ಪ್ರಧಾನಿ ನರೇಂದ್ರ ಮೋದಿಜಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಎರಡನೇ ಭಾರಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಎಲ್ಲಾ ಬೂತ್ ಗಳಲ್ಲಿ ಮನ್ ಕೀ ಬಾತ್ ವೀಕ್ಷಣೆ ಮಾಡಿದ ಕಾರ್ಯಕರ್ತರಿಗೆ ಮಂಡಲದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆಯಿತು. ಹಿರಿಯರಾದ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ರವರು ದೀನ್ ದಯಾಳ್ ಜಿಯವರ ಜೀವನ ಚರಿತ್ರೆಯನ್ನು ತಿಳಿಸಿದರು ಅವರ ಆದರ್ಶ ಗಳನ್ನು ಸಂಘಟನೆಗೆ ಹಾಕಿದ ಬುನಾದಿಯನ್ನು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಮಂಡಲ ಕಾರ್ಯದರ್ಶಿ ಗಿರೀಶ್ ಡೊಂಗ್ರೆ, ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ರಾಜೇಶ್ ಪ್ರಭು, ನಗರ ಪಂಚಾಯತ್ ಸದಸ್ಯರಾದ ಶರತ್ ಕುಮಾರ್, […]Read More
ಕಸ್ತೂರಿರಂಗನ್ ವರದಿಯ ಕುರಿತಾಗಿ ವಿಧಾನಸೌಧದಲ್ಲಿ ಸಮಾಲೋಚನಾ ಸಭೆ: ಈ ವರದಿ ತಾಲೂಕಿನಲ್ಲಿ ತೊಂದರೆಯುಂಟಾಗುವುದರಿಂದ
ವಿಧಾನಸೌಧದಲ್ಲಿ ಇಂದು ಕರ್ನಾಟಕ ರಾಜ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಕಸ್ತೂರಿರಂಗನ್ ವರದಿಯ ಕುರಿತಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕರಾದ ಶ್ರೀ ಹರೀಶ್ ಪೂಂಜರವರು ಭಾಗವಹಿಸಿ,ಈ ವರದಿಯ ಅನುಷ್ಟಾನದಿಂದಾಗಿ ನಮ್ಮ ತಾಲೂಕಿನ ಅನೇಕ ಗ್ರಾಮಗಳ ರೈತರು ಹಾಗು ನಿವಾಸಿಗಳಿಗೆ ತೊಂದರೆಯುಂಟಾಗುವುದರಿಂದ ಈ ವರದಿಯನ್ನು ಅನುಷ್ಠಾನಗೊಳಿಸಬಾರದೆಂದು ಅಭಿಪ್ರಾಯವನ್ನು ತಿಳಿಸಿದರು.Read More
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಳೆಂಜ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ರೂ 2 ಕೋಟಿ ಅನುಧಾನ ಬಿಡುಗಡೆ ಮಾಡುವಂತೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಶಾಸಕ ಹರೀಶ್ ಪೂಂಜರವರು ಮನವಿ ಸಲ್ಲಿಸಿದರು. ಬಳೆಂಜ ಶಾಲೆಯು ಪ್ರಾರಂಭವಾಗಿ 75 ವರ್ಷಗಳನ್ನು ಪೂರೈಸುತ್ತಿದ್ದು, ಬಳೆಂಜ, ನಾಲ್ಕೂರು, ತೆಂಕಕಾರಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಕೊಠಡಿಗಳ ನಿರ್ಮಾಣ ಅವಶ್ಯವಾಗಿರುತ್ತದೆ. ಈ […]Read More
ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಅವರನ್ನು ಇಂದು ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ ರವರು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಮೂಲಸೌಕರ್ಯ ಅಭಿವೃದ್ದಿಗಳ ಬಗ್ಗೆ ಚರ್ಚಿಸಿದರು. ಪ್ರಮುಖವಾಗಿ ಮಂಗಳೂರು-ಬೆಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಸುಗಮಗೊಳಿಸುವುದು, ಮಾಣಿ-ಸಂಪಾಜೆ ರಸ್ತೆ ಮೇಲ್ದರ್ಜೆ ಕಾಮಗಾರಿ ಕುರಿತ ವಿಸ್ತೃತ ಯೋಜನಾ ವರದಿ (ಡಿಪಿಆರ್) ಹಾಗೂ ಇತರ ವಿಚಾರಗಳ ಕುರಿತು ಸಮಾಲೋಚಿಸಿದರು.Read More
