ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮುಂಭಾಗ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಗುಲದ ಮಹಾಲಕ್ಷ್ಮಿ ಆನೆಯು ವಿಶೇಷವಾಗಿ ಧ್ವಜ ವಂದನೆ ಸಲ್ಲಿಸಿತು. ಧ್ವಜರೋಹಣ ನೆರವೇರಿಸಿದ ಸುಬೇದಾರ್ ಉದಯ ಚಂದ್ರ ಉಡುಪ ಇವರಿಗೆ ಧ್ವಜವನ್ನು ನೀಡಿ ವಂದನೆ ಸಲ್ಲಿಸಿದ್ದು ಮಾತ್ರ ಅಲ್ಲದೆ ಮೂರು ಭಾರಿ ಘೀಳಿಟ್ಟು ವಂದನೆ ಸಲ್ಲಿಸಿತು. ನೊಡುಗರು ಮೂಕವಿಸ್ಮಿತರಾದರು
ಬಂದಾರು : ಬಂದಾರು ಗ್ರಾಮ ಪಂಚಾಯತ್ ನಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರು ಧ್ವಜರೋಹಣ ನೆರವೇರಿಸಿ ದೇಶಕ್ಕೋಸ್ಕರ ಬಲಿದಾನಗೈದ ರಾಷ್ಟ ಪ್ರೇಮಿಗಳು,ವೀರ ಸೇನಾನಿಗಳನ್ನು ಸ್ಮರಿಸಿದರು, ಪಂಚಾಯತ್ ಮಾಜಿ ಅಧ್ಯಕ್ಷರಾದ ವಕೀಲ ಉದಯ ಬಿ ಕೆ, ಅಬ್ಬಾಸ್ ಬಟ್ಲಡ್ಕ, ಹಾಗೂ ಪಂಚಾಯತ್ ಸದಸ್ಯೆ ಮಂಜುಶ್ರೀ ಇವರು ಸಮಯೋಚಿತವಾಗಿ ಸ್ವಾತoತ್ರ ದಿನಾಚರಣೆಯ ಮಹತ್ವ, ಮುಂದಿನ ಸ್ಥಿತಿಗತಿಗಳ ಬಗ್ಗೆ ಮೆಲುಕು ಹಾಕಿದರು, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಇವರು ಕಾರ್ಯಕ್ರಮ ನಡೆಸಿಕೊಟ್ಟರು. […]Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಶ್ರಿ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಅತ್ಯಂತ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸೈನಿಕರಾಗಿರುವ ಶ್ರೀಯುತ ತಂಗಚ್ಚನ್ ಇವರು ಧ್ವಜಾರೋಹಣವನ್ನು ಮಾಡಿದರು. ವಿದ್ಯಾರ್ಥಿಗಳು ರಾಷ್ಟ್ರಗೀತೆ ಧ್ವಜ ಗೀತೆ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಧ್ವಜಕ್ಕೆ ಗೌರವವನ್ನು ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳು ಉಳುವ ಯೋಗಿಯ ನೋಡಲ್ಲಿ ಎಂಬ ಪ್ರಾರ್ಥನಾ ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಪ್ರಾಸ್ತಾವಿಕ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ […]Read More
ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ
ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಭವಾನಿ ಮಾರ್ಪಾಲು ಇವರು ನೆರವೇರಿಸಿದರು. ಬಳಿಕ ಬೆಳಾಲು ಪೇಟೆಯಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಜಯ ಘೋಷವನ್ನು ಹಾಕುತ್ತ ಮೆರವಣಿಗೆಯಲ್ಲಿ ಸಾಗಿದರು. ಗಾಂಧೀಜಿ ಹಾಗೂ ಡಾ| ಬಿ. ಆರ್. ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು. ಸಮೂಹ ದೇಶಭಕ್ತಿ ಗಾಯನ ಹಾಗೂ ಛದ್ಮವೇಷ ಸ್ಪರ್ಧೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಯುತ […]Read More
ಉಜಿರೆ : ಆ15.”ವರ್ಷದ ಪ್ರತಿಯೊಂದು ದಿನವೂ ಸ್ವಾತಂತ್ರ್ಯ ದಿನ ಆಚರಿಸುವ ಹಾಗೆ ನಮ್ಮ ಜೀವನವನ್ನು ತ್ಯಾಗ ಮಾಡಿರುವವರನ್ನು ನಾವು ಪ್ರತಿದಿನವೂ ನೆನೆಯಲೇ ಬೇಕು. ದೇಶದ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು.” ಎಂದು ಉಜಿರೆ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಪಿ.ಹೆಚ್ ಪ್ರಕಾಶ್ ಶೆಟ್ಟಿ ಮೊಚ್ಚ ಇವರು ಹೇಳಿದರು. ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಚರಿಸಿದ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣ ನಡೆಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ […]Read More
ಬೆಳ್ತಂಗಡಿ : ನೇತಾಜಿ ಸುಭಾಷ್ ಚಂದ್ರಬೋಸ್ ಅವಾಸೀಯ ವಿದ್ಯಾಲಯ ಮುಗುಳಿ ಬೆಳ್ತಂಗಡಿಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ) ,ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು SKDRDP ನಿವೃತ್ತ ಪ್ರಾದೇಶಿಕ ನಿರ್ದೇಶಕರು ಶ್ರೀ ಜಯಶಂಕರ್ ಶರ್ಮ ನೆರವೇರಿಸಿದರು. ಬಳಿಕ ಉದ್ಯಮಿ ಬಸವರಾಜ್ ಮತ್ತು ಉದ್ಯಮಿ ಮೋಹನ್ ಚೌಧರಿಗೆ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು.100 ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ಸಿಲ್, ಸ್ಕೇಚ್ ಪೇನ್, ರಬ್ಬರ್ , ಪೇನ್ […]Read More
ಬೆಳ್ತಂಗಡಿ:ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ಆ 15 ರಂದು ಮುಳಿಯ ಜ್ಯುವೆಲ್ಸ್ ಆವರಣದಲ್ಲಿ ಸಂಭ್ರಮದಿಂದ ನೆರವೇರಿತು. ಭಾರತೀಯ ಮದ್ದೂರು ಸಂಘದ ಜಿಲ್ಲಾಧ್ಯಕ್ಷ, ವಕೀಲರಾದ ಅನಿಲ್ ಕುಮಾರ್ ಯು ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯಕ್ಕೆ ಹೋರಾಡಿದ ವೀರ ಸೈನಿಕರ ಪರಾಕ್ರಮವನ್ನು ವಿವರಿಸಿದರು, ಅಲ್ಲದೇ ನಾವೆಲ್ಲ ಇವತ್ತು ಸ್ವಾತಂತ್ರ್ಯವಾಗಿ ಯಾವುದೇ ಭಯವಿಲ್ಲದೇ ಬದುಕಬೇಕಾದರೆ ನಮ್ಮನ್ನು ಕಾಯುವ ಸೈನಿಕರ ಪರಿಶ್ರಮ ಕಾರಣ ಎಂದು ಹೇಳುತ್ತಾ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದರು. ಮುಳಿಯ ಶಾಖಾ ಪ್ರಬಂಧಕರು ಹಾಗೂ […]Read More
ಹುಣ್ಸೆಕಟ್ಟೆ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಣ್ಸೆಕಟ್ಟೆ ಇಲ್ಲಿ ಇಂದು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ದಲ್ಲಿ ಹಳೆ ವಿದ್ಯಾರ್ಥಿ ಕೃಷ್ಣ ಕುಮಾರ್ ಪಂಜಿರ್ಪು ಮುಖ್ಯ ಅತಿಥಿಯಾಗಿ ಆಗಮಿಸಿದ್ದು,ಎಸ್ ಡಿ ಎಂ ಸಿ ಅಧ್ಯಕ್ಷೆ ಭವ್ಯ, ಶಾಲಾ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು, ಅಂಗನವಾಡಿ ಮಕ್ಕಳು , ಶಿಕ್ಷಕ ಶಿಕ್ಷಕಿಯರು ಭಾಗಿಯಾಗಿದ್ದರು. ಇದೇ ವೇಳೆ ಹಳೆ ವಿದ್ಯಾರ್ಥಿ ಸೀತಾರಾಮ್ ಎಸ್ ಆರ್ ಬಿ ನಲಿ ಕಲಿ ಮಕ್ಕಳಿಗೆ ಟೇಬಲ್ ಹಸ್ತಾಂತರಿಸಿದರು.Read More
ಆ. 14: ಬೆಳಾಲು ಶ್ರೀ ಧ. ಮ. ಅನುದಾನಿತ ಪ್ರೌಢಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ ನಡೆಯಿತು ಉದ್ಘಾಟಕರಾಗಿ ಆಗಮಿಸಿದ ಶ್ರೀ ಧ. ಮ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಮೋದ್ ಕುಮಾರ್ ಅವರು ಹಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ತುಳುನಾಡಿನ ಸಂಪ್ರದಾಯ ಪರಂಪರೆಯನ್ನು ಉಳಿಸಿಕೊಂಡು, ಆಚರಣೆ ಮಾತ್ರ ಆಗಿರದೆ ಪಾಲಿಸಿಕೊಂಡು ಬರಬೇಕು” ಎಂದು ತಿಳಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಮಕೃಷ್ಣ ಭಟ್ ಇವರು “ತುಳುನಾಡಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಇಂತಹ […]Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಪೋಸ್ಕೋ ಕಾಯ್ದೆ ಕಾರ್ಯಾಗಾರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪೋಸ್ಕೋ ಕಾಯ್ದೆ ,ದುಶ್ಚಟಗಳ ಹಾಗೂ ಮಾದಕ ವ್ಯಸನದ ಕುರಿತು ಹಾಗೂ ಉತ್ತಮ ಹಾಗೂ ಕೆಟ್ಟ ಸ್ಪರ್ಶ ಯಾವುದು ಎಂಬಿತ್ಯಾದಿ ವಿಚಾರಗಳ ಕುರಿತು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಅಕ್ಷತಾ .ಕೆ. ಆಗಮಿಸಿ ಪೋಸ್ಕೋ ಕಾಯ್ದೆ,ಉತ್ತಮ ಸ್ಪರ್ಶ ಹಾಗೂ ಉತ್ತಮ ಅಲ್ಲದ ಸ್ಪರ್ಶ,ದುಶ್ಚಟಗಳ ಪರಿಣಾಮ,ಮಾದಕ ವ್ಯಸನದ ಪರಿಣಾಮ,ಸಮಾಜದಲ್ಲಿ ಹೇಗಿರಬೇಕು,ಲೈಂಗಿಕ ದೌರ್ಜನ್ಯ ಅಂದರೆ ಏನು,ಮಾಡಿದರೆ ಏನು […]Read More