• July 27, 2024

ಉಜಿರೆ : ಎಂ ಜಿಐ ಆರ್ ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ರಾಷ್ಟ್ರ ಮಟ್ಟದ ಜಾಗೃತಿ ಕಾರ್ಯಗಾರ

 ಉಜಿರೆ : ಎಂ ಜಿಐ ಆರ್ ಐ  ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ರಾಷ್ಟ್ರ ಮಟ್ಟದ ಜಾಗೃತಿ ಕಾರ್ಯಗಾರ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎಸ್ ಡಿಎಂ ರೋಟರಿ ಕರಿಯರ್ ಗೈಡೆನ್ಸ್ ಮತ್ತು ಪ್ಲೇಸ್ಮೆಂಟ್ ಸೆಂಟರ್ ಹಾಗೂ ಎಸ್ ಡಿಎಂ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಮಹಾರಾಷ್ಟ್ರದ ಮಹಾತ್ಮಗಾಂಧಿ ಇನ್ಸಿಟ್ಯೂಟ್ ಫಾರ್ ರೂರಲ್ ಇಂಡಸ್ಟ್ರಿಯಲೈಸೇಶನ್ ಸಂಸ್ಥೆಯ ವತಿಯಿಂದ ಎಂ ಜಿಐ ಆರ್ ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ರಾಷ್ಟ್ರ ಮಟ್ಟದ ಜಾಗೃತಿ ಕಾರ್ಯಗಾರವು ಆ.12 ರಂದು ಉಜಿರೆ ಎಸ್ ಡಿಎಂ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರುಗಿತು.

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್ ಕೆ ಎನ್ ಕಾರ್ಯಕ್ರಮ ಉದ್ಘಾಟಿಸಿದರು. ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ ಬಿಎ ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎಂ ಜಿ ಆರ್ ಐ ಸಂಸ್ಥೆಯ ನಿರ್ದೇಶಕ ಡಾ ಅಶುತೋಷ್ ಎ ಮುರ್ಕುಟೆ ಹಾಗೂ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ ಸತೀಶ್ಚಂದ್ರ. ಎಂ ಜಿ ಆರ್ ಐ ಸಂಸ್ಥೆಯ ಪ್ರಧಾನ ವೈಜ್ಞಾನಿಕ ಅಧಿಕಾರಿ ಎಚ್ ಡಿ ಸಿನ್ನೂರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!