• September 12, 2024

ಬಿ ಎಮ್ ಎಸ್ ನ ಸಂಸ್ಥಾಪನಾ ದಿನಾಚರಣೆ, ಸಂಘಟನಾ ನಿಧಿ ಬಿಡುಗಡೆ, ಮತ್ತು ಗೌರವಾರ್ಪಣೆ ಕಾರ್ಯಕ್ರಮ

 ಬಿ ಎಮ್ ಎಸ್ ನ ಸಂಸ್ಥಾಪನಾ ದಿನಾಚರಣೆ, ಸಂಘಟನಾ ನಿಧಿ ಬಿಡುಗಡೆ, ಮತ್ತು ಗೌರವಾರ್ಪಣೆ ಕಾರ್ಯಕ್ರಮ


ಮಂಗಳೂರು: ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನ ದಿನವನ್ನು ಜಿಲ್ಲಾ ಬಿಎಮ್ಎಸ್ ಕಚೇರಿ ಫೇಲಿಕ್ಸ್ ಪೈ
ಬಜಾರ್, ಮಂಗಳೂರಿನಲ್ಲಿ ಆಚರಿಸಲಾಯಿತು.

ಕಾರ್ಮಿಕ ಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಭಾರತೀಯ ಮಜ್ದೂರು ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಯು ವಹಿಸಿದ್ದರು.

ಭಾರತೀಯ ಮಜ್ದೂರು ಸಂಘದ ರಾಜ್ಯ ಉಪಾಧ್ಯಕ್ಷರಾದ ಭಗವಾನ್ ದಾಸ್ ರವರು ಸಂಸ್ಥಾಪನಾ ದಿನಾಚರಣೆಯ ಬಗ್ಗೆ ಪ್ರಾಸ್ತವಿಕ ಮಾತುಗಳನ್ನು ಮಾಡಿದರು.

ಮುಖ್ಯ ಅತಿಥಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಶ್ರೀ ಸೂರಜ್ ಕುಮಾರ್ ರವರು ಭಾಗವಹಿಸಿ ಬಿ ಎಮ್ ಎಸ್ ಸಂಘಟನೆ ರಾಷ್ಟ್ರ ಚಿಂತನೆಯನ್ನು ಕಾರ್ಮಿಕರ ವಲಯದಲ್ಲಿ ತಂದು ಕಾರ್ಮಿಕ ಸಂಘಟನೆ ಮಾಡುವುದರ ಮೂಲಕ, ದೇಶದ ನಂಬರ್ ಒಂದು ಸಂಘಟನೆ ಆಗಿದೆ ಬಿ ಎಮ್ ಎಸ್. ಸಂಘಟನೆಯ ಕಾರ್ಮಿಕರಿಂದ ರಾಷ್ಟ್ರ ನಿರ್ಮಾಣದ ಕಾರ್ಯ ಇನ್ನಷ್ಟು ವೇಗವಾಗಿ ಬೆಳಯಲಿ ಎಂದು ಆಶಯ ವ್ಯಕ್ತ ಪಡಿಸಿ ಹಾರೈಸಿದರು.

ನಂತರ ಮಾನನೀಯ ದತ್ತೊ ಪಂತ ತೇಂಗಡಿಜೀ ಯವರು ಆಂಗ್ಲ ಭಾಷೆಯಲ್ಲಿ ರಚಿಸಿದ Third way ಪುಸ್ತಕದ ತರ್ಜುಮೆಯನ್ನು ಕನ್ನಡದಲ್ಲಿ ಮಾಡಿದ
ಡಾ ಪದ್ಮನಾಭ ಭಟ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಆರ್ಥಿಕತೆ ಯನ್ನು ಕ್ರೋಡಿಕರಣಕ್ಕಾಗಿ ಸಂಘಟನಾ ನಿಧಿಯ ಕೂಪನ್ ಇದನ್ನು ಜಿಲ್ಲಾ ಅಧ್ಯಕ್ಷರು ಬಿಡುಗಡೆ ಗೊಳಿಸಿದರು.

ವೇದಿಕೆಯಲ್ಲಿ ಉಪಸ್ಥಿತಿದ್ದ ರಾಜ್ಯ ಕಾರ್ಯದರ್ಶಿಗಳಾದ ಜಯರಾಜ್ ಸಾಲ್ಯಾನ್ ಇವರು ಸಂಘಟನಾ ನಿಧಿಯ ಅವಶ್ಯಕತೆಯನ್ನು ಸಭೆಯ ಮುಂದಿಟ್ಟರು.

ವೇದಿಕೆಯಲ್ಲಿ ರಾಜ್ಯದ ನಿಕಟ ಪೂರ್ವ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ರೋಹಿತಾಶ್ವ, ಗೀತಾ ಧರ್ಮ ರಾಜ್, ಶಿಕ್ಷಣ ತಜ್ಞ ಡಾ ಪದ್ಮನಾಭ ಭಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ, ಸತೀಶ್ ಶೆಟ್ಟಿ, ವೆಂಕಪ್ಪ ನಾಯ್ಕ್, ಕುಮಾರ್ ನಾಥ ಶೆಟ್ಟಿ ಮತ್ತು ನೂರಾರು ಕಾರ್ಮಿಕ ನೇತಾರರು ಭಾಗವಹಿಸಿದರು.


ಬಿಎಂಎಸ್ ನ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ರವರು ಸ್ವಾಗತ ಮಾಡಿ, ಜಿಲ್ಲಾ ಉಪಾಧ್ಯಕ್ಷರಾದ ಗಣೇಶ್ ಕುಲಾಲ್ ಧನ್ಯವಾದ ನೀಡಿದರು, ಜಿಲ್ಲಾ ಸಹ ಕಾರ್ಯದರ್ಶಿ ಶಾಂತಪ್ಪ ಬೆಳ್ತಂಗಡಿ, ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು. ಜಿಲ್ಲಾ ಮಾಧ್ಯಮ ಪ್ರಮುಖ್ ರಾದ ವಿಗ್ನೇಶ್ ನಾಯ್ಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಪ್ರಥಮ್, ವಿವಿಧ ಕಾರ್ಯಕ್ರಮ ನಿರ್ವಹಿಸಿದ್ದರು.

Related post

Leave a Reply

Your email address will not be published. Required fields are marked *

error: Content is protected !!