ಕನ್ಯಾಡಿ||: ಬೆಳ್ತಂಗಡಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ಆ. 16 ರಂದು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-2 ಧರ್ಮಸ್ಥಳದಲ್ಲಿ ನಡೆಯಿತು. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಸರಕಾರಿ ಪ್ರೌಢ ಶಾಲೆಯ 14 ಮಂದಿ ಬಾಲಕ ಮತ್ತು ಬಾಲಕಿಯರು ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದರಲ್ಲಿ 7 ಮಂದಿ ಮಕ್ಕಳು ಜಿಲ್ಲಾ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ. ಉಜಿರೆ ಬದುಕು ಕಟ್ಟೋಣ ಬನ್ನಿ ತಂಡವು ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದರಿಂದ ಇಂದು ವಿಜೇತರಾದ ಮಕ್ಕಳು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ (ಕನಸಿನ ಮನೆ) […]
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾರವರ ಹುಟ್ಟು ಹಬ್ಬದ ಪ್ರಯುಕ್ತ ಕೆ.ಎಂ.ಸಿ ಹಾಸ್ಪಿಟಲ್ ಸಹಯೋಗದಿಂದ ಬೆಳ್ತಂಗಡಿ ಹರೀಶ್ ಪೂಂಜಾ ಅಭಿಮಾನಿಗಳಿಂದ ಶಾಸಕ ಹರೀಶ್ ಪೂಂಜಾ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಮತ್ತು ಅಂಗಾಂಗ ದಾನ ಷೋಷಣೆ ಕಾರ್ಯಕ್ರಮ ಆಗಸ್ಟ್.17 ರಂದು ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಉದ್ಘಾಟಿಸಿದರು. ಈ ವೇಳೆ ಮೊಗ್ರು ಗ್ರಾಮದ 4 ಜನ ರಕ್ತದಾನ ಮಾಡಿರುವ ಹಾಗೂ ಒಬ್ಬರು ಅಂಗಾಂಗ ದಾನ […]Read More
ಬಂದಾರು: ಬಂದಾರು ಗ್ರಾಮಪಂಚಾಯತ್ ಆಡಳಿತ, ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣಾ ಸಮಿತಿ ಮತ್ತು ಬಂದಾರು-ಮೊಗ್ರು ಗ್ರಾಮಗಳ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಭಾರತಮಾತೆಯ ಸುಂದರ ಸ್ತಬ್ದ ಚಿತ್ರವುಳ್ಳ ತ್ರಿವರ್ಣಾಲಂಕೃತ ವಾಹನದೊಂದಿಗೆ ಕೊಪ್ಪದಡ್ಕದಿಂದ ಹೊರಟ ಜಾಥಾದಲ್ಲಿ ಗ್ರಾಮಸ್ಥರು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಬಾವುಟ ಪುಟಾಣಿ ಕೈಗಳಲ್ಲಿ ಎತ್ತಿ ಹಿಡಿದ ಬಾವುಟಗಳು, ನಾಸಿಕ್ ಬ್ಯಾಂಡ್ , ದೇಶಾಭಿಮಾನದ ಘೋಷಣೆಗಳು ಮೆರವಣಿಗೆಗೆ ಮೆರುಗು ನೀಡಿತು. ನಿವೃತ್ತ ಎ.ಎಸೈ ಬಾಬು […]Read More
ಬೆಳ್ತಂಗಡಿ: ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವತಿಯಿಂದ 75ನೇ ವರ್ಷದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯನ್ನು ಮುಳಿಯ ಜ್ಯುವೆಲ್ಸ್ ಮುಂಭಾಗದಲ್ಲಿ ಇಂದು ಆಚರಿಸಲಾಯಿತು. ಧ್ವಜಾರೋಹಣವನ್ನು ಪ್ರಸಕ್ತ ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೋಮಸ್ ಫಿಲಿಪ್ ಅವರು ನೆರವೇರಿಸಿ ಶುಭವನ್ನು ಹಾರೈಸಿದರು.ಈ ಸಂದರ್ಭದಲ್ಲಿ ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.Read More
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ ಆಗಸ್ಟ್ 12 ರ ಸಂಜೆ 6 ಗಂಟೆಯಿಂದ ಆ. 15 ರ ರಾತ್ರಿ 9 ರವರೆಗೆ ನಡೆಯಲಿದ್ದು, 75 ಗಂಟೆಗಳ ನಿರಂತರ ಕಾರ್ಯಕ್ರಮದಲ್ಲಿ ಪ್ರತಿ ಗಂಟೆಗೊಮ್ಮೆ ಒಬ್ಬ ಮಹನೀಯರಂತೆ ಒಟ್ಟು 75 ಅವಿಖ್ಯಾತ(ಇದುವರೆಗೆ ಹೆಚ್ಚು ಪರಿಚಯಿಸಲ್ಪಡದ) ಸ್ವಾತಂತ್ರ್ಯ ಕಲಿಗಳ ಪರಿಚಯ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳು ಜರುಗಲಿದೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಈ ಸುಸಂದರ್ಭದಲ್ಲಿ ಉಪನಿಷತ್ತಿನಿಂದ […]Read More
