ಬೆಳ್ತಂಗಡಿ(ನ.19) : ಆಭರಣ ಜುವೆಲ್ಲರ್ಸ್ ನ ಪ್ರಿಮಾಯ್ಸಸ್ ನಲ್ಲಿ ಯೋಗೀಶ್ ಆರ್ ಬಿಢೆ ತನ್ನ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಜೊತೆಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ.10,000 ಮೊತ್ತವನ್ನು ನೀಡಿ ತನ್ನ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಸೇವಾಭಾರತಿ ಸಂಸ್ಥೆಯ ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ ಇದನ್ನು ಸ್ವೀಕರಿಸಿ ಸಂಸ್ಥೆಯ ಪರವಾಗಿ ಶುಭಹಾರೈಸಿ, ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಧರ್ಮಪತ್ನಿ ರಶ್ಮಿ ಯೋಗೀಶ್ ಬಿಢೆ, ದಕ್ಷಿಣ ಕನ್ನಡ […]
ರಾಷ್ಟ್ರೀಯ ತುಳು ಗುಡಿಗಾರರ ಸಂಘ(ರಿ) ದಕ್ಷಿಣ ಕನ್ನಡ ಜಿಲ್ಲೆ- ಉಡುಪಿ ಜಿಲ್ಲೆ ಕಟ್ಟದ ಬೈಲು ಧರ್ಮಸ್ಥಳ ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮವು ಶ್ರೀ ರಾಮ ಭಜನಾ ಮಂದಿರ ಕಟ್ಟದಬೈಲು ವಿನಲ್ಲಿ ನ.17 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ತುಳು ಗುಡಿಗಾರ್ ಸಂಘ(ರಿ) ಅಧ್ಯಕ್ಷರು ರವೀಂದ್ರ ಗುಡಿಗಾರ್ ವಹಿಸಿದ್ದರು. ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಉದ್ಘಾಟನೆಗೊಂಡಿತು.ಮುಖ್ಯಾತಿಥಿಗಳಾಗಿ ರಾಷ್ಟ್ರೀಯ ತುಳು ಗುಡಿಗಾರ್ ಸಂಘ(ರಿ) ಉಪಾಧ್ಯಕ್ಷರಾದ ಮಂಜುನಾಥ ಗುಡಿಗಾರ್ ಕಟ್ಟದಬೈಲು, ಶಾಂತಿರಾಜ್ ಗುಡಿಗಾರ್ ಅಳದಂಗಡಿ, […]Read More
ಬೆಳ್ತಂಗಡಿ – ಕಾರ್ತಿಕ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ದೀಪವನ್ನು ಬೆಳಗಿಸಿ ಹಿಂದೂಗಳು ಈ ವರ್ಷವೂ ದೀಪೋತ್ಸವ ಆಚರಿಸಿದರು. ದೇಶಾದ್ಯಂತ ದೇವಸ್ಥಾನಗಳಲ್ಲಿ ಸಾಲುದೀಪಗಳನ್ನು ಬೆಳಗಿಸಲಾಯಿತು. ಈ ವರ್ಷದ ದೀಪೋತ್ಸವದ ವಿಶೇಷತೆ ಎಂದರೆ ಹಿಂದೂ ರಾಷ್ಟ್ರದ ಸಂಕಲ್ಪದ ಉದ್ದೇಶದಿಂದ ‘ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ’ ಈ ಉಪಕ್ರಮದ ಮೂಲಕ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ಜನಜಾಗೃತಿ ಮೂಡಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಪಟ್ರಮೆ, ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆ […]Read More
ಬೆಳ್ತಂಗಡಿ: ದ. ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ರ ಪುರಸ್ಕಾರದ ದಯಾ ವಿಶೇಷ ಶಾಲೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಬೆಳ್ತಂಗಡಿಯ ಮುಳಿಯ ಜುವೆಲ್ಲರ್ಸ್ ರವರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ದಯಾ ವಿಶೇಷ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.2) ಶ್ರೀ ಜಯಾನಂದ ಲೈಲಾ ಕಳೆದ 34ವರ್ಷಗಳಿಂದ ನಿರಂತರವಾಗಿ ಗೃಹರಕ್ಷಕ ದಳದಲ್ಲಿ ಹಳ ಸುದೀರ್ಘ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ನಿರಂತರ ತೊಡಗಿಸಿಕೊಂಡ ತೊಡಗಿಸಿಕೊಂಡ ಸಾಧನೆಗಾಗಿ 3)ಶ್ರೀ ಬೆಳಾಲು ಲಕ್ಷ್ಮಣ ಗೌಡಸ್ವ ಆಸಕ್ತಿಯಿಂದ ಕಿರಿಯ […]Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗಿನ ಸಮಯದಲ್ಲಿ ವಿದ್ಯಾರ್ಥಿಗಳು ಪಂಡಿತ್ ಜವಹರ್ ಲಾಲ್ ನೆಹರು ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.ತದನಂತರ ಶಾಲಾ ಪ್ರಾರ್ಥನಾ ಸಮಯದಲ್ಲಿ ಸ್ವಾಗತ ಗೀತೆಯೊಂದಿಗೆ ಶಿಕ್ಷಕರು ವಿದ್ಯಾರ್ಥಿಗಳನ್ನು ಹರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಶುಭ ಹಾರೈಸಿದರು. ತದನಂತರ ವಿದ್ಯಾರ್ಥಿಗಳಿಗೆ ಅವರವರ ತರಗತಿಯಲ್ಲಿ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ […]Read More
