• October 16, 2024

ಬಳೆಂಜ ಹಿ. ಪ್ರಾ ಶಾಲೆಯ ಅಭಿವೃದ್ಧಿಗೆ ರೂ 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶಾಸಕ ಹರೀಶ್ ಪೂಂಜರವರು ಮನವಿ

 ಬಳೆಂಜ ಹಿ. ಪ್ರಾ ಶಾಲೆಯ ಅಭಿವೃದ್ಧಿಗೆ ರೂ 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ  ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶಾಸಕ   ಹರೀಶ್ ಪೂಂಜರವರು ಮನವಿ

 

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಳೆಂಜ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ರೂ 2 ಕೋಟಿ ಅನುಧಾನ ಬಿಡುಗಡೆ ಮಾಡುವಂತೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಶಾಸಕ ಹರೀಶ್ ಪೂಂಜರವರು ಮನವಿ ಸಲ್ಲಿಸಿದರು.

ಬಳೆಂಜ ಶಾಲೆಯು ಪ್ರಾರಂಭವಾಗಿ 75 ವರ್ಷಗಳನ್ನು ಪೂರೈಸುತ್ತಿದ್ದು, ಬಳೆಂಜ, ನಾಲ್ಕೂರು, ತೆಂಕಕಾರಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಕೊಠಡಿಗಳ ನಿರ್ಮಾಣ ಅವಶ್ಯವಾಗಿರುತ್ತದೆ. ಈ ವರ್ಷ ಅಮೃತ ಮಹೋತ್ಸವವನ್ನು ನೆರವೇರಿಸಲು ಬಳೆಂಜ ಶಿಕ್ಷಣ ಟ್ರಸ್ಟ್ ರಚಿಸಿ ದಾನಿಗಳ ಸಹಕಾರವನ್ನು ಬಳಸಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಶಿಕ್ಷಣ ಇಲಾಖೆಯ ಮೂಲಕ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ರೂ.2.00 ಕೋಟಿಗಳ ವಿಶೇಷ ಅನುದಾನ ಮಂಜೂರು ಮಾಡುವಂತೆ ಶಾಸಕ ಹರೀಶ್ ಪೂಂಜ ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

Related post

Leave a Reply

Your email address will not be published. Required fields are marked *

error: Content is protected !!