ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಯತೀಶ್ ಆರ್ವಾರ ಅವರನ್ನು ನೇಮಕ ಮಾಡಲಾಗಿದೆ. ಬೆಳ್ತಂಗಡಿ ಬಿಜೆಪಿ ಪ್ರಭಾರಿಯಾಗಿದ್ದ ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ನೂತನ ಪ್ರಭಾರಿ ಜವಾಬ್ದಾರಿಯನ್ನು ಯತೀಶ್ ಆರ್ವಾರರವರಿಗೆ ವಹಿಸಲಾಗಿದೆ. ಮೂಲತಃ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್ವಾರ ನಿವಾಸಿಯಾಗಿರುವ ಯತೀಶ್ ಅವರು ಬಿ.ಎ. ಎಲ್ಎಲ್ಬಿ ಪದವೀಧರರಾಗಿದ್ದಾರೆ. ಇವರು ರಾಜ್ಯ ಬಿಜೆಪಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಮನಗರ ಮತ್ತು ಕೋಲಾರ […]
ಬೆಳ್ತಂಗಡಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ಸತೀಶ್ ಕಾಶಿಪಟ್ನ, ಪ್ರವೀಣ್ ವಿಜಿ ನಡ, ನಗರ ಬ್ಲಾಕ್ ಕಾಂಗ್ರೆಸ್ ಗೆ ಕೆ ಸಾಹುಲ್ ಹಮೀದ್ ಮತ್ತು ಪ್ರಶಾಂತ್ ವೇಗಸ್ ರವನ್ನು ನೇಮಕಮಾಡಿ ಆದೇಶಿಸಿದ್ದಾರೆ. ಮಾಜಿ ಶಾಸಕ ಕೆ ವಸಂತ ಬಂಗೇರ, ಗಂಗಾಧರ ಗೌಡ, ರಕ್ಷಿತ್ ಶಿವರಾಂ , ಬ್ಲಾಕ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಗೌಡರವರವ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ.Read More
ಮೂಡಬಿದ್ರೆ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್.ಡಿ.ಪಿ.ಆರ್. ತಾಲೂಕು ಘಟಕ ಮೂಡುಬಿದ್ರೆ. ಇದರ ಸಭೆಯು ಏ.8 ರಂದು ಸಂಘದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಮ ಇವರ ಅಧ್ಯಕ್ಷತೆಯಲ್ಲಿ ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಿತು. ಮೂಡಬಿದ್ರೆ ತಾಲೂಕು ಘಟಕದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಮಹಿಳಾ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಅನುಭವ ಹೊಂದಿರುವ ಶ್ರೀಮತಿ ನಯನ ದರೆಗುಡ್ಡೆ ಗ್ರಾಮ ಪಂಚಾಯತ್ ಇವರನ್ನು ಆಯ್ಕೆ ಮಾಡಲಾಯಿತು. ಸಂಘದ ಪ್ರಧಾನಕಾರ್ಯದರ್ಶಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಹೋರಾಟ ಸಮಿತಿಯ […]Read More
ನವ ಭಾರತ್ ಗೆಳೆಯರ ಬಳಗ’ರಿ’ಕಲ್ಲಾಜೆ-ಇಂದಬೆಟ್ಟು ಇದರ ವಾರ್ಷಿಕ ಮಹಾಸಭೆ ಹಾಗೂ 2023-2024 ಸಾಲಿನ
ನವ ಭಾರತ್ ಗೆಳೆಯರ ಬಳಗ’ರಿ’ಕಲ್ಲಾಜೆ-ಇಂದಬೆಟ್ಟು ಇದರ ವಾರ್ಷಿಕ ಮಹಾಸಭೆ ಹಾಗೂ 2023-2024 *ನೂತನ ಪದಾಧಿಕಾರಿಗಳ ಆಯ್ಕೆಯು ಏ.16 ರಂದು ಸಂಘದ ಗೌರವಾಧ್ಯಕ್ಷ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಅಧ್ಯಕ್ಷರಾದ ನಿತೇಶ್ ಕಡಿತ್ಯಾರು ಅಧ್ಯಕ್ಷತೆಯಲ್ಲಿ, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಕಲ್ಲಾಜೆ ಶಾಲಾ ವಠಾರದಲ್ಲಿ ನಡೆಯಿತು. ಮಹಾ ಸಭೆಯ ವರದಿಯನ್ನು ಕಾರ್ಯದರ್ಶಿ ಅಕ್ಷೀತ್ ಕಲ್ಲಾಜೆ ಮಂಡಿಸಿದರು, ನಂತರ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿಅರುಣ್ ಕುಮಾರ್ ಕೆಳಗಿನ ಕಲ್ಲಾಜೆ,ನೂತನ […]Read More
ಕರಾಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಜನಜಾಗೃತಿ ವೇದಿಕೆ ಕಣಿಯೂರು ವಲಯದ ನೂತನ ವಲಯ ಅಧ್ಯಕ್ಷರ ಆಯ್ಕೆ ಸಭೆಯು ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಏ. 3ರಂದು ನಡೆಯಿತು. ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ್ ರವರು ಜನಜಾಗೃತಿ ವೇದಿಕೆಯ ಹುಟ್ಟು ಬೆಳವಣಿಗೆ ನಡೆದು ಬಂದ ದಾರಿ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ದ. ಕ ಜಿಲ್ಲಾ ನಿರ್ದೇಶಕರಾದ […]Read More
