• October 13, 2024

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ

 ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ ಆಗಸ್ಟ್ 12 ರ ಸಂಜೆ 6 ಗಂಟೆಯಿಂದ ಆ. 15 ರ ರಾತ್ರಿ 9 ರವರೆಗೆ ನಡೆಯಲಿದ್ದು, 75 ಗಂಟೆಗಳ ನಿರಂತರ ಕಾರ್ಯಕ್ರಮದಲ್ಲಿ ಪ್ರತಿ ಗಂಟೆಗೊಮ್ಮೆ ಒಬ್ಬ ಮಹನೀಯರಂತೆ ಒಟ್ಟು 75 ಅವಿಖ್ಯಾತ(ಇದುವರೆಗೆ ಹೆಚ್ಚು ಪರಿಚಯಿಸಲ್ಪಡದ) ಸ್ವಾತಂತ್ರ್ಯ ಕಲಿಗಳ ಪರಿಚಯ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳು ಜರುಗಲಿದೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಈ ಸುಸಂದರ್ಭದಲ್ಲಿ ಉಪನಿಷತ್ತಿನಿಂದ ಹಿಡಿದು ಉಪಗ್ರಹದವರೆಗೆ ಭಾರತದ ಸಾಧನೆಗಳ ಹೆಗ್ಗುರುತುಗಳನ್ನು ಯಥಾಮತಿ,ಯಥಾಸಾಮರ್ಥ್ಯಾ ಸ್ಮರಿಸುವ ಮೂಲಕ ಭಾರತೀಯರಲ್ಲಿ ದೇಶಾಭಿಮಾನದ ಸ್ಫೂರ್ತಿಯ ನಂದಾದೀವಿಗೆಯನ್ನು ಬೆಳಗುವಂತೆ ಮಾಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಭಾರತೀಯ ಕ್ಷಾತ್ರ ಪರಂಪರೆಯ ಮತ್ತು ಸ್ವರಾಜ್ಯ’ ವಿಷಯಗಳೂ ಸೇರಿದಂತೆ ಹಲವು ಸಂವಾದಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಪ್ರಶ್ನೆ, ಏಕಪಾತ್ರಾಭಿನಯ, ‘ಈಸೂರು ದಂಗೆ’ ರಂಗನಾಟಕ ವಾಚನ, ‘ಹಲಗಲಿಯ ಬೇಡರು’ ಐತಿಹಾಸಿಕ ನಾಟಕ, ಚರ್ಚೆ, ಉಪನ್ಯಾಸ, ಸೋಬಾನೆ ಪದ, ಭಜನೆ, ದೇಶಭಕ್ತಿ ಗೀತೆಗಳು, ಜಾನಪದ ಗೀತೆಗಳು, ಹಾಸ್ಯ ಗೀತೆಗಳು, ನಾಟಕ, ತಾನಾಜಿ ವಂಶಸ್ಥರಿಂದಲೇ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ ಕೇಳುವ ಅವಕಾಶವನ್ನು ಇಲ್ಲಿ ಕಲ್ಪಿಸಿಕೊಡಲಾಗಿದೆ.

‘ಇವಿಷ್ಟೇ ಅಲ್ಲದೆ, ಭಾರತೀಯ ಕಾಲಮಾನ ರಾತ್ರಿ 12 ಗಂಟೆಯ ನಂತರ ಅನಿವಾಸಿ ಭಾರತೀಯರು ಪಾಲ್ಗೊಂಡು ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!