• September 21, 2024

ಪೆರ್ಲ -ಬೈಪಾಡಿ: ಕುರುಡಂಗೆ ಸಮೀಪ ಸರ್ಕಾರಿ ಜಾಗದಲ್ಲಿ BSNL 4ಜಿ ಪವರ್ ಟವರಿನ ಕಾಮಗಾರಿ ಆರಂಭ

 ಪೆರ್ಲ -ಬೈಪಾಡಿ: ಕುರುಡಂಗೆ ಸಮೀಪ ಸರ್ಕಾರಿ ಜಾಗದಲ್ಲಿ BSNL 4ಜಿ ಪವರ್ ಟವರಿನ ಕಾಮಗಾರಿ ಆರಂಭ

ಪೆರ್ಲ ಬೈಪಾಡಿ : ಬಂದಾರು ಗ್ರಾಮದ ಪೆರ್ಲ -ಬೈಪಾಡಿ ವಾರ್ಡಿನ ಕುರುಡಂಗೆ ಸಮೀಪ ಸರ್ಕಾರಿ ಜಾಗದಲ್ಲಿ BSNL 4ಜಿ ಪವರ್ ಟವರಿನ ಕಾಮಗಾರಿ ಆರಂಭಗೊಂಡಿದೆ.

ಹಲವಾರು ವರ್ಷಗಳಿಂದ ಈ ಭಾಗದ ಜನರ ಪಾಡು ಹೇಳತೀರದು ಪ್ರಾಥಮಿಕ, ಪ್ರಾಢಶಾಲೆ, ನ್ಯಾಯಬೆಲೆ ಅಂಗಡಿ, ಹಾಲಿನ ಡೈರಿ, ಕಾರ್ಯನಿರ್ವಹಿತಿದ್ದು ಹಾಗೆಯೇ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಸಮಯದಲ್ಲಿ ತುoಬಾ ಕಷ್ಟ ಪಡಬೇಕಾದ ಸಂಕಷ್ಟ, ವರ್ಕ್ ಫ್ರಮ್ ಹೋಂ ಉದ್ಯೋಗಿಗಳ ನೆಟ್ವರ್ಕ್ ಇರುವಲ್ಲಿ ವಾಸ್ತವ್ಯ ಊಡುವ ಪರಿಸ್ಥಿತಿ, ಒಟ್ಟಾರೆಯಾಗಿ ಕಾಡಿನಲ್ಲಿ ವಾಸ ಮಾಡಿದoತಹ ಸ್ಥಿತಿ ಈ ಭಾಗದ ನಾಗರಿಕರದಾಗಿತ್ತು.

ಈ ಸಮಸ್ಯೆಗೆ ಮುಕ್ತಿ ದೊರೆಯುವಲ್ಲಿ ಯಾವುದೇ ಸಂಶಯವಿಲ್ಲ ಕೊನೆಗೂ ನಾಗರಿಕರ ಮೊಗದಲ್ಲಿ ಮಂದಹಾಸದ ನಗುಬೀರಿದೆ. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಸದಸ್ಯೆ ಅನಿತಾ ಕುರುಡಂಗೆ, ಮಾಜಿ ಗ್ರಾಮ ಪoಚಾಯತ್ ಉಪಾಧ್ಯಕ್ಷರಾದ ಉದಯ ಕುರುಡಂಗೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುರುಷೋತ್ತಮ, ಗ್ರಾಮ ಲೆಕ್ಕಿಗರಾದ ರಫೀಕ್ ಮುಲ್ಲಾ ಕಾಮಗಾರಿ ವೀಕ್ಷಣೆ ಮಾಡಿದರು.

Related post

Leave a Reply

Your email address will not be published. Required fields are marked *

error: Content is protected !!