ಕಣಿಯೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಂದನ ಪಿ ಶೆಟ್ಟಿ ಬೀಳ್ಕೊಡುಗೆ ಸನ್ಮಾನ ಹಾಗೂ ಪೋಷಕ್ ಮಾಸಾಚರಣೆ ಇತ್ತೀಚೆಗೆ ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಭವಾನಿ ಲೋಕೇಶ್, ಕಳಿಯ ಗ್ರಾಮ ಪಂಚಾಯತ್ ಸದಸ್ಯೆಯರಾದ ಪುಷ್ಪಾ ಬಾಬು,ಮೋಹಿನಿ,ಕಳಿಯ ಸಿ ಬ್ಯಾಂಕ್ ನಿರ್ದೇಶಕಿ ಮಮತಾ, ಸಂಪನ್ಮೂಲ ವ್ಯಕ್ತಿಯಾದ ವೇಕಟೇಶ್ವರ ಭಟ್.ಕೆ, ಕಣಿಯೂರು ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆ […]
ಉಪ್ಪಿನಂಗಡಿ : ವಿಶ್ವ ಕರ್ಮ ಸಮಾಜ ಸೇವಾ ಸಂಘ(ರಿ.) ಉಪ್ಪಿನಂಗಡಿ ಇದರ ವತಿಯಿಂದ ಇತ್ತೀಚೆಗೆ ಕಲಾ ಕ್ಷೇತ್ರದಲ್ಲಿ ಸುದೀರ್ಘ ಸಾಧನೆ ಮಾಡಿರುವ ಶ್ರೀ ದಯಾನಂದ ಆಚಾರ್ಯ ನೆಲ್ಯಾಡಿ ಇವರನ್ನು 29ನೇ ವರುಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ದ ಸಂದರ್ಭದಲ್ಲಿ ರಂಗ ಶ್ರಮಿಕ ಎಂಬ ಬಿರುದನ್ನಿತ್ತು ಗೌರವಿಸಲಾಯಿತು. ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು, ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು, ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.Read More
2024-25 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡ ಹುಣ್ಸೆಕಟ್ಟೆ
ಹುಣ್ಸೆಕಟ್ಟೆ: ಸ.ಕಿ.ಪ್ರಾ ಶಾಲೆ ಹುಣ್ಸೆಕಟ್ಟೆಯ ಮುಖ್ಯಶಿಕ್ಷಕರಾದ ಕರಿಯಪ್ಪ ರವರು 2024-25 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಲುವಾಗಿ ಶಾಲಾ ಎಸ್ ಡಿಎಂಸಿ ಪೋಷಕರು, ಶಿಕ್ಷಕರು, ಹಾಗೂ ಶ್ರೀರಾಮ ಭಜನ ಮಂಡಳಿ(ರಿ) ಹುಣ್ಸೆಕಟ್ಟೆಯ ಸರ್ವ ಸದಸ್ಯರ ಪರವಾಗಿ ಇಂದು ಶಾಲೆಯಲ್ಲಿ ಶಿಕ್ಷಕರಾದ ಕರಿಯಪ್ಪ ಅವರನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.Read More
ವಿದ್ಯಾದಾಯಿನೀ ಪ್ರೌಢ ಶಾಲೆ ಸುರತ್ಕಲ್ ನಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು
ಬೆಳಾಲು : ವಿದ್ಯಾದಾಯಿನೀ ಪ್ರೌಢ ಶಾಲೆ ಸುರತ್ಕಲ್ ನಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ‘ಮಕ್ಕಳ ಧ್ವನಿ’ ಸೆ 14 ರಂದು ನಡೆದ ಕಾರ್ಯಕ್ರಮದಲ್ಲಿ ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ತ್ರಿಶಾ ಜೈನ್, ರಕ್ಷಾ ಎನ್, ಪುಣ್ಯಶ್ರೀ, ಅಂಕಿತ, ಆಶಾ, ಸೃಷ್ಟಿ, ಸುಚಿತ್ರ ಇವರು ಕವನಗೋಷ್ಠಿ ಮತ್ತು ಕಥಾಗೋಷ್ಠಿಯಲ್ಲಿ ಭಾಗವಹಿಸಿ, ತಮ್ಮ ಸ್ವ ರಚಿತ ಕವನ ಮತ್ತು ಕಥೆಯನ್ನು ವಾಚಿಸಿದರು. ಶಿಕ್ಷಕ ಸುಮನ್ ಯು ಎಸ್ […]Read More
ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಮಂಗಳೂರು ಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಂದ ಬೆಳ್ತಂಗಡಿ