ಬೆಳ್ತಂಗಡಿ : ಕಸ್ತೂರಿ ರಂಗನ್ ವರದಿಯಿಂದ ತಾಲೂಕಿನ ಹಲವಾರು ಗ್ರಾಮದ ರೈತರಿಗೆ ಹಾಗುವ ತೊಂದರೆಗಳ ವಿರುದ್ಧ ವರದಿ ಸಮಸ್ಯೆ ಇರುವ ಗ್ರಾಮಗಳಲ್ಲಿ ಹಾಗೂ ತಾಲೂಕು ಮಟ್ಟದ ಪ್ರತಿಭಟನೆ ಯಶಸ್ವಿಯಾಗಿ ನಡೆದಿದೆ ನಾಳೆ ನವೆಂಬರ್ 15 ರಂದು ಗುಂಡ್ಯದಲ್ಲಿ ನಡೆಯುವ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆಗೆ ಬಿಜೆಪಿ ರೈತ ಮೋರ್ಚಾ ತಂಡದ ಸಂಪೂರ್ಣ ಬೆಂಬಲವಿದೆಯೆಂದು ಬೆಳ್ತಂಗಡಿ ಮಂಡಲ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿವಿನ್ ಚಾರ್ಮಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.Read More
ಕ್ರೀಡಾಕೂಟವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪಿ. ಲಕ್ಷ್ಮಣಗೌಡ ಇವರು ಉದ್ಘಾಟಿಸಿ ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಮೂಡುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯರಾದ ಶ್ರೀ ಜಯರಾಮ ಮಯ್ಯ ಇವರು ಮಾತನಾಡಿ ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕವಾಗಿದೆ ಎಂದು ತಿಳಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಭವಾನಿ ಮಾರ್ಪಾಲು ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ […]Read More
ಬೆಳಾಲು :ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 14 ನೆ ವರ್ಷದ ಕೆಸರುಗದ್ದೆ ಕ್ರೀಡಾಕೂಟವು ನ 10 ರಂದು ಅನಂತೋಡಿಯ ಗದ್ದೆಯಲ್ಲಿ ಜರಗಿತು.ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಭಜನೆಯ ಮೆರವಣಿಗೆಯ ಮೂಲಕ ಸಾಗಿ ವೇದಿಕೆಯಲ್ಲಿ ದೀಪ ಪ್ರಜ್ವಲನೆ ಮೂಲಕ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ದೇವಳದ ಅರ್ಚಕರಾದ ಸಂಪತ್ ಕುಮಾರ್ ಇವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ಅನಂತೇಶ್ವರ ಫ್ರೆಂಡ್ಸ್ ಇದರ ಗೌರವಾಧ್ಯಕ್ಷರಾದ ಸುಮಿತ್ ಆಚಾರ್ಯ ಇವರು ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ […]Read More
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II,ಶಾಲೆಯಲ್ಲಿ 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ನಂದಾ ಕೆ ಇವರು ರಾಷ್ಟ್ರಧ್ವಜವನ್ನು ಹಾರಿಸಿ, ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು.ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್ ಮತ್ತು ಸಹ ಶಿಕ್ಷಕರು ಕೂಡ ಭಾಗಿಯಾದರು. ‘ಕರ್ನಾಟಕ ಏಕೀಕರಣದ’ ಕುರಿತು ಶಾಲಾ ವಿದ್ಯಾರ್ಥಿಯಾದ ಜನ್ವಿತ್ ಸವಿಸ್ತಾರವಾಗಿ ಹೇಳಿದನು. ಶಾಲಾ ಮಕ್ಕಳು ಕನ್ನಡ ನಾಡು- […]Read More
ಲಕ್ಷ್ಮೀಪೂಜೆಯ ದಿನದಂದು ಎಲ್ಲಾ ದೇವಸ್ಥಾನಗಳಲ್ಲಿ, ಅಂಗಡಿಗಳಲ್ಲಿ ಹಾಗೆಯೇ ಮನೆ-ಮನೆಗಳಲ್ಲಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ. ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ […]Read More