• December 9, 2024

ಕುಂಟಾಲಪಲ್ಕೆ: ಸ. ಹಿ ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

 ಕುಂಟಾಲಪಲ್ಕೆ: ಸ. ಹಿ ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

 

ಬಂದಾರು:  ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆ ಯಲ್ಲಿ ಆ.10ರಂದು  ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ಪೋಷಕರಿಗೆ ನೀಡಿದರು.

ನಂತರ 1 ರಿಂದ 3 ನೇ ತರಗತಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆ ಮತ್ತು ಬಾವುಟದ ಚಿತ್ರ ಬಿಡಿಸುವ ಸ್ಪರ್ಧೆ, 4 ಮತ್ತು5 ನೇ ತರಗತಿ ಗೆ ಗೀತಗಾಯನ(ದೇಶಭಕ್ತಿ ಗೀತೆ) ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಸ್ಪರ್ಧೆ ಹಾಗೂ 6 ಮತ್ತು7 ನೇ ತರಗತಿ ಯವರಿಗೆ ಗೀತಗಾಯನ(ದೇಶಭಕ್ತಿ ಗೀತೆ) ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣ ಮತ್ತು ಸ್ವಾತಂತ್ರ್ಯ ಹೋರಾಟಗಾರ ರ ಬಗ್ಗೆ ಪ್ರಬಂಧ ಸ್ಪರ್ಧೆ ಗಳನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಹಶಿಕ್ಷಕಿ ಗಾಯತ್ರಿ ಕೆ, ಅತಿಥಿ ಶಿಕ್ಷಕಿ ಹರಿಣಾಕ್ಷಿ ಎನ್, ಜ್ಞಾನ ದೀಪ ಶಿಕ್ಷಕಿ ರೇಷ್ಮಾ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!