ಬಂದಾರು:75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶೇಷವಾಗಿ ದೇಶದಾದ್ಯಂತ ಆಚರಿಸುತ್ತಿರುವ ಹಿನ್ನಲೆಯಲ್ಲಿ ಬಂದಾರು ಪಂಚಾಯತ್ ನಲ್ಲಿ ನಡೆಯಲಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯು ಕೂಡ ಅತ್ಯಂತ ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಅವಿಸ್ಮರಣೀಯ ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ಬಂದಾರು,ಮೊಗ್ರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಅಧ್ಯಕ್ಷರು,ಉಪಾಧ್ಯಕ್ಷರು ಅಭಿವೃದ್ಧಿ ಅಧಿಕಾರಿ ಸರ್ವಸದಸ್ಯರು, ಸಿಬ್ಬಂದಿ ವರ್ಗ ತಿಳಿಸಿದ್ದಾರೆ.Read More
ಕುಂಟಾಲಪಲ್ಕೆ: ಸ. ಹಿ ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಬಂದಾರು: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆ ಯಲ್ಲಿ ಆ.10ರಂದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ಪೋಷಕರಿಗೆ ನೀಡಿದರು. ನಂತರ 1 ರಿಂದ 3 ನೇ ತರಗತಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆ ಮತ್ತು ಬಾವುಟದ ಚಿತ್ರ ಬಿಡಿಸುವ ಸ್ಪರ್ಧೆ, 4 ಮತ್ತು5 ನೇ ತರಗತಿ ಗೆ ಗೀತಗಾಯನ(ದೇಶಭಕ್ತಿ […]Read More
ಉಜಿರೆ: ಮುಂಬರುವ ಗಣೇಶೋತ್ಸವವನ್ನು ಆಚರಿಸುವ ಕುರಿತು ಉಜಿರೆಯ ಶಾರದಾ ಮಂಟಪದಲ್ಲಿ ಆ.8 ರಂದು ಬೆಳ್ತಂಗಡಿ ತಾಲೂಕಿನ ಗಣೇಶ ಮಂಡಳಿಗಳ ಸಭೆ ಜರುಗಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಆನಂದ ಗೌಡ ಇವರು ಮಾತನಾಡಿ ಲೋಕಮಾನ್ಯ ತಿಲಕರು ಹಿಂದೂ ಸಂಘಟನೆ ಹಾಗೂ ಧರ್ಮ ಜಾಗೃತಿ ಉದ್ದೇಶದಿಂದ ಗಣೇಶೋತ್ಸವವನ್ನು ಆರಂಭ ಮಾಡಿದರು. ಸದ್ಯ ಸಾರ್ವಜನಿಕ ಗಣೇಶೋತ್ಸವವು ತಮ್ಮ ಮೂಲ ಉದ್ದೇಶವನ್ನು ಮರೆತಿದೆ. ಗಣೇಶೋತ್ಸವ ಸಂದರ್ಭದಲ್ಲಿ ಚಿತ್ರ ವಿಚಿತ್ರ ಮೂರ್ತಿ ಮಾಡುವುದರಿಂದ ಗಣಪತಿಯ ವಿಡಂಬನೆ ಯಾಗುತ್ತಿದೆ. ಅದಕ್ಕಾಗಿ ಶಾಸ್ತ್ರೀಯ ಗಣೇಶ […]Read More
ಉಜಿರೆ: ಉಜಿರೆ ಶ್ರೀ ಧ. ಮ. ಕಾಲೇಜು (ಸ್ವಾಯತ್ತ )ವತಿಯಿಂದ ಆ.10 ರಂದು ಉಜಿರೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಮಾತೃ ಶ್ರೀ ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಶ್ರೀ ಧ. ಮ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್,ಡಾ. ಸತೀಶ್ಚಂದ್ರ, ಕಾಮನ್ ವೇಲ್ತ್ ಕ್ರೀಕೂಟದಲ್ಲಿ ಪದಕ ವಿಜೇತ ಕಾಲೇಜು ಹಳೆ ವಿದ್ಯಾರ್ಥಿ ಗುರುರಾಜ್ಭಾಗವಹಿಸಿದ್ದರು. […]Read More
ಗುರುವಾಯನಕೆರೆ: ಭಕ್ತಿ ಹೆಜ್ಜೆ ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿ ಗುರುವಾಯನಕೆರೆ ಆಶ್ರಯದಲ್ಲಿ ದ. ಕ. ಜಿಲ್ಲೆಯ ಆಹ್ವಾನಿತಾ ಭಜನಾ ಮಂಡಳಿಗಳಿಂದ ಹವ್ಯಕ ಭವನ ಗುರುವಾಯನಕೆರೆಯಲ್ಲಿ ” ಭಕ್ತಿ ಹೆಜ್ಜೆ ” ಕುಣಿತ ಭಜನೋತ್ಸವ ಆ .7ರಂದು ವಿಜೃಂಭಣೆಯಿಂದ ಜರುಗಿತು. ಡಾ ವೇಣು ಗೋಪಾಲ ಶರ್ಮ ರವರಿಂದ ಉದ್ಘಾಟನೆ ಗೊಂಡ ಕುಣಿತ ಭಜನೋತ್ಸ ವವು ಹಲವು ಭಜಕರ ಮತ್ತು ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿಯ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರುಗಿತು. ಈ ಭಜನಾ ಮಹೋತ್ಸವದಲ್ಲಿ ತಾಲೂಕಿನ […]Read More