ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಸಂಸದರಾದ ಬ್ರಿಜೇಶ್ ಚೌಟ ಅವರೊಂದಿಗೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ “ಪ್ರಸಾದಂ”ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಬೆಳ್ತಂಗಡಿ ತಾಲ್ಲೂಕಿನ ಶ್ರೀ ನಂದಿಕೆಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿ, ಬೆಳ್ತಂಗಡಿ ತಾಲ್ಲೂಕಿನ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬೆಳ್ತಂಗಡಿ ತಾಲ್ಲೂಕಿನ ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿ ಹಾಗೂ ಶ್ರೀ ತೋಡಿಕ್ಕಾನ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ದಿಗೆ ಪ್ರಸಾದಂ ಯೋಜನೆಯಡಿಯಲ್ಲಿ ಅನುದಾನ ಒದಗಿಸುವಂತೆ ಕೇಂದ್ರ ಪ್ರವಾಸೊಧ್ಯಮ ಸಚಿವರಾದ […]
ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜರವರ ಮುತುವರ್ಜಿಯಲ್ಲಿ ಗರ್ಡಾಡಿ- ಬಳೆಂಜ ರಸ್ತೆಗೆ ರೂ. 2 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಅವಧಿಯಲ್ಲಿ ಆರ್ಥಿಕ ಅನುಮೋದನೆ ನೀಡದಂತೆ ಎಲ್ಲಾ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯವೂ ಸ್ಥಗಿತಗೊಂಡಿತ್ತು. ಆದರೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಿಂದ ಇದೀಗ ಆರ್ಥಿಕ ಅನುಮೋದನೆಯೂ ದೊರಕಿದ್ದು ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಪ್ರಾರಂಭಗೊಳ್ಳಲಿದೆ.Read More
ನಕ್ಸಲರಿಗೆ ಶರಣಾದ ಸರ್ಕಾರ ಅಭಿವೃದ್ಧಿಯ ಕನಸು ಹುಸಿಯಾಗಿಸಿದ ಬಜೆಟ್: ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ : ಮಾರ್ಚ್ 7: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ಮಂಡಿಸಿದ 2025- 26ರ ಸಾಲಿನ ಮುಂಗಡ ಪತ್ರ ನಕ್ಸಲರಿಗೆ ಶರಣಾಗಿ ಶ್ರೀಸಾಮಾನ್ಯರ ಪಾಲಿಗೆ ಸಂಪೂರ್ಣ ನಿರಾಶದಾಯಕವಾಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೇಸರ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರಕ್ಕೆ ನಕ್ಸಲ್ ಚಟುವಟಿಕೆ ಬಗ್ಗೆ ಪೂರ್ಣ ಅರಿವಿದ್ದಂತೆ ಕೇವಲ ಆರು ಜನರ ನಕ್ಸಲರ ಶರಣಗಾತಿಯಿಂದ ನಕ್ಸಲ್ ನಿಗ್ರಹ ಪಡೆಯನ್ನೇ ವಿಸರ್ಜಿಸಿ 10 ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದನ್ನು ಗಮನಿಸಿದರೆ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದರೋ ಅಥವಾ ಸರ್ಕಾರವೇ ನಕ್ಸಲರಿಗೆ ಶರಣಾಯಿತೋ […]Read More
