ಹಿರಿಯಡ್ಕ: ಬೈಲೂರಿನಲ್ಲಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಹಿರಿಯಡ್ಕ: ಕಾರ್ಕಳ ಉಡುಪಿ ರಸ್ತೆಯ ಹಿರಿಯಡ್ಕ ಬಳಿ ಬೈಲೂರು ಎಂಬಲ್ಲಿ ಧರ್ಮಸ್ಥಳದಿಂದ ಬೆಳಗಾಂ ಗೆ ಹೋಗುವ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೆ.28 ರಂದು ನಡೆದಿದೆ.
ಬೈಕ್ ಸವಾರ ರಾಂಗ್ ಸೈಡಿಂದ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬಸ್ ಜಖಂ ಗೊಂಡಿದ್ದು ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ಸಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ಬಸ್ಸಿಗೆ ಕಳುಹಿಸಿದ್ದಾರೆ.