• November 2, 2024

ವಿಶ್ವಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ಇದರ ಆಶ್ರಯದಲ್ಲಿ ಆ.14 ರಂದು ಬೃಹತ್ ಪಂಜಿನ ಮೆರವಣಿಗೆ

 ವಿಶ್ವಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ಇದರ ಆಶ್ರಯದಲ್ಲಿ ಆ.14 ರಂದು ಬೃಹತ್ ಪಂಜಿನ ಮೆರವಣಿಗೆ

 

ಉಜಿರೆ: ವಿಶ್ವ ಹಿಂದು ಪರಿಷದ್, ಭಜರಂಗದಳ ಬೆಳ್ತಂಗಡಿ ಪ್ರಖಂಡ, ಮಾತೃ ಶಕ್ತಿ, ದುರ್ಗವಾಹಿನಿ, ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಬೆಳ್ತಂಗಡಿ ವತಿಯಿಂದ ಸ್ವತಂತ್ರ್ಯ ಭಾರತದ ಕರಾಳ ಇತಿಹಾಸ ಅಖಂಡ‌ ಭಾರತ ಸಂಕಲ್ಪ ದಿನ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆಯು ಆಗಸ್ಟ್ 14 ರಂದು ಸಂಜೆ ಗಂಟೆ 6.30 ಕ್ಕೆ ಉಜಿರೆಯಲ್ಲಿ ನಡೆಯಲಿದೆ.

ಸಂಜೆ 6.30 ರಿಂದ ಸಭಾ ಕಾರ್ಯಕ್ರಮ ನಡೆದು ನಂತರ ಪಂಜಿನ ಮೆರವಣಿಗೆ ಮತ್ತು ಧ್ವಜಾರೋಹಣ ಜರುಗಲಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ಅನೇಕ ಭಾಗಗಳನ್ನು ಕಳೆದು ಕೊಂಡುಚಿಕ್ಕದಾಗಿದ್ದ ಭಾರತ ದೇಶವು 1947ಅಗಸ್ಟ್ 14ರ ಮಧ್ಯರಾತ್ರಿ ಪುನಃ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ಘನಘೋರ ದುರಂತವನ್ನು ನೆನಪಿಸುತ್ತಾ, ಕಳೆದುಹೋದ ಭಾರತದ ಭಾಗವನ್ನು ಮತ್ತೆ ಒಂದುಗೂಡಿಸಿ ಅಖಂಡ ಪರಮವೈಭವ ಭಾರತದ ನಿರ್ಮಾಣ ಸಾರಲು ಈ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಗುತ್ತದೆ.

Related post

Leave a Reply

Your email address will not be published. Required fields are marked *

error: Content is protected !!