• December 8, 2024

ಬೆಳ್ತಂಗಡಿ ತಾಲೂಕಿನಲ್ಲೇ ಮೊಟ್ಟಮೊದಲ ಬಾರಿಗೆ ರಮ್ಯ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲಾಕ್ಮಿ ಕಂಪೆನಿಯ ಕಾಸ್ಮೆಟಿಕ್ಸ್ ನೂತನ ಕೌಂಟರ್ ಶುಭಾರಂಭ

 ಬೆಳ್ತಂಗಡಿ ತಾಲೂಕಿನಲ್ಲೇ   ಮೊಟ್ಟಮೊದಲ ಬಾರಿಗೆ ರಮ್ಯ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲಾಕ್ಮಿ ಕಂಪೆನಿಯ ಕಾಸ್ಮೆಟಿಕ್ಸ್ ನೂತನ ಕೌಂಟರ್ ಶುಭಾರಂಭ

 

ಉಜಿರೆ: ರಮ್ಯಾ ಓನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲೇ ಮೊದಲ ಬಾರಿಗೆ ಲಾಕ್ಮಿ ಕಂಪನಿಯ ಹೊಸ ಕೌಂಟರ್ ಆಗಸ್ಟ್ 17 ರಂದು ಉಜಿರೆ ಗ್ರಾ.ಪಂ ನೂತನ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೊಳಿಸಿದರು. ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಶಾಂತ ಬಂಗೇರ ಟೇಪ್ ಕಟ್ ಮಾಡುವ ಮೂಲಕ ಲಾಕ್ಮಿ ಕಾಸ್ಮೆಟಿಕ್ ಸೆಂಟರ್ ನ್ನು ಉದ್ಘಾಟಿಸಿದರು.

ರಮ್ಯ ಒನ್ ಗ್ರಾಂ ಗೋಲ್ಡ್ ಮಾಲಕರಾದ ಪ್ರಸಾದ್ ಬಿಎಸ್, ಬಿಚಿತ್ರಾ ಪ್ರಸಾದ್, ದಂಪತಿ ಸಂಸ್ಥೆಗೆ ಆಗಮಿಸಿದ ಅತಿಥಿಗಳನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ್ ಕಾರಂತ್, ಬೆಳ್ತಂಗಡಿ ಪ್ರತಿಕ್ಷಾ ಫ್ಯಾನ್ಸಿ ಮಾಲಕರಾದ ಚಿದಾನಂದ ಇಡ್ಯ, ಉಜಿರೆ ಮಹಾವೀರ ಸೂಪರ್ ಮಾರ್ಕೆಟ್ ಮಾಲಕರಾದ ಪ್ರಭಾಕರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ವಿಧವಿಧದ ಕಂಪನಿಯ ಸೌಂದರ್ಯವರ್ಧಕಗಳು, ಬ್ಯಾಗ್ ಮತ್ತು ಟೈಲರಿಂಗ್ ವಸ್ತುಗಳು, ಶೃಂಗಾರ ಆಭರಣಗಳು, ಕೊಡೆ, ರೈನ್ ಕೋಟ್ಗಳು ಸಂಸ್ಥೆಯಲ್ಲಿ ದೊರೆಯುತ್ತದೆ .

Related post

Leave a Reply

Your email address will not be published. Required fields are marked *

error: Content is protected !!