ಬಂದಾರು : ಬಂದಾರು ಗ್ರಾಮ ಪೆರ್ಲ -ಬೈಪಾಡಿ ಸ. ಹಿ . ಪ್ರಾ ಶಾಲೆಯಲ್ಲಿ 76 ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮ ಜ 26 ರಂದು ನಡೆಯಿತು. ಬಂದಾರು ಗ್ರಾಮ ಪಂಚಾಯತು ಸದಸ್ಯರಾದ ಶ್ರೀಮತಿ ಅನಿತಾ ಇವರು ಧ್ವಜಾರೋಹಣ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯೆ ವಾಣಿ ಹಾಗೂ ಇನ್ನಿತರ ಪ್ರಮುಖ ಗಣ್ಯರು ಭಾಗವಹಿಸಿದ್ದರು. ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು,ಈ ಕಾರ್ಯಕ್ರಮದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.Read More
ಭಕ್ತರ ಕಷ್ಟಗಳಿಗೆ ಓಗೊಟ್ಟು ಕ್ಷಣಮಾರ್ಧದಲ್ಲಿ ಪರಿಹಾರವನ್ನು ನೀಡಿ ಕಾರ್ಣಿಕ ಮೆರೆವ ಆರಿಕೋಡಿ ಶ್ರೀ
ಆರಿಕೋಡಿ: ಇತಿಹಾಸ ಪ್ರಸಿದ್ಧ ಕಾರ್ಣಿಕ ದೇವಾಲಯಗಳಲ್ಲಿ ಒಂದಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಪವಾಡಗಳು ದಿನೇ ದಿನೇ ಭಕ್ತರನ್ನು ದೇವಾಲಯಕ್ಕೆ ಆಗಮಿಸುವಂತೆ ಮಾಡುತ್ತಿದೆ. ತಾಯಿಯ ಮಹಿಮೆ ರಾಜ್ಯದ ಮೂಲೆ ಮೂಲೆಗೂ ತಿಳಿದು ಜನಸಾಗರವೆ ಸನ್ನಿಧಾನಕ್ಕೆ ಜಗನ್ಮಾತೆಯನ್ನು ಕಣ್ತುಂಬಿಸಲು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಭಕ್ತರ ಕಷ್ಟಗಳಿಗೆ ಓಗೊಟ್ಟು ಕ್ಷಣಮಾರ್ಧದಲ್ಲೇ ಪರಿಹಾರವನ್ನು ನೀಡುವ ದೇವಿಯ ಪವಾಡ ನಿಜಕ್ಕೂ ಅದ್ಭುತ. ಕಡಬ ತಾಲೂಕಿನ ಸವಣೂರು ಪೆರಣೆ ಪದ್ಮಯ್ಯ ಗೌಡ ಎಂಬವರ ಭೂಮಿಯಲ್ಲಿ ನೀರಿನ ಅಭಾವ ಕಂಡುಬಂದಾಗ ಪದ್ಮಯ್ಯ ಗೌಡ ಅವರಿಗೆ […]Read More
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II,ಶಾಲೆಯಲ್ಲಿ 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ನಂದಾ ಕೆ ಇವರು ರಾಷ್ಟ್ರಧ್ವಜವನ್ನು ಹಾರಿಸಿ, ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು.ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್ ಮತ್ತು ಸಹ ಶಿಕ್ಷಕರು ಕೂಡ ಭಾಗಿಯಾದರು. ‘ಕರ್ನಾಟಕ ಏಕೀಕರಣದ’ ಕುರಿತು ಶಾಲಾ ವಿದ್ಯಾರ್ಥಿಯಾದ ಜನ್ವಿತ್ ಸವಿಸ್ತಾರವಾಗಿ ಹೇಳಿದನು. ಶಾಲಾ ಮಕ್ಕಳು ಕನ್ನಡ ನಾಡು- […]Read More
ವಕ್ಫ್ ಬೋರ್ಡ್ ನಡೆಸಿದ ದೊರನೆಯನ್ನು ಖಂಡಿಸಿ ಪ್ರವಾಸಿ ಮಂದಿರ ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿ ನಡೆಸಿದರು. ವಕ್ಫ್ ಬೋರ್ಡ್ ಹೆಸರಿನಲ್ಲಿ ನಡೆಸಿದ ಆಸ್ಥಿಯನ್ನು ಪಡೆದುಕೊಳ್ಳುವುದು ಸರ್ಕಾರಕ್ಕೆ ಮತ್ತು ಜನರಿಗೆ ಮಾಡಿದ ಅನ್ಯಾಯ ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಏನು ಆಗಿಲ್ಲ ಅನ್ನುವಂತೆ ರೀತಿಯಲ್ಲಿ ಇರುವುದು ಶೋಚನೀಯ ಸ್ಥಿತಿ ಎಲ್ಲಾ ಕಡೆಯಲ್ಲಿ ಮಂಗಳೂರಿನಲ್ಲಿಯೂ ಇಂತಹದ್ದೇ ಘಟನೆ ನಡೆಯುತ್ತಿದೆ ಏರ್ಪೋರ್ಟ್ ನಲ್ಲೂ ಪಕ್ಕದಲ್ಲಿರುವ ಜಾಗವನ್ನು ವಕ್ಫ್ ಬೋರ್ಡಿಗೆ ಬದಲಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಹೆಸರಿನಲ್ಲಿ ಸಾವಿರಾರು […]Read More
