ಮೈರೋಳ್ತಡ್ಕ:ಗ್ರಾಮ ಸುಭಿಕ್ಷಾ ಮತ್ತು ದೇವಾಸ್ಥಾನದ ಅಭಿವೃದ್ಧಿಯ ಸಮಾಲೋಚನಾ ಸಭೆ
ಮೈರೋಳ್ತಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಿಸಿ ಟ್ರಸ್ಟ್ ಗುರುವಾಯನಕೆರೆ, ಕಣಿಯೂರು ವಲಯದ ಬಂದಾರು -ಮೈರೋಳ್ತಡ್ಕ ಒಕ್ಕೂಟ ಹಾಗೂ ಶ್ರೀ ಸದಾಶಿವ ದೇವಸ್ಥಾನ ಕುರಾಯ ಬಂದಾರು ಸದಾಶಿವ ಭಜನಾ ಮಂಡಳಿ ಕುರಾಯ ಹಾಗೂ ಜನಜಾಗೃತಿ ಗ್ರಾಮ ಸಮಿತಿ ಬಂದಾರು ಮೈರೋಳ್ತಡ್ಕ ವತಿಯಿಂದ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷಾ ಮತ್ತು ದೇವಸ್ಥಾನದ ಅಭಿವೃದ್ಧಿ ಯ ಸಮಾಲೋಚನ ಸಭೆ ನ.20 ರಂದು ನಡೆಯಿತು.
ಗ್ರಾಮ ಸುಭಿಕ್ಷಾ ಕಾರ್ಯಕ್ರಮ ದ ಅಂಗವಾಗಿ ಶ್ರೀ ಸದಾಶಿವ ದೇವರಿಗೆ ಸಿಯಾಳ ಅಭಿಷೇಕ ಮಾಡಲಾಯಿತು.
ಶ್ರೀ ಸದಾಶಿವ ದೇವಸ್ಥಾನದ ಅಭಿವೃದ್ಧಿಯ ಸಮಾಲೋಚನ ಸಭೆಯ ಸಭಾ ಕಾರ್ಯಕ್ರಮ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಾಬು ಗೌಡರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಪರಮೇಶ್ವರಿ ಕೆ.ಗೌಡ.ಅಧ್ಯಕ್ಷರು ಗ್ರಾಮ ಪಂಚಾಯತ್ ಬಂದಾರು, ಶ್ರೀ ಸತೀಶ್ ಶೆಟ್ಟಿ, ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಬಿ. ಸಿ. ಟ್ರಸ್ಟ್, ದ. ಕ, ಶ್ರೀ ಯಶವಂತ ಯೋಜನಾಧಿಕಾರಿ ಗುರುವಾಯನಕೆರೆ,ಹಾಗೂ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಎಲ್ಲಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಯುತ ಸತೀಶ್ ಶೆಟ್ಟಿ ಯವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ,ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಗ್ರಾಮದ ಎಲ್ಲಾ ಬಂಧುಗಳು ಕೈಜೋಡಿಸಿದರೆ ಖಂಡಿತ ವಾಗಿಯೂ ದೇವಸ್ಥಾನ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ದೇವರಿಗೆ ಪ್ರಿಯವಾದ ಕಾರ್ತಿಕ ಮಾಸ ದಲ್ಲಿ ದೇವರನ್ನು ದಿಪೋತ್ಸವದ ಮೂಲಕ ಆರಾಧಿಸಲಾಗುತ್ತದೆ, ಈ ಶುಭ ಮಾಸದಲ್ಲಿ ಗ್ರಾಮಕ್ಕೆ ಸುಭಿಕ್ಷೆ ಯಾಗಬೇಕು, ದೇವಾಲಯದ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ಹೇಳಿದರು
.ರಾಜಕೀಯ ರಹಿತವಾಗಿ ದೇವಾಲಯದ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದಾಗ ದೇವಾಲಯದ ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳು ನಡೆಯಲು ಖಂಡಿತ ಸಾಧ್ಯವಿದೆ.ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಕಾರವು ಲಭಿಸುತ್ತದೆ ಹಾಗೂ ಆದಷ್ಟು ಬೇಗ ದೇವಾಲಯದ ಅಭಿವೃದ್ಧಿ ಕಾರ್ಯಗಳು ನಡೆದು ಗ್ರಾಮಕ್ಕೆ ದೇವರ ಅನುಗ್ರಹ ದೊರೆಯಲಿ ಎಂದು ತಿಳಿಸಿದರು.
ಯೋಜನಾಧಿಕಾರಿ ಶ್ರೀ ಯಶವಂತ ರವರು ಮಾತನಾಡಿ ಹರಿಹರ ರ ಕ್ಷೇತವಾದ ಬಂದಾರು ಗ್ರಾಮದ ಶ್ರೀ ಸದಾಶಿವ ದೇವಾಲಯದ ಅಭಿವೃದ್ಧಿ ಕಾರ್ಯಗಳು ಆದಷ್ಟು ಬೇಗ ನೆರವೇರಲಿ ಗ್ರಾಮಕ್ಕೆ ಸನ್ಮoಗಳವಾಗಲಿ ಎಂದು ಶುಭ ಹಾರೈಸಿದರು. ದೇವಾಲಯದ ವ್ಯವಸ್ಥಾಪನ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮ ದಲ್ಲಿ ಊರಿನ ಗಣ್ಯರು,ಜನಜಾಗೃತಿಯ ವಲಯಾಧ್ಯಕ್ಷರಾದ ರುಕ್ಮಯ್ಯಪೂಜಾರಿ ಮುರ್ತಾಜೆ, ಬಂದಾರು-ಮೈರೋಳ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಶ್ರೀಲತಾ, ಕೃಷ್ಣಯ್ಯ ಆಚಾರ್ಯ ಕಣಿಯೂರು ವಲಯದ ಮೇಲ್ವಿಚಾರಕಿ ಶ್ರೀಮತಿ ಪ್ರೇಮ, ಸೇವಾಪ್ರತಿನಿಧಿಗಳಾದ ಶ್ರೀಮತಿ ಚಂದ್ರಕಲಾ, ನಿರಂಜನ್,ಶ್ರೀಮತಿ ಸರೋಜ, ಹಾಗೂ ಊರಿನ ಎಲ್ಲಾ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಪದ್ಮುಂಜ ಸಿ. ಎ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಶ್ರೀ ತಿಮ್ಮಯ್ಯ ರವರು ಸ್ವಾಗತಿಸಿ, ಸೇವಾಪ್ರತಿನಿಧಿ ನಿರಂಜನ್ ಧನ್ಯವಾದಗೈದರು.