ಬೆಳ್ತಂಗಡಿ :ಬಿಜೆಪಿ ಬೆಳ್ತಂಗಡಿ ಸದಸ್ಯತ್ವ ಅಭಿಯಾನ ಕಾರ್ಯಾಗಾರಆ 30 ರಂದು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಡಲದ ಉಸ್ತುವಾರಿ ಕಿಶೋರ್ ಕುಮಾರ್ ಪುತ್ತೂರು ಮಾಹಿತಿ ನೀಡಿದರು. ದೇವದಾಸ್ ಶೆಟ್ಟಿ ಸದಸ್ಯತಾ ಅಭಿಯಾನ ಮಾಹಿತಿ ನೀಡಿದರು. ಪ್ರದರ್ಶನ ಮಾಹಿತಿಯನ್ನು ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ನೀಡಿದರು. ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿದರು. ಮಂಡಲ […]Read More
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಜನ್ ಮನ್ (ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ್ ಮಹಾ ಅಭಿಯಾನ್) ಯೋಜನೆಯಡಿ ದ. ಕ. ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಒಟ್ಟು 10.32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಬುಡಕಟ್ಟು ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ಈ ಪಿಎಂ ಜನ್ ಮನ್ ಯೋಜನೆಯಡಿ 2024-25ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಗುರುತಿಸಿ […]Read More
ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಶಾಸಕ ಬಿ ವೈ ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿದರು . ಕರ್ನಾಟಕದ ರಾಜಕೀಯ ವಿದ್ಯಮಾನಗಳು ಹಾಗೂ ಪಕ್ಷದ ಸಂಘಟನೆ, ಹೋರಾಟಗಳು ಅದರಲ್ಲೂ ಇತ್ತೀಚೆಗೆ ಮೈಸೂರು ಚಲೋ ಯಶಸ್ವಿ ಬೃಹತ್ ಪಾದಯಾತ್ರೆ ನಡೆಸಿದ ಪರಿಣಾಮದ ಕುರಿತು ವಿವರಣೆ ನೀಡಲಾಯಿತು. ಪಾದಯಾತ್ರೆಯ ತರುವಾಯ ಕಾರ್ಯಕರ್ತರಲ್ಲಿ ವ್ಯಕ್ತವಾಗುತ್ತಿರುವ ಸಂಘಟನಾತ್ಮಕ ಉತ್ಸಾಹ ಹಾಗೂ ಸಮರ್ಪಣಾ ಮನೋಭಾವದ ಹೋರಾಟದ ಭಾಗಿತ್ವದ ಕುರಿತು […]Read More
ಪ್ರಧಾನಿ ನರೇಂದ್ರ ಮೋದಿ ಯವರ ವಿರುದ್ದ ಪ್ರಚೋದನಕಾರಿ ಭಾಷಣ, ಸಮಾಜದಲ್ಲಿ ಅಶಾಂತಿ ಮತ್ತು ಗಲಭೆಗೆ ಪ್ರಚೋದನೆ ಹೇಳಿಕೆ ನೀಡಿದ ರಕ್ಷಿತ್ ಶಿವರಾಂ ವಿರುದ್ಧ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಸಾವ್ಯ, ಪದಾಧಿಕಾರಿಗಳಾದ ಪ್ರಕಾಶ್ ಬಾರ್ಯ, ಗಿರೀಶ್ ಗೌಡ ಬಿ. ಕೆ, ಹರೀಶ್ ಸoಬೊಲ್ಯ, ಪವನ್ ,ಜಗದೀಶ್ ಕನ್ನಾಜೆ, ಮೇಘರಾಜ್, ಸನತ್ ನಾಲ್ಕೂರು, ಪ್ರಮುಖರಾದ ಪ್ರದೀಪ್ ಗುರುವಾಯನಕೆರೆ, ಪ್ರದೀಪ್ ಶೆಟ್ಟಿ, ಉಪಸ್ಥಿತರಿದ್ದರು.Read More