಾಡಿ, ಗಣೇಶ್ ರೆಸಿಡೆನ್ಸಿ ಕನ್ಯಾಡಿ ಇವರು ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರುಗಳಾದ ಹರೀಶ್ ಪೂಂಜ, ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಗುರುಮ್ಮೆ ಸುರೇಶ್ ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು