ಬಂದಾರು ಗ್ರಾಮ ಪಂಚಾಯತ್ ನಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಬಂದಾರು : ಬಂದಾರು ಗ್ರಾಮ ಪಂಚಾಯತ್ ನಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರು ಧ್ವಜರೋಹಣ ನೆರವೇರಿಸಿ ದೇಶಕ್ಕೋಸ್ಕರ ಬಲಿದಾನಗೈದ ರಾಷ್ಟ ಪ್ರೇಮಿಗಳು,ವೀರ ಸೇನಾನಿಗಳನ್ನು ಸ್ಮರಿಸಿದರು, ಪಂಚಾಯತ್ ಮಾಜಿ ಅಧ್ಯಕ್ಷರಾದ ವಕೀಲ ಉದಯ ಬಿ ಕೆ, ಅಬ್ಬಾಸ್ ಬಟ್ಲಡ್ಕ, ಹಾಗೂ ಪಂಚಾಯತ್ ಸದಸ್ಯೆ ಮಂಜುಶ್ರೀ ಇವರು ಸಮಯೋಚಿತವಾಗಿ ಸ್ವಾತoತ್ರ ದಿನಾಚರಣೆಯ ಮಹತ್ವ, ಮುಂದಿನ ಸ್ಥಿತಿಗತಿಗಳ ಬಗ್ಗೆ ಮೆಲುಕು ಹಾಕಿದರು, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಇವರು ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪುಷ್ಪಾವತಿ, ಮಾಜಿ ಸದಸ್ಯರಾದ ಉಮೇಶ್ ಗೌಡ ಪರಕ್ಕಾಜೆ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ,ಗಂಗಾಧರ ಪೂಜಾರಿ,ಚೇತನ್ ಪಾಲ್ತಿಮಾರ್, ಮೋಹನ್ ಗೌಡ, ಶಿವ ಗೌಡ ಹೇವ, ಶಿವ ಪ್ರಸಾದ್ ಸುದೆಪ್ಪಿಲ, ಪರಮೇಶ್ವರಿ ಪುಯಿಲ ,ಭಾರತಿ ಕೊಡಿಯೇಲು, ಅನಿತಾ ಕುರುಡಂಗೆ, ಸುಚಿತ್ರಾ ಮೂರ್ತಜೆ, ವಿಮಲಾ ತಾರಿದಡಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರಾಢಶಾಲೆ ಗಳಿಗೆ ಸಿಹಿ ತಿಂಡಿ ವಿತರಣೆ ಮಾಡಲಾಯಿತು.