ಮಂಗಳೂರು:ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕ ೭೭ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕೊಡಮಾಡುವ “ಕರ್ನಾಟಕ ಮುಕುಟಮಣಿ”ರಾಜ್ಯಪ್ರಶಸ್ತಿಯನ್ನು ಸಾಹಿತ್ಯಕೇತ್ರದ ಸಾಧನೆಯನ್ನು ಪರಿಗಣಿಸಿ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಆಯ್ಕೆ ಮಾಡಲಾಗಿದೆ.ಇವರು ಹಲವಾರೂ ಪ್ರಶಸ್ತಿಗಳ ಜೊತೆ “ಕರ್ನಾಟಕ ಕನ್ನಡ ಬುಕ್ ಆಫ್ ರೆಕಾರ್ಡ್ “ಹಾಗೂ” ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್” ನ ಪುಟದಲ್ಲಿ ಹೆಸರನ್ನು ದಾಖಲಿಸಿರುತ್ತಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವೃತ್ತಿ ಮಾರ್ಗದರ್ಶಿ ಕಾರ್ಯಾಗಾರ
ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವೃತ್ತಿ ಮಾರ್ಗದರ್ಶಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಯುತ ಸುನಿಲ್ ಪಿಜೆ ಉಪನ್ಯಾಸಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು, ಧರ್ಮಸ್ಥಳ ಅವರು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಬೇಕಾದ ತಯಾರಿ ಹೇಗಿರಬೇಕು ಯಾವ್ಯಾವ ಕೋರ್ಸುಗಳಿಗೆ ಹೋದರೆ ಯಾವ ಯಾವ ವೃತ್ತಿ ಲಭಿಸುತ್ತದೆ, ಸರಕಾರಿ ಹುದ್ದೆಗಳನ್ನು ಪಡೆಯಲು ಹೇಗೆ ತಯಾರಿ ನಡೆಸಬೇಕು ಯಾವ ಯಾವ ಪರೀಕ್ಷೆಗಳನ್ನು ಎದುರಿಸಬೇಕು ಯಾವೆಲ್ಲ ಅರ್ಹತೆಗಳನ್ನು ಪಡೆಯಬೇಕು ಎಂಬಿತ್ಯಾದಿ ವಿಚಾರಗಳ […]Read More
ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ವೇಷ ಧರಿಸಿ ನಿಧಿ ಸಂಗ್ರಹಿಸಿದ ಎಸ್ ಡಿಎಂಸಿ ಸದಸ್ಯರು
ಬಂಟ್ವಾಳ: ದೇವಸ್ಯ ಮೂಡೂರು ಎಂಬಲ್ಲಿರುವ ಸ.ಹಿ.ಪ್ರಾ ಶಾಲೆಯ ಅಭಿವೃದ್ದಿಗಾಗಿ ಶಾಲಾಭಿವೃದ್ದಿ ಸಮಿತಿಯ ಸದಸ್ಯರು ನವರಾತ್ರಿಯ ಈ ಸಮಯದಲ್ಲಿ ವೇಷ ಧರಿಸಿ ಭವತಿ ಭಿಕ್ಷಾಂದೇಹಿ ಎಂದು ನಿಧಿ ಸಂಗ್ರಹಿಸಲು ಮುಂದಾಗಿ ಗಮನ ಸೆಳೆದಿದ್ದಾರೆ. 70 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಶಾಲೆಯನ್ನು ಉಳಿಸಿ ಬೆಳೆಸಬೇಕು ಮತ್ತು ಬೆಳಗಿಸಬೇಕು ಎಂದು ಧ್ಯೇಯ ತೊಟ್ಟು ಶಾಲಾಭಿವೃದ್ದಿ ಸದಸ್ಯರು , ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಊರಿನ ವಿದ್ಯಾಭಿಮಾನಿಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆRead More
ಬೆಳ್ತಂಗಡಿ; ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆಹಚ್ಚಿದ ಬೆಳ್ತಂಗಡಿ ಪೊಲೀಸರು ಎರಡು ಪಿಕಪ್ ವಾಹನಗಳನ್ನು ಹಾಗೂ ಐದು ದನಗಳನ್ನು ವಶಪಡಿಸಿಕೊಂಡು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು ಚಿಬಿದ್ರೆ ಗ್ರಾಮದ ಪೆರಿಯಡ್ಕ ನಿವಾಸಿ ಯತೀಂದ್ರ(24), ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ(30), ಚಾರ್ಮಾಡಿ ಗ್ರಾಮದ ಉಸ್ಮಾನ್ ( 36) ಮತ್ತು ಚಿಬಿದ್ರೆ ಗ್ರಾಮದ ಆರಿಫ್ (27) ಎಂಬವರಾಗಿದ್ದಾರೆ.ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ದಿಡುಪೆ ರಸ್ತೆಯಲ್ಲಿ ಗುರುವಾರ ರಾತ್ರಿ ವೇಳೆ ಅಕ್ರಮವಾಗಿ […]Read More
ಅಕ್ಟೋಬರ್ 2 ಮಹಾತ್ಮ ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಪ್ರಾಥಮಿಕ ಆರೋಗ್ಯ ಕೇಂದ್ರಇಂದಬೆಟ್ಟು ವಿನಲ್ಲಿ ಆರಂಭಗೊಂಡು ಇಂದಬೆಟ್ಟು ಬಸ್ ನಿಲ್ದಾಣ ಪರಿಸರದ ಮೂಲಕ ಗ್ರಾಮ ಪಂಚಾಯತ್ ಕಚೇರಿ ವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮದ ಯುವ ಸಂಘಟನೆ ನವ ಭಾರತ್ ಗೆಳೆಯರ ಬಳಗ “ರಿ” ಕಲ್ಲಾಜೆ ಇಂದಬೆಟ್ಟು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಸುಧರ್ಮ ಆಟೋ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಸಮೃದ್ಧಿ ಸಂಜೀವಿನಿ ಸಂಘದ ಸದಸ್ಯರು, […]Read More
ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ಮಂದಿಯ ಬದುಕಿನ ಕತ್ತಲೆ ದೂರವಾಗಿದೆ. ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಡಿ ವೀರೇಂದ್ರ ಹೆಗ್ಗಡೆಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ ಎಂದುಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿ ಹರೀಶ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಸಹಯೋಗದೊಂದಿಗೆ ಅ.2 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿದ ಗಾಂಧಿಸ್ಮೃತಿ ಮತ್ತು ನವಜೀವನ […]Read More