• September 8, 2024

ಶ್ರೀ. ಧ.ಮಂ.ಆ.ಮಾಧ್ಯಮ ಶಾಲೆಯಲ್ಲಿ ತನು ಯೋಗಭೂಮಿ ವತಿಯಿಂದ ವಿಶೇಷ ಕಾರ್ಯಕ್ರಮ

 ಶ್ರೀ. ಧ.ಮಂ.ಆ.ಮಾಧ್ಯಮ ಶಾಲೆಯಲ್ಲಿ ತನು ಯೋಗಭೂಮಿ ವತಿಯಿಂದ ವಿಶೇಷ ಕಾರ್ಯಕ್ರಮ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತನು ರಂಗಭೂಮಿ ಇದರ ವತಿಯಿಂದ ವಿಶೇಷ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು .

ಈ ಕಾರ್ಯಕ್ರಮವನ್ನು ಕುಮಾರಿ ತನುಶ್ರಿ ಉಡುಪಿ ನಡೆಸಿಕೊಟ್ಟರು.ಬಹುಮುಖ ಪ್ರತಿಭೆಯ ಇವರು ಯೋಗ ಹಾಗೂ ನಾಟ್ಯದಲ್ಲಿ ಸಾಧನೆಗೈದ ಇವರು ಹಲವಾರು ಪ್ರಶಸ್ತಿ ಹಾಗೂ ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡಿದವರು.ಇವರು ನೃತ್ಯ ಹಾಗೂ ಯೋಗದ ಮುಖಾಂತರ ದೇಶಭಕ್ತಿಯನ್ನು ಬಿಂಬಿಸುವ ದೇಶದ ಸಂಸ್ಕೃತಿ ಸಂಸ್ಕಾರ ಬಿಂಬಿಸುವ, ಯೋಧರ ಕುರಿತಾದ ಕಾರ್ಯಕ್ರಮವನ್ನು ನೀಡಿದರು.

ತನು ಅವರ ಬಹುಮುಖ ಪ್ರತಿಭೆಯ ಅದ್ಭುತ ಅನಾವರಣ ನಿಜಕ್ಕೂ ಮೆಚ್ಚುವಂತಹುದು ಎಂದು ಕಾರ್ಯಕ್ರಮದ ಕುರಿತಾದ ತನ್ನ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.

ಹಲವಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.ಈ ಕಾರ್ಯಕ್ರಮವನ್ನು ಕುಮಾರಿ ಮನ್ವಿತ ನಿರೂಪಿಸಿ,ಕುಮಾರಿ ಅಂಜನಾ ಸ್ವಾಗತಿಸಿ ಆಶಿತಾ ಅತಿಥಿಗಳ ಕಿರುಪರಿಚ ನೀಡಿ ಕುಮಾರಿ ಚಿನ್ಮಯ್ ರೈ ಧನ್ಯವಾದ ಇತ್ತರು.

ತನುಶ್ರೀ ಅವರ ಹೆತ್ತವರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು .

ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಾಕ್ಷಿಗಳಾದರು .

Related post

Leave a Reply

Your email address will not be published. Required fields are marked *

error: Content is protected !!