• November 22, 2024

ಸೇಂಟ್ ಮೇರಿಸ್ ಚರ್ಚ್ ಶಿರ್ಲಾಲು -ವನಮಹೋತ್ಸವ ಕಾರ್ಯಕ್ರಮ

 ಸೇಂಟ್ ಮೇರಿಸ್ ಚರ್ಚ್ ಶಿರ್ಲಾಲು -ವನಮಹೋತ್ಸವ ಕಾರ್ಯಕ್ರಮ

 

ಶಿರ್ಲಾಲು: ಸೇಂಟ್ ಮೇರಿಸ್ ಚರ್ಚ್ ಶಿರ್ಲಾಲು , ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ, ಕಾನ್ಫರೆನ್ಸಾ ಎಪಿಸ್ಕೋಪಾಲೆ ಇಟಾಲಿಯಾನ ಹಾಗೂ ಕಾರಿತಾಸ್ ಇಂಡಿಯಾ- ಸ್ಪರ್ಶ ಕಾರ್ಯಕ್ರಮ ಇವುಗಳ ಸಹಯೋಗದೊಂದಿಗೆ ಕ್ಯಾನ್ಸರ್ ಹಾಗೂ ಇತರ ರೋಗದ ವಿರುದ್ಧ ಬಹುಉಪಯುಕ್ತವಾದ ಲಕ್ಷ್ಮಣಫಲ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಜುಲೈ 10 ರಂದು ಸೇಂಟ್ ಮೇರಿಸ್ ಚರ್ಚ್ನ ನ ಆವರಣದಲ್ಲಿ ಆಚರಿಸಲಾಯಿತು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಹಾಗೂ ಸ್ಥಳೀಯ ಧರ್ಮಗುರುಗಳಾದ ವಂದನೀಯ ಫಾದರ್ ಬಿನೋಯಿ ಎ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿ “ಸುಂದರ ಮನಸ್ಸಿನ ಬಾಹ್ಯ ಪ್ರತೀಕವೇ ಸುಂದರವಾದ ಪರಿಸರ” ಎನ್ನುವ ನುಡಿಯೊಂದಿಗೆ ವನಮಹೋತ್ಸವದ ಮಹತ್ವದ ಬಗ್ಗೆ ತಿಳಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಚರ್ಚಿನ ಟ್ರಸ್ಟಿಗಳಾದ ಸನ್ನಿ ಪುಳಿಕ್ಕಲ್, ಮನೋಜ್ ಪಲಾಯಿಲ್, ಸಜಿ ಪನಯೋಲಿಲ್,ಸಂಡೆ ಸ್ಕೂಲ್ ನ ಮುಖ್ಯೋಪಾಧ್ಯಾಯಿನಿ ವಂದನೀಯ ಸಿಸ್ಟರ್ ಜೋನ್ಸಿ ಎಮ್. ಎಸ್. ಎಮ್. ಐ, ಕೆ. ಎಸ್. ಎಮ್. ಸಿ. ಎ. ಸಂಘಟನೆಯ ಅಧ್ಯಕ್ಷರಾದ ಜೋಬ್ ಮಾಂಪುಝ, ಮಾತ್ರುವೇದಿ ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಶೈನಿ ಚೆಂಬಕರ, ಎಸ್.ಎಮ್.ವೈ.ಎಂ ಸಂಘಟನೆಯ ಅಧ್ಯಕ್ಷರಾದ ಸಿಬಿನ್ ಸಣ್ಣಿ ಕಪ್ಪಲುಮಾಕ್ಕಲ್, ಸಂಡೆ ಸ್ಕೂಲ್ ನ ಲೀಡರ್ ಕುಮಾರಿ ಲೇಘ ಕನಿಚಿರಯಿಲ್, ಚರ್ಚ್ ನ ವಿವಿಧ ಸಂಘಟನೆಗಳ ಪ್ರತನಿಧಿಗಳು ಹಾಗೂ ದೇವಾಲಯದ ಸರ್ವ ಸದಸ್ಯರು ಸಹಕರಿಸಿದರು.

ಮಿಷನ್ ಲೀಗ್ ಸಂಘಟನೆಯ ವಿಧ್ಯಾರ್ಥಿ ಬಳಗದವರು ಪರಿಸರ ಸಂರಕ್ಷಣೆಯ ಅರಿವನ ಗೀತೆಯನ್ನು ಹಾಡಿದರು. ತದನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತೀ ಕುಟುಂಬಕ್ಕೆ ಲಕ್ಷಣಫಲದ ಗಿಡವನ್ನು ಉಚಿತವಾಗಿ ವಿತರಿಸಲಾಯಿತು.

Related post

Leave a Reply

Your email address will not be published. Required fields are marked *

error: Content is protected !!