ಬೆಳ್ತಂಗಡಿ: ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ವರ್ಗಾವಣೆಯಾದ ಬಳಿಕ ಬೆಳ್ತಂಗಡಿ ನೂತನ ತಹಶೀಲ್ದಾರ್ ಹುದ್ದೆಗೆ ಸುರೇಶ್ ಕುಮಾರ್ ಟಿಎಸ್ ಅವರನ್ನು ಬೆಳ್ತಂಗಡಿ ತಹಶೀಲ್ದಾರ್ ಆಗಿ ರಾಜ್ಯ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್ ಸುಶೀಲ ಅವರು ಆದೇಶ ಹೊರಡಿಸಿದ್ದಾರೆ. ಇವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ತಹಶೀಲ್ದಾರ್ ಆಗಿದ್ದು, ಇದೀಗ ಸುರೇಶ್ ಕುಮಾರ್ ಟಿ.ಎಸ್ ಅವರನ್ನು ವರ್ಗಾವಣೆ ಮಾಡಿದ್ದಾರೆ.Read More
ವಾಣಿ ಪದವಿ ಪೂರ್ವ ಕಾಲೇಜಿನ ಸಾತ್ವಿಕ್ ಎಲ್ ಕೆ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ
ಬೆಳ್ತಂಗಡಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇವರು ಜನವರಿಯಲ್ಲಿ ನಡೆಸಿದ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ಎಲ್ ಕೆ ಇವರು 98.11 ಪರ್ಸೆಂಟೈಲ್ ಅಂಕಗಳಿಸಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಈ ಸಾಧನೆಗೆ ವಾಣಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ , ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದ ಹರ್ಷ ವ್ಯಕ್ತ ಪಡಿಸಿದರು.Read More
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹೃಷಿಕೇಶ್ ಉಜಿರೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಶೆಟ್ಟಿ ಏಣಿಂಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಜ.7ರಂದು ನಡೆದ. ಸಂಘದ ಮಹಾಸಭೆ ಯಲ್ಲಿ 2023ನೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅರವಿಂದ ಹೆಬ್ಬಾರ್, ಜೊತೆ ಕಾರ್ಯದರ್ಶಿಯಾಗಿ ಪದ್ಮನಾಭ ಕುಲಾಲ್, ಕೋಶಾಧಿಕಾರಿಯಾಗಿ ತುಕಾರಾಮ್ ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ಆರ್.ಎನ್ ಪೂವಣಿ ಕಾಯ೯ನಿವ೯ಹಿಸಿದ್ದರು.Read More
ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿಇಳಂತಿಲ ಗ್ರಾಮದ ಅನ್ವಿ ಆರ್ ಆಚಾರ್ಯ ಪ್ರಥಮ ಸ್ಥಾನ: ಅಂತರಾಷ್ಟ್ರೀಯ
ಇಳಂತಿಲ: ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಶಾಲೆಯ 7 ನೇ ತರಗತಿ ವಿದ್ಯಾರ್ಥಿಗಳು ಪ್ರಾಥಮ ಸ್ಥಾನ ಪಡೆದು ಇತಿಹಾಸವನ್ನು ಸೃಷ್ಠಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಅನ್ವಿ ಆರ್ ಆಚಾರ್ಯ ಉತ್ತಮ ಪ್ರದರ್ಶನ ನೀಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದಬಾರಿ ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ ತ್ರೋಬಾಲ್ ಪಂದ್ಯಾದಲ್ಲಿ ಇಂದ್ರ ಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದರು.Read More
ಮರೋಡಿ: ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾದ ಕಂಬಳ ಕ್ಷೇತ್ರದ ಸಾಧಕ ಮರೋಡಿ ಗ್ರಾಮದ
ಮರೋಡಿ: ಕರ್ನಾಟಕ ಸರಕಾರದ 2022ನೇ ಸಾಲಿನ ಯುವ ಸಬಲೀಕರಣ ಇಲಾಖೆಯಿಂದ ನೀಡುವ ಕ್ರೀಡಾ ರತ್ನ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕಂಬಳ ಓಟಗಾರ ಶ್ರೀಧರ ಕುಲಾಲ್ ಆಯ್ಕೆಯಾಗಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆಯನ್ನು ಮಾಡಿ ಯಶಸ್ವಿ ಕ್ರೀಡಾಪಟುವಾಗಿ ಹೊರ ಹೊಮ್ಮಿದ ಇವರನ್ನು ಸರ್ಕಾರ ಗುರುತಿಸಿ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.Read More