ಪೆರ್ಲ ಬೈಪಾಡಿ : ಬಂದಾರು ಗ್ರಾಮದ ಪೆರ್ಲ -ಬೈಪಾಡಿ ವಾರ್ಡಿನ ಕುರುಡಂಗೆ ಸಮೀಪ ಸರ್ಕಾರಿ ಜಾಗದಲ್ಲಿ BSNL 4ಜಿ ಪವರ್ ಟವರಿನ ಕಾಮಗಾರಿ ಆರಂಭಗೊಂಡಿದೆ. ಹಲವಾರು ವರ್ಷಗಳಿಂದ ಈ ಭಾಗದ ಜನರ ಪಾಡು ಹೇಳತೀರದು ಪ್ರಾಥಮಿಕ, ಪ್ರಾಢಶಾಲೆ, ನ್ಯಾಯಬೆಲೆ ಅಂಗಡಿ, ಹಾಲಿನ ಡೈರಿ, ಕಾರ್ಯನಿರ್ವಹಿತಿದ್ದು ಹಾಗೆಯೇ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಸಮಯದಲ್ಲಿ ತುoಬಾ ಕಷ್ಟ ಪಡಬೇಕಾದ ಸಂಕಷ್ಟ, ವರ್ಕ್ ಫ್ರಮ್ ಹೋಂ ಉದ್ಯೋಗಿಗಳ ನೆಟ್ವರ್ಕ್ ಇರುವಲ್ಲಿ ವಾಸ್ತವ್ಯ ಊಡುವ ಪರಿಸ್ಥಿತಿ, ಒಟ್ಟಾರೆಯಾಗಿ ಕಾಡಿನಲ್ಲಿ ವಾಸ ಮಾಡಿದoತಹ […]
ಬಂದಾರು : ಬಂದಾರು ಗ್ರಾಮದ ಕುಂಟಾಲಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಅರೋಗ್ಯ ಕೇಂದ್ರ ಶುಶ್ರೂಷಕಿ ಶ್ವೇತ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.Read More
ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಮೋದ್ ಗೌಡ ದಿಡುಪೆ
ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಮೋದ್ ಗೌಡ ದಿಡುಪೆ ಆಯ್ಕೆಯಾಗಿದ್ದಾರೆ. ಇವರು ಸ್ವಯಂ ಸೇವಕ ಯುವ ಮೋರ್ಚಾ ಬೂತ್ ಸಹ ಸಂಚಾಲಕ, ಮಂಡಲ ಉಪಾಧ್ಯಕ್ಷ, ಸಂಘಟನಕಾರ, ಚುನಾವಣಾ ಪ್ರಭಾರಿ, ಚುನಾವಣಾ ಪ್ರಕೋಷ್ಟ ಸಹ ಸಂಚಾಲಕರಾಗಿ ಉತ್ತಮ ಸಂಘಟಕರಾಗಿ ಇದೀಗ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.Read More
ಕರ್ನಾಟಕ ವಿಧಾನಪರಿಷತ್ ನಲ್ಲಿ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಯ ಸುರಿಮಳೆಗೈದಿದ್ದಾರೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿಧ್ಯಾರ್ಥಿ ವೇತನದ ಕಡಿತ ಹಾಗೂ ವೈದ್ಯಕೀಯ ಮರುಪಾವತಿಯಲ್ಲಿರುವ ಅವ್ಯವಸ್ಥೆ ಸರಿ ಮಾಡುವಂತೆ ಆಕ್ಷೇಪಿಸಿ ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೆ ಯನ್ನು ಮುಂದಿಟ್ಟಿದ್ದು ಇತರ ವ್ಯವಸ್ಥೆಗಳಲ್ಲಿ ಅವ್ಯವಸ್ಥೆಗಳು ಕಾಣಲು ಗ್ಯಾರಂಟಿ ಕಾರ್ಡ್ ಕಾರಣವಾಯಿತೇ ಎಂಬುವುದರ ಬಗ್ಗೆ ಪ್ರಶ್ನೆಯನ್ನು ಇಟ್ಟಿದ್ದಾರೆ.Read More
ಫೆ.17 ರಂದು ಮಂಗಳೂರಿನ ಅಡ್ಯಾರು ಸಹ್ಯಾದ್ರಿ ವಠಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಹಾಗೂ ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಇವರು ಬ್ಲಾಕ್ ಕಾಂಗ್ರೆಸ್ ಕಚೇರಿ ಸಂತೆಕಟ್ಟೆ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ […]Read More
ಇದೇ ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಮದ್ಯಮಾಂಸಕ್ಕೆ ಸಂಪೂರ್ಣ ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯಿಂದ ಉತ್ತರಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಮನವಿ ಸಲ್ಲಿಸಲಾಗಿತ್ತು. ಅದಕ್ಕಾಗಿ ಅನೇಕ ಸ್ಥಳಗಳಿಂದ ಹಿಂದುತ್ವನಿಷ್ಟ ಸಂಘಟನೆಗಳು ಒಟ್ಟು ಸೇರಿ ಆಂದೋಲನವನ್ನೂ ನಡೆಸಿದರು. ಇದಕ್ಕೆ ತತ್ಪರತೆಯಿಂದ ಉತ್ತರಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಸನ್ಮಾನ್ಯ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯ 84 ಮೈಲಿ ದೂರದ ಪ್ರದಕ್ಷಿಣೆ ಯಾತ್ರೆಯ ಕ್ಷೇತ್ರದಲ್ಲಿ ಮದ್ಯವನ್ನು ನಿಷೇಧಿಸಿದ್ದಾರೆ. […]Read More
ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಎಬಿವಿಪಿ ಉಜಿರೆ ನಗರ ವತಿಯಿಂದ
ಉಜಿರೆ: ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಉಜಿರೆ ನಗರ ವತಿಯಿಂದ ಸಹಿ ಸಂಗ್ರಹ ಅಭಿಯಾನ ಇಂದು ನಡೆಸಲಾಯಿತು. ಇದೀಗ ಜಾರಿಯಾಗಿರುವ NEP ಯನ್ನು ಯಾಕೆ ಉಳಿಸಿಕೊಂಡು ಮುಂದುವರಿಸಬೇಕು..? ಎಂಬ ಮಾಹಿತಿಯನ್ನು ನಗರ ಕಾರ್ಯಕಾರಣಿ ಸದಸ್ಯ ಸುದೀಪ್ ಮಾಹಿತಿ ನೀಡಿದರು. ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.Read More
ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಬೆಳ್ತಂಗಡಿ ತಾಲೂಕು ವತಿಯಿಂದ
ಬೆಳ್ತಂಗಡಿ: ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಬೆಳ್ತಂಗಡಿ ತಾಲೂಕು ವತಿಯಿಂದ ಸಹಿ ಸಂಗ್ರಹ ಅಭಿಯಾನವು ನ.23 ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆಸಲಾಯಿತು. ಸಹಿ ಸಂಗ್ರಹ ಅಭಿಯಾನಕ್ಕೆ ಬೆಳ್ತಂಗಡಿಯ ತಾಲೂಕು ಸಂಚಾಲಕ ಸನಲ್ ಶೆಟ್ಟಿ ಚಾಲನೆ ನೀಡಿ, ಇದೀಗ ಜಾರಿಯಾಗಿರುವ ಎನ್ ಇ ಪಿ ಯನ್ನು ಯಾಕೆ ಉಳಿಸಿಕೊಂಡು ಮುಂದುವರಿಸಬೇಕು..? ಎಂಬ ಮಾಹಿತಿಯನ್ನು ನೀಡಿದರು. ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.Read More
ಹಲಾಲ್ ಪ್ರಮಾಣಿತ’ ಉತ್ಪಾದನೆಗಳ ಮೇಲೆ ನಿಷೇಧ ಹೇರುವ ತಯಾರಿಯಲ್ಲಿರುವ ಯೋಗಿ ಆದಿತ್ಯನಾಥ ಇವರಿಗೆ
ಉತ್ತರಪ್ರದೇಶದ ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ ಇವರು ‘ಲವ್ ಜಿಹಾದ್’ ದ ವಿರುದ್ಧ ಕಠಿಣ ಕಾನೂನು ರೂಪಿಸಿ ಆದರ್ಶ ನಿರ್ಮಿಸಿದ್ದಾರೆ. ಅವರು ಈಗ ಹಲಾಲ್ ಜಿಹಾದ್’ನ ಮೂಲಕ ನಡೆಯುತ್ತಿರುವ ದೇಶ ವಿರೋಧಿ ಷಡ್ಯಂತ್ರ ತಡೆಗಟ್ಟಲು ನೇತೃತ್ವ ವಹಿಸಿದ್ದಾರೆ. ಹಲಾಲ್ ಪ್ರಮಾಣೀಕೃತ ಉತ್ಪಾದನೆಗಳ ಹೆಸರಿನಲ್ಲಿ ಈ ಉತ್ಪಾದನೆಗಳಿಗೆ ಕಾನೂನು ಬಾಹಿರವಾಗಿ ಸರ್ಟಿಫಿಕೇಷನ್ ನೀಡಲಾಗುತ್ತಿರುವುದರ ಬಗ್ಗೆ ಉತ್ತರಪ್ರದೇಶದಲ್ಲಿನ ಹಜರತಗಂಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮತ್ತು ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥಜಿ ಇವರು ತಕ್ಷಣ […]Read More
ಇಸ್ರೆಲ್ ದೇಶದಲ್ಲಿ ಇತರೆ ಉದ್ದೇಶಗಳಿಗೆ ಹೋಗಿರುವ ದ.ಕ ಜಿಲ್ಲೆಗೆ ಸಂಬಂಧಪಟ್ಟ ಪ್ರಜೆಗಳಿದ್ದಲ್ಲಿ ಜಿಲ್ಲಾಧಿಕಾರಿ
ಇಸ್ರೇಲ್ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ಇಸ್ರೆಲ್ ದೇಶಗಳಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಯವರ ಕಚೇರಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಲ್ಲಿ ತೆರೆದಿರುವ ಕಂಟ್ರೋಲ್ ರೂಂ ಸಂಖ್ಯೆ 1077/0824-2442590 ಗೆ ಕರೆ ಮಾಡಿ ಕೂಡಲೇ ನೀಡುವಂತೆ ಕೋರಲಾಗಿದೆ. ಅಥವಾ ರಾಜ್ಯ ಸರಕಾರದ ತುರ್ತು ಸಂಖ್ಯೆ 080-22340676, 080-22253707 ನಂಬರ್ ಗೆ ಮಾಹಿತಿ ನೀಡುವಂತೆ […]Read More