ಬೆಳ್ತಂಗಡಿ:ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ನ ಪದಾಧಿಕಾರಿಗಳು ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಮಂಗಳೂರು ಇಲ್ಲಿನ ಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರನ್ನು ಇಂದು (ಸೆ.18)ರಂದು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಸ್ವಾಮೀಜೀಯವರು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ ನ ಲೋಗೋವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡರ ಜಿಲ್ಲಾ ಸಮಿತಿ ನಿರ್ದೇಶಕರು, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಎಲ್ಲಾ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.Read More
ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ , ಅನುದಾನಿತ ಪ್ರೌಢಶಾಲೆ ನಾರಾವಿ ಇಲ್ಲಿನ ಹಿಂದಿ ಶಿಕ್ಷಕರಾದ ಶ್ರೀ ಗೋಪಾಲಕೃಷ್ಣ ತುಳುಪುಳೆ ಮಾತನಾಡಿ ರಾಷ್ಟ್ರಭಾಷೆ ಹಿಂದಿಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯರಾದ ಶ್ರೀ ಜಯರಾಮ ಮಯ್ಯ ಮಾತನಾಡಿ ಭಾಷೆಯು ಮನಸ್ಸಿನ ಭಾವನೆಯನ್ನು ತಿಳಿಸುವ ಮಾಧ್ಯಮವಾಗಿದೆ. ಭಾಷೆಗಳನ್ನು ಕಲಿಯುವುದರಿಂದ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ […]Read More
ಬೆಳ್ತಂಗಡಿ; ಉಜಿರೆ ಹಳೆಪೇಟೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಅಂಗ ಸಂಸ್ಥೆಗಳ ಸಹಕಾರದೊಂದಿಗೆ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಹಬ್ಬದ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಮೀಲಾದ್ ಸಂದೇಶ ಕಾರ್ಯಕ್ರಮ, ಉಜಿರೆ ಮಸ್ಜಿದ್ ವಠಾರದಿಂದ ಪಿಸಿ ಪೈ ಪೆಟ್ರೋಲ್ ಬಂಕ್ ವರೆಗೆ ಮೀಲಾದ್ ಸಂದೇಶ ಜಾಥಾ, ಅನ್ನದಾನ ಇತ್ಯಾಧಿ ಪ್ರಮುಖ ಕಾರ್ಯಕ್ರಮಗಳು ನಡೆಯಿತು. ಉಜಿರೆ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಿ.ಎಮ್ ಹಮೀದ್ ಹಾಜಿ ಅವರ ನೇತೃತ್ವದಲ್ಲಿ,ಮೀಲಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಎಂ […]Read More
ಲೈವ್ ಚಾನೆಲ್ ಅಸೋಸಿಯೇಶನ್ ಅಸ್ತಿತ್ವಕ್ಕೆ : ಸಂಘಟಿತರಾದಲ್ಲಿ ಸದೃಢರಾಗಲು ಸಾಧ್ಯ – ವಾಲ್ಟರ್
ಕಾರ್ಕಳ : ಲೈವ್ ಚಾನೆಲ್ ನಡೆಸುವವರು ಸಂಘಟಿತರಾದಲ್ಲಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಲೈವ್ ಚಾನೆಲ್ ಅಸೋಸಿಯೇಶನ್ ಸ್ಥಾಪನೆ ಉತ್ತಮ ಬೆಳವಣಿಗೆ ಎಂದು ದಾಯ್ಜಿವರ್ಲ್ಡ್ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು. ಅವರು ಸೆ. 17ರಂದು ಕಾರ್ಕಳ ಬಂಡಿಮಠ ಶ್ರೀ ಮೂಡುಮಹಾಗಣಪತಿ ಕಲಾಮಂದಿರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಲೈವ್ ಚಾನೆಲ್ ಅಸೋಸಿಯೇಶನ್ ಉದ್ಘಾಟಿಸಿ ಬಳಿಕ ಮಾತನಾಡಿದರು. ಲೈವ್ ಚಾನೆಲ್ ಸಂಸ್ಥೆ ಮಾಲಕರು ಪ್ರಸ್ತುತ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪರಿಕರ ಖರೀದಿ ಬಂಡವಾಳ, […]Read More
ಬೆಳ್ತಂಗಡಿ: ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆಯು ಜರುಗಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿ ಮಾತನಾಡಿದರು. ಈ ವೇಳೆ ಕೇಳದ ಪೇಟೆ ಸ.ಹಿ ಪ್ರಾ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರಶಾಂತ್ ಎ , ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಉಪ ತಹಸೀಲ್ದಾರ್ ರವಿಕುಮಾರ್ ಉಪಸ್ಥಿತರಿದ್ದರುRead More