ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.) ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಶ್ರೀ ಧ.ಮಂ. ಸ್ಪೋಟ್ಸ್ ಕ್ಲಬ್ ಉಜಿರೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ (ರಿ.) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಆರಕ್ಷಕ ಠಾಣಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಸುಮಾರು 650 ಮಂದಿಯಿಂದ‘ವಂದೇ ಮಾತರಂ’ ನನ್ನ ಸೇವೆ ದೇಶಕ್ಕಾಗಿ.. ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ ಮಾ.16 ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಆರಂಭಗೊಂಡಿತು. […]
ಬಂದಾರು: ಎಸ್ಡಿ. ಎಮ್. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸರಕಾರಿ ಉನ್ನತಿಕರಿಸೀದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ, ಅಮೃತ ಮಹೋತ್ಸವ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘ ಮೈರೋಳ್ತಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಪ್ರಗತಿಬಂಧು ಒಕ್ಕೂಟ ಮೈರೋಳ್ತಡ್ಕ ಇದರ ಸಹಯೋಗದಲ್ಲಿ ಮಾರ್ಚ್ 16 ಭಾನುವಾರ ದಂದು ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಮಾಜಿ ಜಿಲ್ಲಾ ಪಂಚಾಯತ್ […]Read More
ಮಹಿಳಾ ಶಕ್ತಿ ದೇಶದ ಶಕ್ತಿ, ಮಹಿಳೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಬೆಳೆಸಿ ಮುಂದೆ ಬಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, ಎಂದು ಮಾ.12 ರಂದು ಸಾಂತೋಮ್ ಟವರ್ ಬೆಳ್ತಂಗಡಿಯಲ್ಲಿ ಆಯೋಜಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಅಧ್ಯಕ್ಷರು ಆಗಿರುವ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಇವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ವಲ್ಸಮ್ಮ […]Read More
ಬಂದಾರು : ಬಂದಾರು ಗ್ರಾಮ ಪಂಚಾಯತ್ ನಲ್ಲಿ ಕಳೆದ 22 ವರ್ಷ 09 ತಿಂಗಳು ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದ ಸಿಬ್ಬಂದಿ ಮೋಹನ್ ಬಂಗೇರ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷರಾದ ಪುಷ್ಪಾವತಿ ಬರಮೇಲು, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಗ್ರಾಮ ಆಡಳಿತ ಅಧಿಕಾರಿ ರಫಿಕ್ ಮುಲ್ಲಾ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.Read More
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ “ಅನಿಮಲ್ ಫಾರ್ಮ್”ಎಂಬ ಚಲನ ಚಿತ್ರ ಪ್ರದರ್ಶನ
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷೆಯ ವಿಭಾಗದಿಂದ ಜಾರ್ಜ್ ಒರ್ವೆಲ್ ಅವರ ಕಾದಂಬರಿ ,ಆಧಾರಿತ “ಅನಿಮಲ್ ಫಾರ್ಮ್”ಎಂಬ ಚಲನ ಚಿತ್ರ ಪ್ರದರ್ಶನ ದಿನಾಂಕ 28 ಫೆಬ್ರವರಿ 2025 ರಂದು ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ| ಸವಿತಾ ಹಾಗೂ ವಾಣಿಜ್ಯ ಶಾಸ್ತ್ರ ಮುಖ್ಯಸ್ಥರಾದ ಬಿ ಎ ಶಮಿಯುಲ್ಲ ವೇದಿಕೆಯಲ್ಲಿ ಇದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆಂಗ್ಲ ಭಾಷಾ ಉಪನ್ಯಾಸಕರಾದ ಸುಜಿತ್ ಸ್ವಾಗತಿಸಿದರು.Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಗೆ ಭಾರತ್ ಸ್ಕೌಟ್ಸ್ ಮತ್ತು
