• June 15, 2024

ಭಕ್ತಿ ಹೆಜ್ಜೆ ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿ ಗುರುವಾಯನಕೆರೆ ಆಶ್ರಯದಲ್ಲಿ “ಭಕ್ತಿ ಹೆಜ್ಜೆ ” ಕುಣಿತ ಭಜನೋತ್ಸವ

 ಭಕ್ತಿ ಹೆಜ್ಜೆ ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿ ಗುರುವಾಯನಕೆರೆ ಆಶ್ರಯದಲ್ಲಿ “ಭಕ್ತಿ ಹೆಜ್ಜೆ ” ಕುಣಿತ ಭಜನೋತ್ಸವ

ಗುರುವಾಯನಕೆರೆ: ಭಕ್ತಿ ಹೆಜ್ಜೆ ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿ ಗುರುವಾಯನಕೆರೆ ಆಶ್ರಯದಲ್ಲಿ ದ. ಕ. ಜಿಲ್ಲೆಯ ಆಹ್ವಾನಿತಾ ಭಜನಾ ಮಂಡಳಿಗಳಿಂದ ಹವ್ಯಕ ಭವನ ಗುರುವಾಯನಕೆರೆಯಲ್ಲಿ ” ಭಕ್ತಿ ಹೆಜ್ಜೆ ” ಕುಣಿತ ಭಜನೋತ್ಸವ ಆ .7ರಂದು ವಿಜೃಂಭಣೆಯಿಂದ ಜರುಗಿತು.

ಡಾ ವೇಣು ಗೋಪಾಲ ಶರ್ಮ ರವರಿಂದ ಉದ್ಘಾಟನೆ ಗೊಂಡ ಕುಣಿತ ಭಜನೋತ್ಸ ವವು ಹಲವು ಭಜಕರ ಮತ್ತು ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿಯ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಈ ಭಜನಾ ಮಹೋತ್ಸವದಲ್ಲಿ ತಾಲೂಕಿನ ಎಲ್ಲಾ ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಹಾಗೂ ಸಾಮಾಜಿಕ ಮುಖಂಡರುಗಳು ಆಗಮಿಸಿ ತನು, ಮನ,ಧನಗಳ ಸಹಕಾರವನ್ನು ನೀಡಿ ಭಕ್ತಿ ಹೆಜ್ಜೆಯ ವೈಭವಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಸಂಯೋಜಕರು ಹಾಗೂ ಭಜನಾ ತರಬೇತಿ ದಾರರಾದ ಸಂದೇಶ್ ಮದ್ದಡ್ಕ ಹಾಗೂ ಅಶೋಕ್ ಕಳಸ ಬೈಲುರವರಿಗೆ ಪೋಷಕರು ಮತ್ತು ಭಜಕ ಮಕ್ಕಳು ಗುರುವಂದನೆ ಸಲ್ಲಿಸಿದರು.

ಭಕ್ತಿಹೆಜ್ಜೆ ಯಲ್ಲಿ ಭಾಗಿಯಾದ ಮಂಡಳಿ ಯ ಭಜಕರನ್ನು ಭ್ರಾಮರಿ ಮಂಡಳಿ ಯ ಪುಟ್ಟ ಮಕ್ಕಳು ಹಣೆಗೆ ತಿಲಕ ವಿತ್ತು ಸಾಂಪ್ರದಾಯಿಕ ವಾಗಿ ಸ್ವಾಗತಿಸಿ ಸಂಸ್ಕಾರ ಸಂಸ್ಕೃತಿ ಯನ್ನು ಉಳಿಸುವ ಕಾಯಕಕ್ಕೆ ಮುನ್ನುಡಿ ಬರೆದರು.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸಹಕಾರದೊಂದಿಗೆ ಬೆಳಗ್ಗೆ 7ರಿಂದ ರಾತ್ರಿ8ಗಂಟೆಯ ವರೆಗೂ ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾವಿರಾರು ಭಕ್ತರು ಅನ್ನ ಪ್ರಸಾದ ಸೇವಿಸಿದರು. ಭ್ರಾಮರಿ ಮಕ್ಕಳ ಭಜನಾ ಮಂಡಳಿಯ ಉದ್ಘಾಟಕರು, ಶಾಸಕರಾದ ಶ್ರೀ ಹರೀಶ್ ಪೂಂಜಾ ರವರು ಮಂಡಳಿಗೆ ದೀಪವನ್ನು ಕೊಡುಗೆಯಾಗಿ ನೀಡುವ ಮೂಲಕ ಕಾರ್ಯಕ್ರಮದ ಮಂಗಳ ಕಾರ್ಯದಲ್ಲಿ ಭಾಗಿಯಾದರು.

ಭಜನಾ ಮಂಡಳಿಯ ಭಕ್ತಿ ಹೆಜ್ಜೆಯ ಕಾರ್ಯಕ್ರಮ ನಿರೂಪಣೆಯನ್ನು ಭಜನಾ ತರಬೇತುದಾರ ಶ್ರೀ ವಿ ಹರೀಶ್ ನೆರಿಯ ರವರು ನಿರ್ವಹಿಸಿದರು.

Related post

Leave a Reply

Your email address will not be published. Required fields are marked *

error: Content is protected !!