ರಾಜ್ಯದಾದ್ಯಂತ ‘ಹಲಾಲ್ ಮುಕ್ತ ದೀಪಾವಳಿ ಅಭಿಯಾನ’ಕ್ಕೆ ಚಾಲನೆ !ರಾಷ್ಟ್ರರಕ್ಷಣೆಗಾಗಿ ಹಲಾಲ್ ಖರೀದಿಸದಂತೆ ವಿವಿಧೆಡೆ
ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿ ಉದ್ದೇಶಪೂರ್ವಕವಾಗಿ ಹಲಾಲ್ ಉತ್ಪನ್ನಕ್ಕಾಗಿ ಬೇಡಿಕೆ ಕೊಡಲಾಗುತ್ತಿದ್ದು ಆದ್ದರಿಂದ ಹಿಂದೂ ವ್ಯಾಪಾರಿಗಳು ವ್ಯಾಪಾರ ಮಾಡಲು ಹಲಾಲ್ ಪ್ರಮಾಣ ಪತ್ರ ಪಡೆಯಬೇಕಾಗುತ್ತಿದೆ. ಮೊದಲು ಹಲಾಲ್ ಪರಿಕಲ್ಪನೆಯು ಕೇವಲ ಮಾಂಸದ ಉತ್ಪನ್ನಗಳು ಮತ್ತು ಮುಸ್ಲಿಂ ದೇಶಗಳಿಗೆ ರಫ್ತಿಗೆ ಸೀಮಿತವಾಗಿತ್ತು. ಆದರೆ ಈಗ ಭಾರತದಲ್ಲಿ ಅಕ್ಕಿಹಿಟ್ಟು, ಸಕ್ಕರೆ, ಚಾಕಲೇಟ್, ಬಿಸ್ಕೆಟ್ ಇತರೆ ದಿನನಿತ್ಯದ ಉತ್ಪನ್ನ, ಔಷಧಿಗಳು, ಸೌಂದರ್ಯವರ್ಧಕಗಳು, ಹೀಗೆ ವಿವಿಧ ಉತ್ಪನ್ನಗಳು ಹಲಾಲ್ ಪ್ರಮಾಣಿಕೃತ ಆಗತೊಡಗಿದೆ. ಆದ್ದರಿಂದ ಹಿಂದೂಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವಾಗ […]Read More
ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಸೀನಿಯರ್ ’ಕುಸ್ತಿ’ ರಾಷ್ಟ್ರೀಯ ಚಾಂಪಿಯನ್ ಶಿಪ್: ಕರ್ನಾಟಕ ಕುಸ್ತಿ
ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ 2024 ರ ಸೀನಿಯರ್ ’ಕುಸ್ತಿ’ ರಾಷ್ಟ್ರೀಯ ಚಾಂಪಿಯನ್ಶಿಪ್ ಡಿಸೆಂಬರ್ 5 ರಿಂದ 8 ರವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕುಸ್ತಿ ಪಂದ್ಯಾಟವನ್ನು ರಾಜ್ಯದಲ್ಲಿ ಪ್ರಥಮವಾಗಿ ಆಯೋಜನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆ ಮತ್ತು ಮುಂದೆ ನಡೆಯುವ ತಯಾರಿಗೆ ಸಂಬಂಧಿಸಿ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿರುವ ಮತ್ತು ಇಂಡಿಯನ್ ಬೀಚ್ ಕುಸ್ತಿ ಫೆಡರೇಶನ್ ಅಧ್ಯಕ್ಷರಾದ ಪುತ್ತೂರಿನ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಇತಿಹಾಸ […]Read More
ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಇವರ ಪರವಾಗಿ ಮತ ನೀಡುವಂತೆ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ.ಟಿ ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಶಾಸಕರಾದ ಶ್ರೀ ಹರೀಶ್ ಪೂಂಜ, ಲೋಕಸಭಾ ಸದಸ್ಯರಾದ ಕ್ಯಾ.ಬ್ರಜೇಶ್ ಚೌಟ, ಆಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ […]Read More