• September 21, 2024

ನೂತನ ಹೆಜ್ಜೆಯನಿಡಲು ಮುಂದಾದ ಕಲಾ ತಪಸ್ವಿ ಸಾಂಸ್ಕೃತಿಕ ತಂಡ: ಕಲಾಭಿಮಾನಿಗಳಿಗೆ ವಿವಿಧ ಸ್ಪರ್ಧೆಗಳು

 ನೂತನ ಹೆಜ್ಜೆಯನಿಡಲು ಮುಂದಾದ ಕಲಾ ತಪಸ್ವಿ ಸಾಂಸ್ಕೃತಿಕ ತಂಡ: ಕಲಾಭಿಮಾನಿಗಳಿಗೆ ವಿವಿಧ ಸ್ಪರ್ಧೆಗಳು

ವಿಟ್ಲ: ಕಲೆ ಎನ್ನುವಂತದ್ದು ಯಾರಿಗೂ ಸುಲಭದಲ್ಲಿ ಒಳಿಯುವಂತದಲ್ಲ.ಕಲೆ ಒಳಿಯಬೇಕಾದ್ರೆ ಪರಿಶ್ರಮ, ಶ್ರದ್ದೆ, ಸಮಯ ಪಾಲನೆ ಇವನ್ನೆಲ್ಲ ಮೈಗೂಡಿಸಿಕೊಂಡು ತಪಸ್ಸನ್ನು ಮಾಡಲೇಬೇಕು. ಈ ರೀತಿ ಕಲೆಯನ್ನು ಒಳಿಸಿಕೊಂಡವರು ಅದೆಷ್ಟೋ ಜನ ನಮ್ಮ ಕಣ್ಣ ಮುಂದಿದ್ದಾರೆ. ಅದರಲ್ಲಿ ಕೆಲವರಿಗಾದರೂ ಅವಕಾಶವನ್ನು ನೀಡಬೇಕು, ಅವರಿಗೊಂದು ವೇದಿಕೆಯನ್ನು ಕಲ್ಪಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಆರಂಭವಾದದ್ದೇ ‘ ಕಲಾ ತಪಸ್ವಿ ‘ ಸಾಂಸ್ಕೃತಿಕ ತಂಡ.ಸುಮಾರು 30ಕ್ಕಿಂತ ಹೆಚ್ಚು ಕಲಾವಿದರನ್ನು ಒಳಗೊಂಡ ಈ ತಂಡದಲ್ಲಿ ಹಾಡು, ನೃತ್ಯ, ಪ್ರಹಸನ, ಜಾದು, ಮಿಮಿಕ್ರಿ, ಶ್ಯಾಡೋ ಪ್ಲೇ ಹೀಗೆ ವಿವಿಧ ಕಲೆಗಳ ಅನಾವರಣವನ್ನು ಕಲಾವಿದರು ಮಾಡುತ್ತಾರೆ.

ಅನೇಕ ಕಲಾಭಿಮಾನಿಗಳ ಮೆಚ್ಚುಗೆಯನ್ನು ಪಡೆದಿರುವ ಈ ತಂಡ, ಇದೀಗ ಹೊಸದೊಂದು ಹೆಜ್ಜೆಯನಿಡಲು ಮುಂದಾಗಿದೆ. ಅದೇ ‘ಕಲಾ ಯಶಸ್ವಿ’ ನಾಮಾಂಕಿತ ವಿವಿಧ ಸ್ಪರ್ಧೆಗಳು.

ಇದರಲ್ಲಿ ಸಂಗೀತ, ನೃತ್ಯ, ಚಿತ್ರಕಲೆ ಸ್ಪರ್ಧೆಗಳಿದ್ದು ಬಹುಮಾನವಾಗಿ ನಗದು, ಪದಕ, ಮತ್ತು ಪ್ರಶಸ್ತಿ ಪತ್ರಗಳು ಇರುತ್ತದೆ.
ಈ ಸ್ಪರ್ಧೆಯ ವಿಭಾಗಗಳನ್ನು, ನಿಯಮಗಳನ್ನು ಕೆಳಗೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :7090615880

Related post

Leave a Reply

Your email address will not be published. Required fields are marked *

error: Content is protected !!