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಕಬ್ಸ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಮಟ್ಟದ ಗೋಲ್ಡನ್ ಆ್ಯರೋ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿದ್ದು , ರಾಷ್ಟ್ರೀಯ ಮಟ್ಟದ ಗೋಲ್ಡನ್ ಆ್ಯರೋ ಪ್ರಶಸ್ತಿ ಪತ್ರ ಗಳನ್ನು ಪಡೆದಿರುತ್ತಾರೆ. ಇವರಿಗೆ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಸಲಹೆಯ ಮೇರೆಗೆ, ಭಾರತ್ ಸ್ಕೌಟ್ಸ್ ಮತ್ತು […]Read More
ಬೆಳ್ತಂಗಡಿ: ನವೀನತೆ ಹಾಗೂ ಪರಿಶುದ್ಧತೆ ಆಭರಣದ ಮೂಲಕ ಮನೆ ಮಾತಾಗಿರುವ ಮುಳಿಯ ಜ್ಯುವೆಲ್ಸ್ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಪೆ.15 ರಿಂದ 28 ರವರೆಗೆ Gem stone ಉತ್ಸವ ಪ್ರಾರಂಭಗೊಂಡಿದೆ. ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯದಲಿ 13 ದಿನಗಳ ಕಾಲ gem Stone ಉತ್ಸವದಲ್ಲಿ. ಒಂಬತ್ತು ವಿಭಿನ್ನ ರತ್ನದ ಕಲ್ಲುಗಳನ್ನು ಒಳಗೊಂಡಿರುವ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ ಮತ್ತು ವೈಢೂರ್ಯ ಗಳಾದ ನವರತ್ನ ಆಭರಣಗಳ ಉತ್ಸವದ ಮೂಲಕ ಗ್ರಾಹಕರಿಗೆ […]Read More
ಬೆಳ್ತಂಗಡಿ: ಕಾನ್ಶಿರಾಮ್, ಪೆರಿಯಾರ್, ಅಂಬೇಡ್ಕರ್ ಅವರ ಆಶಯಗಳನ್ನೊತ್ತ ‘ಸಮ ಸಮಾಜದ’ ಕಲ್ಪನೆಯ ಪರ್ಯಾಯ ರಾಜಕೀಯ ಚಿಂತನೆ, ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಟಕ್ಕಾಗಿ ಪ್ರತ್ಯೇಕವಾದ ಒಂದು ರಾಜಕೀಯ ಶಕ್ತಿಯ ಅನಿವಾರ್ಯತೆ ಇದೆ ಎಂದು ಚಲನಚಿತ್ರ ನಟ, ಅಂಬೇಡ್ಕರ್ ವಾದಿ, ಚಳವಳಿಗಾರ ಚೇತನ್ ಅಹಿಂಸಾ ಪ್ರತಿಪಾದಿಸಿದರು.ರಾಜ್ಯಾದ್ಯಂತ ಸಮಾನ ಮನಸ್ಕರ ಜೊತೆ ಸಂವಾದ ಹಾಗೂ ಸುತ್ತು ಚರ್ಚೆ ನಡೆಸುತ್ತಿರುವ ಅವರು ಫೆ.17 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಸಂಘ ಸಂಸ್ಥೆ ಹಾಗೂ ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಿದರು. ಸಂವಾದಕ್ಕೂ […]Read More
ಫೆ.14 ರಂದು ಅದ್ದೂರಿಯಾಗಿ ಸಂಪನ್ನಗೊಂಡ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ:ದಾಖಲೆಯನ್ನೇ
ಆರಿಕೋಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಅದ್ದೂರಿಯಾಗಿ ನಡೆದ ವಾರ್ಷಿಕ ಉತ್ಸವವು ವಿವಿಧ ಸಾಂಸ್ಕೃತಿಕ, ಧಾರ್ಮಿಕ, ನೇಮೋತ್ಸವದ ಮೂಲಕ ಯಶಸ್ವಿಗೊಂಡು ಫೆ.14 ರಂದು ಸಂಪನ್ನಗೊಂಡಿತು. ಫೆ.10-14 ರವರೆಗೆ ಜಗನ್ಮಾತೆ, ಆದಿಶಕ್ತಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿವಿಧ ಪೂಜಾ ಪುನಸ್ಕಾರಗಳು ಭಕ್ತಿಯಿಂದ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿಯವರ ನೇತೃತ್ವದಲ್ಲಿ ಜರುಗಿತು. ಅದರಲ್ಲೂ ಫೆ.14 ರಂದು ನಡೆದ ಅಗೆಲು ಸೇವೆಯಲ್ಲಿ ದಾಖಲೆಯನ್ನು ಮೀರಿಸಿದೆ ಭಕ್ತಸಾಗರ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ, ಚಲನಚಿತ್ರ ನಟ , ರಾಜಕೀಯ ವ್ಯಕ್ತಿಗಳು […]Read More
ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ತಾಲೂಕು ಮಟ್ಟದ ಮಂದಿರ ಅಧಿವೇಶನ:ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ
ಬೆಳ್ತಂಗಡಿ : ಭಾರತಾದ್ಯಂತ ಮಂದಿರ ಮಹಾಸಂಘದ ಕಾರ್ಯಕ್ಕೆ ಹಿಂದೂಗಳ ಅತ್ಯುತ್ತಮ ಬೆಂಬಲದಿಂದ ಸಿಕ್ಕಿದ ಯಶಸನ್ನು ಹೇಳಿದರು. ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ ಕೈ ಜೋಡಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇವರು ಕರೆ ನೀಡಿದರು. ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ‘ ತಾಲೂಕು ಮಟ್ಟದ ಮಂದಿರ ಅಧಿವೇಶನ’ವು ಶ್ರೀ ಸುಬ್ರಹ್ಮಣ್ಯ ಸ್ಥಾಣಿಕ ಬ್ರಾಹ್ಮಣ ಸಭಾಭವನ, ಲಾಯಿಲ ಬೆಳ್ತಂಗಡಿಯಲ್ಲಿ ಇಂದು […]Read More