ಧಾರ್ಮಿಕ ಸಾಮರಸ್ಯ ವನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ: ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಜೀವದಾಸೆ ಬಿಟ್ಟು ಹತ್ತಿಕ್ಕಲು ಗ್ರಾಮದ ಸಮಸ್ತರು ಒಂದಾಗಿ ಧೃಢ ನಿರ್ಧಾರ ಮಾಡಿರುತ್ತೇವೆ: ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳದ ಗ್ರಾಮಸ್ಥರು
ಧರ್ಮಸ್ಥಳ: ಇತ್ತೀಚೆಗೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆ ನಡೆಸಿ ದೇಶದ್ರೋಹ ಹೇಳಿಕೆಗಳನ್ನು ನೀಡಿ, ದೇಶದ ಒಗ್ಗಟ್ಟು ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಜನರಲ್ಲಿ ಭಯ ಭೀತಿ ಹುಟ್ಟಿಸುತ್ತ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಮಾಡುತ್ತಿದ್ದಾರೆ. ಚಾನೆಲ್ ನ ಸಂದರ್ಶನವೊಂದರಲ್ಲಿ ಧರ್ಮಸ್ಥಳದಲ್ಲಿ ಮಂಜುನಾಥನಿಗೆ ಅಣ್ಣಪ್ಪನಿಗೆ ಕೈಮುಗಿಯುವುದು ವೇಸ್ಟ್ ಜೆಸಿಬಿ ಯನ್ನು ತಂದು ಮಗುಚಲಿ ಎಂದು ಆತಂಕ ಮೂಡಿಸುವಾಗೆ ಹೇಳಿಕೆಯನ್ನು ನೀಡಿರುವುದು ಕಂಡುಬಂದಿದೆ. ಧಾರ್ಮಿಕ ಸಾಮರಸ್ಯ ವನ್ನು ಕೆಡಿಸುವ ಹುನ್ನಾರ ಇದಾಗಿದೆ ಎಂದು ಧರ್ಮಸ್ಥಳದ ಗ್ರಾಮಸ್ಥರು ಮಹೋತ್ಸವ ಸಭಾ ಭವನ ಧರ್ಮಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿಗೆ ಕೈ ಮುಗಿಯುವುದು ವ್ಯರ್ಥ ಅನ್ನುವ
ಸಂದೇಶ ಹಬ್ಬಿಸಿರುವುದರಿಂದ ಕೋಟ್ಯಾನುಕೋಟಿ ಭಕ್ತಾಧಿಗಳ ಮನಸ್ಸಿಗೆ ಅತೀವ ಬೇಸರವನ್ನು ತಂದಿದೆ.ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಗುಂಪುಗೂಡಿಸಿಕೊಂಡು ಬಂದು ಕಾನೂನು ಬಾಹಿರ ಕೃತ್ಯ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಮತ್ತು ಹಾನಿಯುಂಟುಮಾಡುವ ಷಡ್ಯಂತ್ರ ನಡೆಸಲು ಉದ್ದೇಶಿಸಿರುವುದು ತಿಳಿದುಬಂದಿದೆ. ಅವರ ಯಾವುದೇ ಪ್ರಯತ್ನಕ್ಕೆ ಜೀವದಾಸೆ ಬಿಟ್ಟು ಹತ್ತಿಕ್ಕಲು ಗ್ರಾಮದ ಸಮಸ್ತರು ಒಂದಾಗಿ ಧೃಢ ನಿರ್ಧಾರ ಮಾಡಿರುತ್ತೇವೆ ಆದುದರಿಂದ ಮಾನ್ಯ ಅಧಿಕಾರ ವರ್ಗದಲ್ಲಿ ಮನವಿ ನೀಡುವ ಮುಖೇನ ಸಮಾಜದ ಶಾಂತಿ ಸೌಹಾರ್ಧತೆಯನ್ನು ಬಯಸಿ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ವಿಳಂಬಿಸದೆ ಸಮಾಜದ ಸಾಮರಸ್ಯ ಕದಡುವುದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜನಾರ್ಧನ ರಾವ್, ಭಾಸ್ಕರ್ ಧರ್ಮಸ್ಥಳ, ಡಿ ಕೇಶವ್ ಗೌಡ, ಪ್ರಭಾಕರ್ ಪೂಜಾರಿ, ವಿಠಲ್ ಶೆಟ್ಟಿ , ಶಾಂಭವಿ ರೈ, ದಿವಾಕರ್ ಭಟ್, ಚಾಯ ಪುರಂದರ ಶೆಟ್ಟಿ ಉಪಸ್ಥಿತರಿದ್ದರು.