ದಿಡುಪೆ: ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ. 14 ವರ್ಷದ ಶ್ರೀಷಾ ಮೃತ ಬಾಲಕ. ಈತ 8ನೇ ತರಗತಿ ವಿದ್ಯಾರ್ಥಿ. ಭಾನುವಾರ ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿ ಉಯ್ಯಾಲೆ ಆಟವಾಡುತ್ತಿದ್ದ. ಮನೆಯವರು ಬಂದು ನೋಡಿದಾಗ ಉಯ್ಯಾಲೆ ಆಟವಾಡುತ್ತಿದ್ದ ವೇಳೆ ಬಾಲಕ ನೆಲದಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೊತ್ತಿಗಾಗಲೇ ಬಾಲಕ ಇಹಲೋಕ ತ್ಯಜಿಸಿದ್ದಾನೆ.
ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮದಿಮಾಲ್ ಕಟ್ಟೆ ಎಂಬಲ್ಲಿ ಇರುವಂತಹ ಅಂಗನವಾಡಿ ಕೇಂದ್ರದಲ್ಲಿ ಒಂದು ಶೌಚಾಲಯವಿದ್ದು ಈ ಶೌಚಾಲಯದ ಹೊರಭಾಗದಲ್ಲಿ ಇರುವಂತಹ ಪಿಟ್ (ಗುಂಡಿ) ಸಂಪೂರ್ಣವಾಗಿ ಜಖಂ ಗೊಂಡು ಕಸ ಕಡ್ಡಿಗಳಿಂದ ತುಂಬಿ ಅದರ ಮೇಲೆ ಮಣ್ಣು ಬಿದ್ದು ಗುಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಈ ಕಾರಣಕ್ಕಾಗಿ ಪುಟಾಣಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದಂತಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.Read More
ವಿಟ್ಲ: ಕೋಳಿ ಸಾಗಿಸುತ್ತಿದ್ದ ಪಿಕಪ್ ವೊಂದು ರಸ್ತೆಯ ಕೆಳಗಿದ್ದ ಹಂಚಿನ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಂದು ಭಾಗ ಸಂಪೂರ್ಣ ಹಾನಿಯಾಗಿದ್ದು ಮನೆಯ ಒಳಗೆ ಮಹಿಳೆಯೋರ್ವರು ಸಿಲುಕಿಕೊಂಡ ಘಟನೆ ಇಂದು ಪರಿಯಲ್ತಡ್ಕ- ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ. ಪರಿಣಾಮ ನೂರಾರು ಕೋಳಿಗಳು ಸತ್ತುಬಿದ್ದಿವೆ. ಅಪಘಾತ ನಡೆದ ವೇಳೆ ಮಹಿಳೆ ಮನೆಯೊಳಗೆ ಮಲಗಿದ್ದು ಗಂಭೀರ ಗಾಯವಾಗಿದೆ ಎನ್ನಲಾಗಿದೆ.Read More
ವೇಣೂರು: ವೈದ್ಯರ ನಿರ್ಲಕ್ಷ್ಯಕ್ಕೆ ಮೆದುಳು ನಿಷ್ಕ್ರಿಯಗೊಂಡು ಗರ್ಭಿಣಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ. ಸಾವನ್ನಪ್ಪಿರುವ ಗರ್ಭಿಣಿ ವೇಣೂರಿನ ಶಿಲ್ಪಾ ಎಂದು ತಿಳಿದುಬಂದಿದೆ. ಈಕೆ ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಜುಲೈ.2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಯ ಮೂಲಕ ಹೆಣ್ಣುಮಗುವನ್ನು ಹೊರತೆಗೆದರೂ ಗರ್ಭಕೋಶದಲ್ಲಿ ಸಮಸ್ಯೆ ಇದೆ ಎಂದು ಹೇಳಿ ಬಳಿಕ ಅದರ ನಿವಾರಣೆಯ ಸಂದರ್ಭ ರಕ್ತಸ್ರಾವವಾಗಿದೆ ಎನ್ನಲಾಗಿದೆ. ರಕ್ತದೊತ್ತಡದ ಏರಿಳಿತದಿಂದ ಸಮಸ್ಯೆ ಉಲ್ಬಣಗೊಂಡು ಮೆದುಳು ನಿಷ್ಕ್ರಿಯಗೊಂಡು ಕೋಮಾಕ್ಕೆ ತಲುಪಿದ್ದರು ಎಂದು ಆರೋಪಿಸಲಾಗಿದೆ.Read More
ಚಾರ್ಮಾಡಿ: ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಭರದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಮಧ್ಯದಲ್ಲೇ ಕಾರುಗಳನ್ನು ನಿಲ್ಲಿಸಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ. ಆ ರಸ್ತೆಯಿಂದಾಗಿ ಸಾಗುವ ಅದೆಷ್ಟೋ ವಾಹನಗಳಿಗೆ ಅಡಚಣೆಯುಂಟಾಗುತ್ತಿದ್ದು, ವಾಹನಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.Read More
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಕೆ ಎಂಬಲ್ಲಿ ನೋಡ ನೋಡುತ್ತಿದ್ದಂತೆ ಬಾವಿಯೊಂದು ಕುಸಿದ ಘಟನೆ ನಡೆದಿದೆ. ಬಪ್ಪಳಿಗೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯ ಬಾವಿ ಸಂಪೂರ್ಣ ವಾಗಿ ಕುಸಿದು ಬಿದ್ದಿದೆ. ಬಾವಿ ಕುಸಿದ ಪರಿಣಾಮ ಮನೆ ಅಪಾಯದಲ್ಲಿದ್ದು ಸುತ್ತಮುತ್ತಲಿನ ಜನ ಆತಂಕದಲ್ಲಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಬೇರೆಡೆಗೆ ಮನೆಯವರನ್ನು ಸ್ಥಳಾಂತರಿಸಿದ್ದು, ತಾತ್ಕಾಲಿಕ ತಡೆ ಹಾಕಿದ್ದಾರೆ.Read More