ಸ.ಉ.ಹಿ ಪ್ರಾಥಮಿಕ ಶಾಲೆ ಕನ್ಯಾಡಿ|| ಕನ್ನಡ ರಾಜ್ಯೋತ್ಸವ ಆಚರಣೆ

Oplus_131072
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II,ಶಾಲೆಯಲ್ಲಿ 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ನಂದಾ ಕೆ ಇವರು ರಾಷ್ಟ್ರಧ್ವಜವನ್ನು ಹಾರಿಸಿ, ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು.ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್ ಮತ್ತು ಸಹ ಶಿಕ್ಷಕರು ಕೂಡ ಭಾಗಿಯಾದರು. ‘ಕರ್ನಾಟಕ ಏಕೀಕರಣದ’ ಕುರಿತು ಶಾಲಾ ವಿದ್ಯಾರ್ಥಿಯಾದ ಜನ್ವಿತ್ ಸವಿಸ್ತಾರವಾಗಿ ಹೇಳಿದನು. ಶಾಲಾ ಮಕ್ಕಳು ಕನ್ನಡ ನಾಡು- ನುಡಿ ಸಂಸ್ಕೃತಿಯನ್ನು ಕನ್ನಡದ ಕವಿಗಳು ರಚಿಸಿದ ಹಾಡುಗಳನ್ನು ಹಾಡುತ್ತಾ ಅಭಿವ್ಯಕ್ತ ಪಡಿಸಿದರು. ಈ ಕಾರ್ಯಕ್ರಮಕ್ಕೆ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ರಮ್ಯಾ, ಸದಸ್ಯರಾದ ಶ್ರೀ ಪುರುಷೋತ್ತಮ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಾದ ನಿನಾದ ಸ್ವಾಗತಿಸಿ,ಅಭಿಲಾಷ್ ವಂದನಾರ್ಪಣೆ ಮಾಡಿದನು, ಕಾರ್ಯಕ್ರಮವನ್ನು ಶೈಭಾ ಮತ್ತು ಯಕ್ಷಿತ್ ನಿರೂಪಿಸಿದರು.